17
May, 2026

A News 365Times Venture

17
Sunday
May, 2026

A News 365Times Venture

ನುಡಿದಂತೆ ನಡೆದಿರುವುದಕ್ಕೆ ಸಾಧನಾ ಸಮಾವೇಶ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌

Date:

ಬೆಂಗಳೂರು, ಮೇ, 16,2026 (www.justkannada.in):  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ನುಡಿದಂತೆ ನಡೆದಿದೆ. ಅದೇ ಕಾರಣಕ್ಕೆ ಸಾಧನ ಸಮಾವೇಶ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಸಾಧನಾ ಸಮಾವೇಶ ಎನ್ನುವುದು ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕೆ ಎಂದರು.

ಪ್ರತಿಪಕ್ಷಗಳು ಈ ಬಗ್ಗೆ ಯಾವುದೇ ಟೀಕೆಗಳನ್ನು ಮಾಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರವೂ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು.

ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಬಹುತೇಕ ಈಡೇರಿಸಲಾಗಿದೆ. ನಮ್ಮ ಸರ್ಕಾರ ಸಮರ್ಥ ಆಡಳಿತ ನೀಡಿದೆ. ಕಾಂಗ್ರೆಸ್‌ ಎಂದರೆ ನುಡಿದಂತೆ ನಡೆಯುವ ಪಕ್ಷ ಎಂಬುದು ಸಾಬೀತಾಗಿದೆ ಎಂದು ಡಾ. ಪಾಟೀಲ್‌ ತಿಳಿಸಿದರು.

ತುಮಕೂರು ಸಮಾವೇಶದ ಬಳಿಕ ಕೆಲವು ಬದಲಾವಣೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮೂರು ವರ್ಷದ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ ಆಗೋದು ಸಹಜ ಎಂದರು.

ನಮ್ಮ ಹೈಕಮಾಂಡ್‌ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತದೆ. ಗೊಂದಲಗಳು ಯಾವುದೂ ಇಲ್ಲ. ಒಂದು ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ವರಿಷ್ಠರು ಬಗೆಹರಿಸುತ್ತಾರೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಸ್ಪಷ್ಟಪಡಿಸಿದರು.

Key words: Sadhana conference, Minister, Dr. Sharan Prakash Patil

The post ನುಡಿದಂತೆ ನಡೆದಿರುವುದಕ್ಕೆ ಸಾಧನಾ ಸಮಾವೇಶ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മൂന്നാമത് കുട്ടിക്ക് 30,000, നാലാമന് 40,000; ജനസംഖ്യ കൂട്ടാൻ ‘ബമ്പർ പ്രഖ്യാപനവുമായി’ ചന്ദ്രബാബു നായിഡു

  അമരാവതി: ആന്ധ്രാപ്രദേശിൽ ജനസംഖ്യാ വർധനവ് ലക്ഷ്യമിട്ട് നിർണായക സാമ്പത്തിക പ്രോത്സാഹന...

வித்யாஷ்ரம் பள்ளியில் நிர்வாக பிரச்னை; இடைக்கால நிர்வாகியாக விஜய்குமார் ரெட்டி – நீதிமன்றம் தீர்ப்பு

செட்டிநாடு வித்யாஷ்ரம் பள்ளியை நடத்தி வரும் குமார ராஜா முத்தையா பாரம்பரிய...

PM Modi: నెదర్లాండ్స్ రాజు, రాణితో మోడీ భేటీ.. ద్వైపాక్షిక సంబంధాలపై కీలక చర్చలు

ప్రధాని మోడీ ఐదు దేశాల పర్యటన కొనసాగుతోంది. శుక్రవారం యూఏఈలో కొనసాగగా.....

യുവാക്കൾ പാറ്റകളെന്ന പരാമർശം: മാധ്യമങ്ങൾ വാക്കുകൾ തെറ്റായി വ്യാഖ്യാനിച്ചു, വേദനയുണ്ടെന്ന് ചീഫ് ജസ്റ്റിസ് സൂര്യകാന്ത്

ന്യൂദൽഹി: തൊഴിൽരഹിതരായ യുവാക്കൾ പാറ്റകളെ പോലെയെന്ന തന്റെ പരാമർശത്തിൽ വിശദീകരണവുമായി സുപ്രീം...