15
May, 2026

A News 365Times Venture

15
Friday
May, 2026

A News 365Times Venture

ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: 2ನೇ ದಿನದ ಸ್ಪರ್ಧೆಯಲ್ಲಿ ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನ.

Date:

ಮೈಸೂರು,ಫೆಬ್ರವರಿ,18,2026 (www.justkannada.in):  ಸಾಂಸ್ಕೃತಿಕ ಮೈಸೂರಿನಲ್ಲಿ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ನಡೆಯುತ್ತಿದ್ದು ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.

ಇಂದಿನ ಎರಡನೇ ದಿನದ ಸ್ಪರ್ಧೆಗಳಲ್ಲಿ 11 ಪ್ರಥಮ, 13 ದ್ವಿತೀಯ ಮತ್ತು 2 ತೃತೀಯ ಬಹುಮಾನಗಳನ್ನು ಗಳಿಸುವ ಮೂಲಕ  ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ  14 ಪ್ರಥಮ, 4 ದ್ವಿತೀಯ ಮತ್ತು 1 ತೃತೀಯ ಬಹುಮಾನಗಳನ್ನು ಪಡೆಯುವ ಮೂಲಕ ಕೇರಳ ಅಂಚೆ ವೃತ್ತ ಎರಡನೇ ಸ್ಥಾನವನ್ನು, ಒಟ್ಟು 9 ಬಹುಮಾನಗಳನ್ನು ಪಡೆಯುವ ಮೂಲಕ ಒಡಿಶಾ ಅಂಚೆ ವೃತ್ತವು ಮೂರನೇ ಸ್ಥಾನವನ್ನು ಪಡೆದಿದೆ.

ಕರ್ನಾಟಕ ಅಂಚೆ ವೃತ್ತದ ಚಾರ್ಮಿ ಎಸ್‌, ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಒಡಿಸ್ಸಿ ನೃತ್ಯದಲ್ಲಿ, ಪಲ್ಲವಿ ಎಲ್‌ ಕೊಡಿಯ ಅವರು ದ್ವಿತೀಯ ಬಹುಮಾನ ಪಡದರೇ, ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಮತ್ತು ತೃತೀಯ ಬಹುಮಾನವನ್ನು, ಶಾಂಭವಿ ದೇಗಾವಿ ಮಠ್‌ ಅವರು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಕಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಬಹುಮಾನವನ್ನು ಪ್ರದ್ಯುಮ್‌ ಕೌಶಿಕ್‌ ಸಿ.ಜಿ. ಅವರು,  ಹಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಪಿಟೀಲು ವಾದನದಲ್ಲಿ ಸ್ಪರ್ಶ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.   ಹಿರಿಯರ ವಿಭಾಗದ ಭರತ ನಾಟ್ಯದಲ್ಲಿ ಪ್ರಥಮ ಬಹುಮಾನ,  ಶೃಷ್ಠಿ ಅವರು ಕಿರಿಯರ ವಿಭಾಗದ ಸಾತ್ರಿಯ ನೃತ್ಯದಲ್ಲಿ ದ್ವಿತೀಯ, ಪುಣ್ಯಶ್ರೀ ಡಿ ಎಂ ಕಿರಿಯರ ವಿಭಾಗದ ಮೋಹಿನಿಆಟ್ಟಂ ನೃತ್ಯದಲ್ಲಿ ದ್ವಿತೀಯ ಸೇರಿದಂತೆ ಹಲವರು ಬಹುಮಾನಗಳನ್ನು ಪಡೆದರು.

ಕೇರಳ ಅಂಚೆ ವೃತ್ತದ ನಿರಂಜನಾ ಕೆ. ಎಸ್.‌ ಕಿರಿಯರ ವಿಭಾಗದ ಭರತನಾಟ್ಯಂನಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ವಿಭಾಗದ ಮೋಹಿನಿಆಟ್ಟಂನಲ್ಲಿ ಪ್ರಥಮ, ಗೌತಮ್‌ ಗಣೇಶ್‌ ಹಿರಿಯರ ವಿಭಾಗದ ಕಥಕಳಿ ನೃತ್ಯದಲ್ಲಿ ಪ್ರಥಮ, ನಯನ ವಾಸುದೇವ್‌ ಎನ್‌ ಅವರು ಹಿರಿಯರ ವಿಭಾಗದ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಮತ್ತು ಕೆ. ಎನ್‌. ಶಿವಾನಂದನ ಎನ್‌ ಅವರು ಕಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನು ಪಡೆದರು.

ಒಡಿಶಾ ಅಂಚೆ ವೃತ್ತದ  ಬನಶ್ರೀ ಪಟ್ನಾಯಕ್ ಅವರು ಹಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನುವಿಶೇಷ ಬಹುಮಾನವನ್ನು ಲಕ್ಷ್ಮಣ್‌ ದಾಸ್‌, ಕಿರಿಯರ ವಿಭಾಗದ ತಬಲ ವಾದನದಲ್ಲಿ ಅಮನ್‌ ಕುಮಾರ್‌ ದಾಸ್‌ ಪ್ರಥಮ ಬಹುಮಾನ ಹಾಗೂ ಹಿರಿಯರ ವಿಭಾಗದದಲ್ಲಿ ಪಡೆದರು.

ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ಭಾರತದಾದ್ಯಂತದ 21 ಅಂಚೆ ವೃತ್ತಗಳ 335 ಅಂಚೆ ನೌಕರರು ಭಾಗವಹಿಸಿದ್ದು ಅಂಚೆ ನೌಕರರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ.

Key words: Mysore, All India Postal Cultural Conference, Karnataka Postal Circle

The post ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: 2ನೇ ದಿನದ ಸ್ಪರ್ಧೆಯಲ್ಲಿ ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്‍ യുദ്ധത്തിനിടെ നെതന്യാഹുവിന്റെ രഹസ്യ യു.എ.ഇ സന്ദര്‍ശനം: മൊസാദ്, ഐ.ഡി.എഫ് തലവന്മാരും കൂടെയുണ്ടായിരുന്നതായി റിപ്പോര്‍ട്ട്

  ടെല്‍ അവീവ്: ഇറാനെതിരായ യുദ്ധത്തിനിടയില്‍ ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹു...

ಬೆಂಗಾವಲು ವಾಹನ ಕಡಿಮೆ ಮಾಡಿದ ವಿಚಾರ: ಇವೆಲ್ಲ ನಾಟಕೀಯ ಎಂದ ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಮೇ,15,2026 (www.justkannada.in): ಇಂಧನ ಮಿತ ಬಳಕೆಗೆ  ಪ್ರಧಾನಿ ಮೋದಿ ಕರೆ...

ഇതാണ് ഉത്തരവാദിത്തമുള്ള ഭരണം; എല്ലായിടത്തും കൂടി, എന്നാല്‍ ഇവിടെ അത്രയ്‌ക്കൊന്നുമില്ലല്ലോ; ഇന്ധനവിലവര്‍ധനവിനെ ന്യായീകരിച്ച് റിജിജു

ന്യൂദല്‍ഹി: രാജ്യത്ത് ഇന്ധനവില വര്‍ധിപ്പിച്ച കേന്ദ്ര സര്‍ക്കാര്‍ തീരുമാനത്തെ ന്യായീകരിച്ച് കേന്ദ്രമന്ത്രി...

த.வெ.க அரசின் அமைச்சரவை விரிவாக்கம் எப்போது? | பின்னணி தகவல்!

முதல்வர் விஜய் தலைமையிலான த.வெ.க அரசு பொறுப்பேற்று, இன்றுடன் ஆறு நாட்கள்...