18
February, 2026

A News 365Times Venture

18
Wednesday
February, 2026

A News 365Times Venture

ಮೈಸೂರು ವಿವಿ: ಕಾಲೇಜುಗಳ ಸಂಯೋಜನಾ ಪ್ರಕ್ರಿಯೆ ವರದಿಗಳಿಗೆ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ

Date:

ಮೈಸೂರು,ಫೆಬ್ರವರಿ,6,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯ 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳಿಗೆ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ ದಾಖಲಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್, ದಿನಾಂಕ 05.02.2026 ರಂದು ಸಂಜೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ, 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳನ್ನು ಪರಿಶೀಲಿಸಿದ ನಂತರ, ಗಂಭೀರ ಕಾನೂನುಬದ್ಧ ಹಾಗೂ ಪ್ರಕ್ರಿಯಾತ್ಮಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ನಾನು ನನ್ನ ಸ್ಪಷ್ಟ ಅಸಮ್ಮತಿಯನ್ನು (DISSENT NOTE) ಅಧಿಕೃತವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಿಂಡಿಕೇಟ್ ನಿರ್ಣಯದ ಮೂಲಕ ಸ್ಥಳೀಯ ವಿಚಾರಣಾ ಸಮಿತಿಗಳನ್ನು ರಚಿಸದಿರುವುದು. ಸ್ಥಳೀಯ ಭೌತಿಕ ಪರಿಶೀಲನೆಗೆ ಸಂಬಂಧಿಸಿದ ವಿಶ್ವಾಸಾರ್ಹ ದಾಖಲೆಗಳ ಅಭಾವ. ವಿಚಾರಣಾ ವರದಿಗಳ ಮೇಲೆ ಸಿಂಡಿಕೇಟ್ ಸದಸ್ಯರ ಸಹಿ ಇಲ್ಲದಿರುವುದರಿಂದ ಹೊಣೆಗಾರಿಕೆಯ ಸ್ಪಷ್ಟತೆಯ ಕೊರತೆ. ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಅವರು ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ನಿಯಮಬಾಹಿರ ವಿಧಾನ ಅನುಸರಿಸಿ ಸಂಯೋಜನಾ ಪ್ರಕ್ರಿಯೆಗಳನ್ನು ನಡೆಸಿ, 2026–27ನೇ ಶೈಕ್ಷಣಿಕ ಸಾಲಿಗೂ ಅದೇ ಕ್ರಮವನ್ನು Ultra Vires ರೀತಿಯಲ್ಲಿ ಮುಂದುವರಿಸಿರುವುದು ಗಂಭೀರ ಆತಂಕದ ವಿಷಯವಾಗಿದೆ. ಈ ಅಸಮ್ಮತಿ ಸೂಚನೆ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ; ಬದಲಾಗಿ ಇದು ಮೂಲಭೂತ ಮೌಲ್ಯಗಳ ರಕ್ಷಣೆಗೆ ಸಂಬಂಧಿಸಿದೆ ಎಂದು ಡಾ. ಟಿ. ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

Key words: Mysore University, Syndicate member, Dr. T. R. Chandrashekhar

The post ಮೈಸೂರು ವಿವಿ: ಕಾಲೇಜುಗಳ ಸಂಯೋಜನಾ ಪ್ರಕ್ರಿಯೆ ವರದಿಗಳಿಗೆ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ: ಸರ್ಕಾರದ ವಿರುದ್ದ ಸಭಾಪತಿ ಹೊರಟ್ಟಿ ಅಸಮಾಧಾನ

ಹಾವೇರಿ,ಫೆಬ್ರವರಿ,17,2026 (www.justkannada.in):  ರಾಜ್ಯದಲ್ಲಿ ಅತಿಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದರೂ...

നവകേരള സര്‍വേയില്‍ അപ്പീല്‍ നല്‍കാന്‍ നിയമോപദേശം തേടി സര്‍ക്കാര്‍

തിരുവനന്തപുരം: നവകേരള സര്‍വേ റദ്ദാക്കിയ ഹൈക്കോടതി വിധിക്കെതിരെ അപ്പീല്‍ നല്‍കാന്‍ നിയമോപദേശം...

"ஆலின் ஷெரினின் மரணத்தை கொண்டாடும் கேரள மக்களை பார்த்து வெட்கப்படுகிறேன்"- கொதித்த எழுத்தாளர்!

கேரள மாநிலம் பத்தனம்திட்டா மாவட்டம் மல்லப்பள்ளி மலையாற்றூரைச் சேர்ந்த அருண் ஆபிரகாம்...

Jawa 42: రెట్రో లుక్ లో జావా 42.. న్యూ కలర్స్, డ్యూయల్ ఛానల్ ABS.. ధర, ఫీచర్స్ పూర్తి వివరాలు ఇవే

ప్రఖ్యాత బైక్ కంపెనీ జావా భారత్ లో దాని ప్రసిద్ధ మోటార్...