ಬೆಂಗಳೂರು,ಮೇ,13,2026 (www.justkannada.in): ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮೇ 3 ರಂದು ನಡೆದಿದ್ದ ನೀಟ್ –ಯುಜಿ ಪರೀಕ್ಷೆ ರದ್ದು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕಷ್ಟ ಪಟ್ಟು ಭವಿಷ್ಯಕ್ಕೆ ಓದಿಕೊಂಡಿರುತ್ತಾರೆ. ದೇಶದ ಮಕ್ಕಳ ಭವಿಷ್ಯದ ವಿಚಾರಕ್ಕೆ ಸೆಕ್ಯೂರಿಟಿ ಬೇಡವಾ? ಎಂದು ಪ್ರಶ್ನಿಸಿದ್ದಾರೆ.
ಇದು ಆರನೇ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದು. ಬಹಳ ಜವಾಬ್ದಾರಿಯುತದಿಂದ ಪರೀಕ್ಷೆಯನ್ನ ನಡೆಸಬೇಕು ಎಂದು ಸಚಿವ ಮದು ಬಂಗಾರಪ್ಪ ಹರಿಹಾಯ್ದರು.
Key words: Minister, Madhu Bangarappa, NEET, Cancel, Central Government
The post ದೇಶದ ಮಕ್ಕಳ ಭವಿಷ್ಯಕ್ಕೆ ಸೆಕ್ಯೂರಿಟಿ ಬೇಡವಾ? ಕೇಂದ್ರದ ವಿರುದ್ದ ಸಚಿವ ಮಧು ಬಂಗಾರಪ್ಪ ಗುಡುಗು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





