28
August, 2026

A News 365Times Venture

28
Friday
August, 2026

A News 365Times Venture

ಯುವಜನತೆ ಭವಿಷ್ಯಕ್ಕೆ ಕಲ್ಲು ಹಾಕುವ ಕೆಲಸ: ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಏನು ಕ್ರಮ  ಕೈಗೊಂಡ್ರಿ? ಬಿವೈ ವಿಜಯೇಂದ್ರ ಕಿಡಿ

Date:

ಬೆಂಗಳೂರು,ಫೆಬ್ರವರಿ,13,2026 (www.justkannada.in): ರಾಜ್ಯದಲ್ಲಿ 2.75 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ  ಕಳೆದ ಎರಡುವರೆ ವರ್ಷದಿಂದ ಸರಿಯಾಗಿ ಯಾವುದೇ ನೇಮಕಾತಿಗಳನ್ನ   ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ,  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡದೇ ಯುವಜನತೆಗೆ ಮೋಸ ಮಾಡಿದೆ ಎಂದು ಕಿಡಿಕಾರಿದರು.

ಉದ್ಯೋಗಾವಕಾಶ ಕೇಳಿದ ಯುವಜನರಿಗೆ ನೀವು ನೀಡಿದ್ದು ಲಾಠಿ ಭಾಗ್ಯ!

ಯುವಜನರಿಗೆ ಉದ್ಯೋಗ ನೀಡುವ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರ ಈಗಾಗಲೇ ಅರ್ಧ ಅವಧಿ ಮುಗಿಸಿದೆ. ಎಷ್ಟು ಯುವಜನರಿಗೆ ಉದ್ಯೋಗ ನೀಡಿದ್ದೀರಿ? 2.75 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ಏನು ಕ್ರಮ ಕೈಗೊಂಡಿದ್ದೀರಿ? ಉದ್ಯೋಗಾವಕಾಶ ಕೇಳಿದ ಯುವಜನರಿಗೆ ನೀವು ನೀಡಿದ್ದು ಲಾಠಿ ಭಾಗ್ಯ! ಎಲ್ಲದ್ದಕ್ಕೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತೀರಿ, ನಿಮ್ಮ ಸರ್ಕಾರ ಏನು ಮಾಡುತ್ತಿದೆ? ರಾಜ್ಯದ ಯುವಜನತೆಯ ಭವಿಷ್ಯಕ್ಕೆ ಕಲ್ಲು ಹಾಕುವ ಕೆಲಸವನ್ನಷ್ಟೇ ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ! ಎಂದು ವಾಗ್ದಾಳಿ ನಡೆಸಿದ್ದಾರೆ.

Key words: fill, 2.75 lakh, vacant, posts, state, congress, BY Vijayendra

The post ಯುವಜನತೆ ಭವಿಷ್ಯಕ್ಕೆ ಕಲ್ಲು ಹಾಕುವ ಕೆಲಸ: ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಏನು ಕ್ರಮ  ಕೈಗೊಂಡ್ರಿ? ಬಿವೈ ವಿಜಯೇಂದ್ರ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕಾಮಗಾರಿ ಅಪೂರ್ಣ, ಬಳಕೆಗೆ ಬಾರದ ಸ್ಥಿತಿ:  “ಸೈನಿಕ” ಉದ್ಯಾನವನಕ್ಕೆ ಗ್ರಹಣವೇ?

ಮೈಸೂರು,ಆಗಸ್ಟ್,27,2026 (www.justkannada.in): ನಗರದ ದಟ್ಟಗಳ್ಳಿ 3ನೇ ಹಂತದಲ್ಲಿ, ಮಹಾಲಕ್ಷ್ಮಿ ದೇವಸ್ಥಾನದ...

പ്രതിപക്ഷ ഉപനേതാവ് തര്‍ക്കം തുടരുന്നു; പ്രസ്താവനകളില്‍ നേതാക്കള്‍ മിതത്വം പാലിക്കണമെന്ന് ടി.പി രാമകൃഷ്ണന്‍

തിരുവനന്തപുരം: പ്രതിപക്ഷ ഉപനേതാവ് തര്‍ക്കത്തിലെ പ്രസ്താവനകളില്‍ നേതാക്കള്‍ മിതത്വം പാലിക്കണമെന്ന് എല്‍.ഡി.എഫ്...

கருப்புச் சட்டையில் திமுக கவுன்சிலர்கள்; முதல்வர் விஜய்க்கு கடிதம் எழுதிய மேயர் பிரியா; விவரம் என்ன?

சென்னை மாநகராட்சியின் மாதாந்திரக் கூட்டம் இன்று ரிப்பன் மாளிகையில் நடந்து வருகிறது....

Off The Record: కొండా సురేఖ, చిన్నారెడ్డిపై యాక్షన్‌కు బ్రేక్! ఢిల్లీ నుంచి వచ్చిన సందేశమేంటి?

Off The Record: పాజిటివో, నెగెటివో… పార్టీలో కొండా సురేఖ ఎపిసోడ్‌కి...