14
May, 2026

A News 365Times Venture

14
Thursday
May, 2026

A News 365Times Venture

ಮೈಸೂರು: ಮೇ 16 ರಂದು ‘ಹಿಂದೂ ಎಜುಕೇಶನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್ ಫೇರ್ – 2026’

Date:

ಮೈಸೂರು,ಮೇ,14,2026 (www.justkannada.in): ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ ‘ದಿ ಹಿಂದೂ ಎಜುಕೇಶನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್ ಫೇರ್ – 2026’ 24ನೇ ಆವೃತ್ತಿಯು ರಾಜ್ಯಾದ್ಯಂತ ವಿವಿಧೆಡೆ ಆರಂಭಗೊಂಡಿದೆ.

ಮೈಸೂರಿನಲ್ಲಿ ಮೇ 16ರ ಶನಿವಾರ ಬೆಳಗ್ಗೆ 9.00 ರಿಂದ ವಿದ್ಯಾರ್ಥಿಗಳ ನೋಂದಣಿ ಆರಂಭವಾಗಲಿದ್ದು 9.30ಕ್ಕೆ ಕಾರ್ಯಕ್ರಮವು ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ವೈದ್ಯಕೀಯ, ಎಂಜಿನಿಯಾರಿಂಗ್ ಸಹಿತ ವೃತ್ತಿಪರ ಕೋರ್ಸ್ ಗಳು, ಸಿಇಟಿ, ನೀಟ್ ನಂತಹ ಪ್ರವೇಶ ಪರೀಕ್ಷೆಗಳು, ಕಾನೂನು ಹೀಗೆ ವಿವಿಧ ಪದವಿ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ಭಾಗವಹಿಸಲಿದ್ದು, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಅವರು ಇಂಜಿನಿಯರಿಂಗ್ ಶಿಕ್ಷಣ ಕುರಿತು ಮಾತನಾಡಲಿದ್ದಾರೆ. ಹಾಗೆಯೇ  ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕಮ್ಯುನಿಟಿ ಮೆಡಿಕಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್. ಮಂಜುನಾಥ್ ವೈದ್ಯಕೀಯದ ಶಿಕ್ಷಣ ಕುರಿತು ಮಾತನಾಡಲಿದ್ದಾರೆ.

ಕೆ.ಇ.ಎ ಹೆಲ್ಪಲೈನ್ ವಿಭಾಗದ ನೋಡಲ್ ಆಫಿಸರ್  ಉದಯ್ ಶಂಕರ್  ಸಿ.ಇ.ಟಿ ಕೌನ್ಸೆಲಿಂಗ್ ಕುರಿತು ಮಾಹಿತಿ ನೀಡಲಿದ್ದಾರೆ.  ಇನ್ನಿತರ ಶಿಕ್ಷಣ ಅವಕಾಶಗಳ ಕುರಿತು ಸಿಗ್ಮಾ ಸಂಸ್ಥೆಯ ಅಮಿನ್ ಇ ಮುದ್ದಸೀರ್, ಕಾಮರ್ಸ್ ಕುರಿತು ಮಾತನಾಡಲು ಎಸ್. ಭಾರ್ಗವ್ ಹಾಗೂ ಉನ್ನತ ಶಿಕ್ಷಣದ ಕುರಿತು ಗೌರವ ಯಾದವ್ ಮಾರ್ಗದರ್ಶನ ನೀಡಲಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ಕರಿಯರ್ ಕೌನ್ಸೆಲಿಂಗ್, ಸೂಕ್ತ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಬಿ. ರಾಜೇಶ್ – 944887171

Key words: Mysore, ‘Hindu Education Plus Career, Counseling, Fair , May 16

The post ಮೈಸೂರು: ಮೇ 16 ರಂದು ‘ಹಿಂದೂ ಎಜುಕೇಶನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್ ಫೇರ್ – 2026’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എസ്.ഐ.ആർ മൂന്നാം ഘട്ടം മെയ് 30 മുതൽ; പ്രഖ്യാപനവുമായി തെരഞ്ഞെടുപ്പ് കമ്മീഷൻ

ന്യൂദൽഹി : വോട്ടർപട്ടിക പുനപരിശോധനയുടെ മൂന്നാം ഘട്ടം ഈ മാസം 30...

சனாதனம்: "இந்து மதத்தை இழிவுபடுத்திய பாவத்தால்தான்…" – முதல்வர் விஜய்க்கு நயினார் கேள்வி

தற்போதைய எதிர்க்கட்சித் தலைவர் உதயநிதி ஸ்டாலின், கடந்த 2023-ம் ஆண்டு நடைபெற்ற...

Pakistan: ఢిల్లీని టార్గెట్ చేసే మిస్సైల్‌ను పరీక్షించిన పాకిస్తాన్..

Pakistan: బ్రహ్మోస్‌కు పోటీగా పాకిస్తాన్ అభివృద్ధి చేసిన ‘‘ఫతా-4’’ క్రూయిజ్ మిస్సైల్‌ను...

അച്ചടക്കം പാലിച്ചിട്ടും അവഗണന; മന്ത്രിസഭയില്‍ ചേരില്ല: അതൃപ്തി പ്രകടിപ്പിച്ച് ചെന്നിത്തല

തിരുവനന്തപുരം: വി.ഡി സതീശനെ മുഖ്യമന്ത്രിയായി പ്രഖ്യാപിച്ചതില്‍ കോണ്‍ഗ്രസ് നേതാവ് രമേശ് ചെന്നിത്തലയ്ക്ക്...