29
April, 2026

A News 365Times Venture

29
Wednesday
April, 2026

A News 365Times Venture

ಕೋಟೆಯಲ್ಲೊಬ್ಬ “ಆರ್ಮುಗಂ”: ಸಿನಿಮಾ ಸ್ಟೈಲಲ್ಲಿ ಭೂಮಿ ಕಬ್ಜಗೆ ಯತ್ನ ಆರೋಪ.

Date:

ಮೈಸೂರು,ಜುಲೈ,31,2025 (www.justkannada.in):  ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಕೆಂಪೇಗೌಡ ಸಿನಿಮಾದ ಆರ್ಮುಗಂ ಸ್ಟೈಲ್ ನಲ್ಲಿ ಕಿಡಿಗೇಡಿಗಳು ವ್ಯಕ್ತಿಯೊಬ್ಬರ ಭೂಮಿ ಕಬ್ಜಾ ಮಾಡಲು ಯತ್ನಿಸುತ್ತಿರುವ ಆರೋಪ ಕೇಳಿ ಬಂದಿದೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಗ್ರಾಮದ ರೈತ ರಾಜೇಗೌಡ ಎಂಬುವವರ ಜಮೀನಿಗೆ ಏಕಾಏಕಿ‌ ನುಗ್ಗುವ ವ್ಯಕ್ತಿಗಳು ಭೂಮಿ ಕೊಟ್ಟು ಜೀವ ಉಳಿಸಿಕೊಳ್ಳಿ, ಕೊಟ್ಟಷ್ಟು ಹಣ ತೆಗೆದುಕೊಂಡು ಊರು ಬಿಡಿ ಎಂದು  ಧಮ್ಕಿ ಹಾಕಿದ್ದಾರೆ. ಹೀಗೆ ರೈತರ ಜಮೀನಿಗೆ ಅಮಾಯಕರನ್ನ ನುಗ್ಗಿಸಿ ಭೂಮಿ ಕಸಿದುಕೊಳ್ಳುವ ಕುತಂತ್ರ ನಡೆಸಿದ್ದಾರೆ.  1978 ರಿಂದ ತಂದೆ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದ ರಾಜೇಗೌಡರ ಭೂಮಿಯನ್ನ ಲಪಟಾಯಿಸಲು ಕೆಲವರು  ಪ್ಲಾನ್ ಮಾಡಿದ್ದಾರೆ  ಎಂದು ಆರೋಪಿಸಲಾಗಿದೆ.

ಎಂಟು ಎಕರೆ ಜಮೀನಿನಲ್ಲಿ ನಾಲ್ವರು ಅಣ್ಣ ತಮ್ಮಂದಿರು ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಆದರೆ  ಪ್ರಭಾವಿಗಳಿಗೆ ಜಮೀನು ಬೇಕು ಬಿಟ್ಟುಕೊಡಿ ಎಂದು  ಕಿಡಿಗೇಡಿಗಳು ರೈತ ರಾಜೇಗೌಡರಿಗೆ ಒತ್ತಡ ಹೇರಿ ಆವಾಜ್ ಹಾಕಿದ್ದು ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪಕ್ಕದ ಜಮೀನಿನ ಪತ್ರಕ್ಕೆ ಅಗ್ರಿಮೆಂಟ್ ತಂದು ಜಮೀನು ಬಿಡಿ ಅಂತ ಕಿಡಿಗೇಡಿಗಳು ಕಿರಿಕ್ ಮಾಡಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೂ ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೇ ಇದು  ಸಿವಿಲ್ ವಿಚಾರ ಅಂತ ಹೇಳಿ ಕಳುಹಿಸುತ್ತಿದ್ದಾರೆ. ಈ ಮಧ್ಯೆ ನ್ಯಾಯಾಲಯವೇ ಆದೇಶ ನೀಡಿ ಪೊಲೀಸರಿಗೆ ನಿರ್ದೇಶನ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇದು  ಸಿವಿಲ್ ವಿಚಾರ ಅಂತ ಸರ್ವೆಯರ್ ಗೆ ಬರೆದರೆ ಫೈಲ್‌ ಗಳೇ ಮಾಯ ಎಂದು ಸರ್ವೇಯರ್ ಸಬೂಬು ಹೇಳುತ್ತಿದ್ದಾರೆ ಎಂದು ರೈತ ರಾಜೇಗೌಡ ಆರೋಪಿಸಿದ್ದಾರೆ.

ರಾಜೇಗೌಡರ ಕೊಲೆಗೆ ಯತ್ನ

ರೈತ ರಾಜೇಗೌಡ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ವಾಪಸ್ ಊರಿಗೆ ತೆರಳುವಾಗ ಈ ಘಟನೆ ನಡೆದಿದೆ.

ಮೈಸೂರಿನಿಂದ ಕ್ಯಾತನಹಳ್ಳಿ ಗ್ರಾಮಕ್ಕೆ ತೆರಳುವಾಗ ಜಿ.ಬಿ.ಸರಗೂರು ಬಳಿ ಬೈಕ್ ಅಪಘಾತ ಮಾಡಿ ರೈತ ರಾಜೇಗೌಡರ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆಸ್ಪತ್ರೆಯಲ್ಲಿ‌ ಪೊಲೀಸರಿಗೆ ಹೇಳಿಕೆ ನೀಡಿ, ಎಫ್ ಐಆರ್ ದಾಖಲಿಸಲಾಗಿದೆ. ರಾಜೇಗೌಡರ ಕೈ, ಕಾಲು, ಹೊಟ್ಟೆ ಭಾಗಕ್ಕೆ ಗಾಯಗಳಾಗಿದೆ.vtu

Key words: Mysore,  Allegations, land, grab ,cinematic style.

The post ಕೋಟೆಯಲ್ಲೊಬ್ಬ “ಆರ್ಮುಗಂ”: ಸಿನಿಮಾ ಸ್ಟೈಲಲ್ಲಿ ಭೂಮಿ ಕಬ್ಜಗೆ ಯತ್ನ ಆರೋಪ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

20,000ത്തോളം പേര്‍ക്ക് വോട്ട് ചെയ്യാനാവാത്തത് നിര്‍ഭാഗ്യകരം; പോസ്റ്റല്‍ വോട്ട് നിഷേധത്തില്‍ തെരഞ്ഞെടുപ്പ് കമ്മീഷനെതിരെ ഹൈക്കോടതി

കൊച്ചി: തെരഞ്ഞെടുപ്പ് ഡ്യൂട്ടിലുണ്ടായിരുന്ന ഉദ്യോഗസ്ഥര്‍ക്ക് പോസ്റ്റല്‍ വോട്ട് നിഷേധിച്ചതില്‍ തെരഞ്ഞെടുപ്പ് കമ്മീഷനെതിരെ...

“சோசலிச புரட்சிபோல, தமிழ்நாட்டில் 'விசில் புரட்சி' ஏற்படப் போகிறது!"- செங்கோட்டையன்

திண்டுக்கல் மாவட்டம் பழனிக்கு வருகை தந்த தமிழக வெற்றிக் கழகத்தின் தலைமை...

Dacoit: ఓటీటీలోకి అడివి శేష్ ‘డెకాయిట్’.. స్ట్రీమింగ్ డేట్ ఫిక్స్!

టాలీవుడ్ యంగ్ అండ్ టాలెంటెడ్ హీరో అడివి శేష్, మృణాల్ ఠాకూర్...

ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ- ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ,ಏಪ್ರಿಲ್,28,2026 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ  ಚರ್ಚೆಯಾಗುತ್ತಿದ್ದು ಇದೀಗ...