14
March, 2026

A News 365Times Venture

14
Saturday
March, 2026

A News 365Times Venture

ಮೋದಿ ಕೇವಲ ಪ್ರಚಾರ ಪ್ರಿಯ: ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ-ಮಲ್ಲಿಕಾರ್ಜುನ ಖರ್ಗೆ

Date:

ಮೈಸೂರು,ಜುಲೈ,19,2025 (www.justkannada.in): ಪ್ರಧಾನಿ ಮೋದಿ ಕೇವಲ ಪ್ರಚಾರಪ್ರಿಯ. ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮೈಸೂರಿನಲ್ಲಿ ಇಂದು ಸಮಾವೇಶ ನಡೆಯುತ್ತಿದೆ. 24 ವಿವಿಧ ಇಲಾಖೆಯ ಯೋಜನೆಗಳಿಗೆ ಅನುದಾನ ನೀಡಲಾಗಿದೆ.  2578 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ಮಾಡಿದ್ದಾರೆ.  ಮೈಸೂರಿ ಅಂದರೆ ಅವರಿಗೆ ಪ್ರೀತಿ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಮಣಿಪುರಕ್ಕೆ ಭೇಟಿ ನೀಡಿಲ್ಲ. ದೇಶದ ಜನ ಸಾಯುವಾಗ ಮೋದಿ ವಿದೇಶಿ ಟೂರ್ ನಲ್ಲಿದ್ದರು. ಮೋದಿ ಕೇವಲ ಪ್ರಚಾರಪ್ರಿಯ . ಸಂವಿಧಾನದಿಂದಲೇ ಮೋದಿ ಪ್ರಧಾನಿ ಆಗಿದ್ದು.  ಅದರೆ ಇಂದು ಮೋದಿಯಿಂದ ಅದೇ ಸಂವೀಧಾನದ ಕೊಲೆಯಾಗುತ್ತಿದೆ. ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ ಸಂವಿಧಾನ ಬದಲಾವಣೇ ಮಾಡಲು ಆಗಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿದ್ದಾ ಅಂತಾ ಬಿಜೆಪಿಯವರು ಕೇಳುತ್ತಾರೆ ಅಂಬೇಡ್ಕರ್ ಅಲ್ಲದೆ ಆರ್ ಎಸ್ ಎಸ್ ನವರು ಸಂವಿಧಾನ ರಚನೆ ಮಾಡಿದ್ರಾ ಎಂದು ಗುಡುಗಿದರು.

ದೇಶದ ಕೆಲವು ರಾಜ್ಯದಲ್ಲಿ ಕಾಂಗ್ರೆಸ್ ಸೋತಿರಬಹುದು ಆದರೆ ಲಕ್ಷಾಂತರ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಆಶಿಸುತ್ತಾರೆ. ಬಿಜೆಪಿ ಅಭಿವೃದ್ದಿ ಮಾಡಲ್ಲ ಭ್ರಷ್ಟಾಚಾರ ಮಾಡ ಮಾಡುತ್ತಾರೆ.  ಕಾಂಗ್ರೆಸ್ ಏನು ಮಾಡಿದೆ ಅಂತಾ ಮೋದಿ ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ.  ಆದರೆ ಮೋದಿ ಅವರು ಅದಾನಿ ಅಂಬಾನಿಗೆ ದೇಶದ ಆಸ್ತಿಯನ್ನ ಮಾರುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.vtu

Key words: Congress Sadhana Convention, Mysore ,Constitution, Mallikarjuna Kharge

The post ಮೋದಿ ಕೇವಲ ಪ್ರಚಾರ ಪ್ರಿಯ: ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ-ಮಲ್ಲಿಕಾರ್ಜುನ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒറ്റ രാത്രി കൊണ്ടല്ല, പൊങ്കാല ശുചീകരണം നടന്നത് മൂന്നുദിവസം കൊണ്ട്; വി.വി. രാജേഷിന്റെ വാദം തള്ളി കളക്ടര്‍

തിരുവനന്തപുരം: ആറ്റുകാല്‍ പൊങ്കാല ദിനത്തില്‍ തന്നെ തിരുവനന്തപുരം നഗരം പൂര്‍ണമായും ശുചിയാക്കിയെന്ന...

ஆதவ் டேபிள் ஃபேன்; ஆனந்த் எலெக்ட்ரிக் குக்கர்! – போட்டி போட்டு பரிசுப் பொருட்களை இறக்கும் தவெக-வினர்

தவெகவின் முதற்கட்ட வேட்பாளர் பட்டியலை விஜய் உறுதி செய்திருக்கும் நிலையில், சென்னைக்குள்...

LPG Crisis: భారత్‌కు గుడ్‌ న్యూస్.. హార్ముజ్ నుంచి బయలుదేరిన LPG నౌకలు..

LPG Crisis: భారత్‌కు గుడ్ న్యూస్. దేశవ్యాప్తంగా ఇంధన సంక్షోభం ముంచుకొస్తున్న...