ಮೈಸೂರು,ಮೇ,20,2026 (www.justkannaa.in): ಇಟಲಿಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಧಾನಿಗೆ ಮೆಲೋಡಿ ಚಾಕೊಲೇಟ್ ನೀಡಿದ ವಿಚಾರವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಮೋದಿಯವರು ಮೋಜು ಮಸ್ತಿಗಾಗಿ ವಿದೇಶಿ ಪ್ರವಾಸಕ್ಕೆ ಹೋಗಿಲ್ಲ ದೇಶದ ಹಿತಾಸಕ್ತಿಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮೋದಿಯವರು ಕೆಲವೊಮ್ಮೆ ರೇಷ್ಮೆ ಸೀರೆ, ರೇಷ್ಮೆ ಪಂಚೆಯಂತಹ ಬೆಲೆಬಾಳುವ ಉಡುಗೊರೆಗಳನ್ನ ಸಾಂಪ್ರದಾಯಿವಾಗಿ ನೀಡುತ್ತಾರೆ. ಆದರೆ ಗಿಫ್ಟ್ ನೀಡೋದನ್ನೂ ಕೆಟ್ಟದಾಗಿ ನೋಡುವ ಕಾಂಗ್ರೆಸ್ ನವರ ಮನಸ್ಥಿತಿ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯಪ್ರಾಚ್ಯದಲ್ಲಿ ಯುದ್ದವನ್ನು ಭಾರತ ಬಯಸಿರಲಿಲ್ಲ.ಆದರೆ ಯುದ್ದರ ಪರಿಣಾಮ ಭಾರತದ ಮೇಲೆ ಆಗಿದೆ. ಹಾಗಾಗಿ. ಪ್ರಧಾನಿ ಮೋದಿ ದೇಶಕ್ಕೆ ಕೆಟ್ಟ ಪರಿಸ್ಥಿತಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದರು.
Key words: Mysore, MLC, CT Ravi, PM Modi
The post ಗಿಫ್ಟ್ ನೀಡೋದನ್ನೂ ಕೆಟ್ಟದಾಗಿ ನೋಡುವ ಕಾಂಗ್ರೆಸ್ ನವರ ಮನಸ್ಥಿತಿ ಹಾಳಾಗಿದೆ- MLC ಸಿ.ಟಿ ರವಿ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





