5
March, 2026

A News 365Times Venture

5
Thursday
March, 2026

A News 365Times Venture

ಸೆ.28 ಮತ್ತು 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ: ಸಿದ್ಧತೆ ಪರಿಶೀಲಿಸಿದ ಮೈಸೂರು ಡಿಸಿ

Date:

ಮೈಸೂರು, ಆಗಸ್ಟ್‌ 29, 2025 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆ.28 ಮತ್ತು 29ರಂದು ನಡೆಸಲು ಸಮಯ ನಿಗದಿಪಡಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು, ದಸರಾ ವಿದ್ಯುತ್‌ ದೀಪಾಲಂಕಾರ ಹಾಗೂ ಡ್ರೋನ್‌ ಶೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಲಕ್ಷ್ಮಿಕಾಂತರೆಡ್ಡಿ ಅವರು ಮಾತನಾಡಿದರು.

“ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಬಾರಿ ಏರ್‌ ಶೋ ಸಹ ನಡೆಯಲಿದೆ. ಇದರ ನಡುವೆ ಡ್ರೋನ್‌ ಶೋ ನಡೆಸಬೇಕಿದೆ. ಅಲ್ಲದೆ, ಪಂಜಿನ ಕವಾಯತು ಕಾರ್ಯಕ್ರಮದ ತಾಲೀಮು ಸಹ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಅಡಚಣೆ ಆಗದಂತೆ ಮೂರು ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೆ.28 ಮತ್ತು ಸೆ.29 ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಸುವುದು ಸೂಕ್ತವಾದ ದಿನಾಂಕವಾಗಿದೆ” ಎಂದರು.

“ಡ್ರೋನ್‌ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಎಂಡಿಎ ವತಿಯಿಂದ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಂಡಿಎ ವತಿಯಿಂದ ನಡೆಸಲು ಕ್ರಮವಹಿಸಬೇಕಿದೆ” ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಅವರು, ದಸರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತ, ರಸ್ತೆಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಲಾಗುವ ದಸರಾ ದೀಪಾಲಂಕಾರದ ವಿನ್ಯಾಸ, ವಿವಿಧ ಬಗೆಯ ಕಲಾಕೃತಿಗಳನ್ನು ನಿರ್ಮಿಸಿರುವ ಕುರಿತಂತೆ ಮಾಹಿತಿ ನೀಡಿದರು.

“ಸೆ.28 ಮತ್ತು 29ರಂದು ನಡೆಯುವ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ಹಾಗೂ ಅ.1 ಮತ್ತು 2ರಂದು ಡ್ರೋನ್‌ ಶೋ ಪ್ರಮುಖ ಪ್ರದರ್ಶನ ನಡೆಯಲಿದೆ. ಡ್ರೋನ್‌ ಶೋ ಜತೆಗೆ ಖ್ಯಾತ ಗಾಯಕರಿಂದ ಸಂಗೀತ ಸಂಜೆ ನಡೆಸಲು ಚಿಂತನೆ ನಡೆಸಲಾಗಿದೆ” ಎಂದು ತಿಳಿಸಿದರು.

ಸಭೆಯಲ್ಲಿ ಎಂಡಿಎ ಆಯುಕ್ತ ರಕ್ಷಿತ್‌, ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್‌ ಸುನೀಲ್‌, ಪ್ರಧಾನ ವ್ಯವಸ್ಥಾಪಕ ಎಲ್‌. ಲೋಕೇಶ್‌ ಸೇರಿದಂತೆ ಪ್ರಮುಖ ಅಧಿಕಾರಿಗಳು ಇದ್ದರು.

Key words: Mysore dasara, Lighting, Drone show, Mysore DC

The post ಸೆ.28 ಮತ್ತು 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ: ಸಿದ್ಧತೆ ಪರಿಶೀಲಿಸಿದ ಮೈಸೂರು ಡಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാനിയന്‍ കപ്പല്‍ രാജ്യത്തിന്റെ അതിഥിയല്ലെന്ന കേന്ദ്ര നിലപാട് അമേരിക്കന്‍ വിധേയത്വം; പ്രവാസികളുടെ സുരക്ഷ ഉറപ്പാക്കണം: മുഖ്യമന്ത്രി

തിരുവനന്തപുരം: പശ്ചിമേഷ്യയിലെ സംഘര്‍ഷത്തില്‍ ആശങ്ക രേഖപ്പെടുത്തിയും പ്രവാസികളുടെ സുരക്ഷ ഉറപ്പാക്കണമെന്ന് കേന്ദ്ര...

ஆனந்த் போஸ் ராஜினாமா: தமிழக ஆளுநர் ஆர்.என் ரவி மேற்கு வங்கத்திற்கு மாற்றமா?!

மேற்கு வங்கம், தமிழ்நாடு உட்பட 5 மாநிலங்களுக்கு அடுத்த இரண்டு மாதங்களில்...

India vs England: రఫ్ఫాడించిన సంజు, దూబే.. ఇంగ్లాండ్ ముందు భారీ టార్గెట్

T20 వరల్డ్ కప్ 2026 రెండవ సెమీ-ఫైనల్ ముంబైలోని వాంఖడే స్టేడియంలో...

‘ಕರ್ನಾಟಕ ದರ್ಶನ’ : ಶ್ರೀರಂಗಪಟ್ಟಣ ವೈಭವಕ್ಕೆ ಮನಸೋತ ಬಾಗೇವಾಡಿ ಪ್ರತಿಭೆಗಳು

ಮಂಡ್ಯ,ಮಾರ್ಚ್,5,2026 (www.justkannada.in): ರಾಜ್ಯದ ಐತಿಹಾಸಿಕ ತಾಣಗಳ ಪರಿಚಯ ಮಾಡಿಸುವ ‘ಕರ್ನಾಟಕ...