12
March, 2026

A News 365Times Venture

12
Thursday
March, 2026

A News 365Times Venture

ಸಾರಿಗೆ ನೌಕರರ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ- ಆರ್.ಅಶೋಕ್ ವಾಗ್ದಾಳಿ

Date:

ಬೆಂಗಳೂರು,ಆಗಸ್ಟ್,5,2025 (www.justkannada.in): ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗೆ ನಮ ಬೆಂಬಲ ಇದೆ. ನೌಕರರ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಪಾಪರ್‌ ಹಂತಕ್ಕೆ ಬಂದಿದೆ. ನಮ ಸರ್ಕಾರದ ಖಜಾನೆ ತುಂಬಿದೆ ಎಂದು ಬೊಬ್ಬೆ ಹೊಡೆಯುತ್ತೀರಿ. ನಾನು ಸಾರಿಗೆ ಮಂತ್ರಿಯಾಗಿದ್ದಾಗ ನೌಕರರ ಶೇ.15 ರಷ್ಟು ವೇತನವನ್ನು ಹೆಚ್ಚಳ ಮಾಡಿದ್ದೆ. 4 ಲಕ್ಷ ಕೋಟಿಗೂ ಅಧಿಕ ಬಜೆಟ್‌ ಮಂಡನೆ ಮಾಡುವ ನಿಮಗೆ ಅವರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲವೇ? ಎಂದು  ಕಿಡಿಕಾರಿದರು.

ಇಡೀ ದೇಶವೇ ಕೋವಿಡ್‌ ವೇಳೆ ಆರ್ಥಿಕವಾಗಿ ತತ್ತರಿಸಿತ್ತು. ಅಂತ ಸಂದರ್ಭದಲ್ಲೂ ನಮ ಸರ್ಕಾರ ಸಾರಿಗೆ ನೌಕರರಿಗೆ ಸಂಕಷ್ಟದ ಸಂದರ್ಭದಲ್ಲೂ ಅರ್ಧ ವೇತನವನ್ನು ನೀಡಿತ್ತು. ಎಲ್ಲವೂ ಸರಿಯಾಗಿರುವಾಗ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

Key words: problem, transport employees, government, R. Ashok

The post ಸಾರಿಗೆ ನೌಕರರ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ- ಆರ್.ಅಶೋಕ್ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕ ಭೈರತಿ ಬಸವರಾಜುಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು,ಮಾರ್ಚ್,12,2026 (www.justkannada.in): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ...

മിനാബിലെ പ്രൈമറി സ്‌കൂളിൽ നടന്ന ആക്രമണം മാപ്പർഹിക്കാത്ത യുദ്ധക്കുറ്റം; ഉത്തരവാദികൾ ശിക്ഷിക്കപ്പെടാതെ പോകില്ല: ഇറാൻ

ഇസ്താംബുൾ: ഇറാനിലെ മിനാബിൽ പെൺകുട്ടികളുടെ സ്കൂളിന് നേരെ അമേരിക്കയും ഇസ്രഈലും നടത്തിയ...

'தேமுதிகவுக்காக எதுக்கு தியாகம் பண்ணணும்?' – எரிச்சலில் கூட்டணி கட்சிகள்; அறிவாலயத்தின் ப்ளான் என்ன?

கூட்டணி கட்சிகளிடம், தொகுதிகளை குறைத்துக் கொள்ள சொல்லி வலியறுத்திக் கொண்டிருக்கிறது அறிவாலயம்....

LPG crisis: ఎల్‌పీజీ సంక్షోభం.. తగ్గిన స్విగ్గీ, జొమాటో డెలివరీలు..

LPG crisis: మిడిల్ ఈస్ట్ యుద్ధం భారతదేశంపై తీవ్ర ప్రభావం చూపిస్తున్నాయి....