14
March, 2026

A News 365Times Venture

14
Saturday
March, 2026

A News 365Times Venture

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಪೋಸ್ಟಲ್‍ ತರಬೇತಿ ಸಂಸ್ಥೆ ನಡುವೆ ಒಡಂಬಡಿಕೆಗೆ ಸಹಿ

Date:

ಮೈಸೂರು,ಜುಲೈ,19,2025 (www.justkannada.in): ರಾಜ್ಯದ ಪ್ರತಿಷ್ಠಿತ ಪೊಲೀಸ್ ಅಧಿಕಾರಿಗಳ ತರಬೇತಿ ಸಂಸ್ಥೆ ಮೈಸೂರಿನ   ಕರ್ನಾಟಕ ಪೊಲೀಸ್‍ ಅಕಾಡೆಮಿ, ಮತ್ತು ಮೈಸೂರಿನ  ಪೋಸ್ಟಲ್‍ತರಬೇತಿ ಸಂಸ್ಥೆ ನಡುವೆ ತರಬೇತಿ, ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಹಾಗೂ ನವೀನ ಮಾದರಿಯ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಜ್ಞಾಪಕ ಪಾತ್ರ ಮತ್ತು ಒಡಂಬಡಿಕೆಗೆ  ಇಂದು ಸಹಿ ಹಾಕಿ ವಿನಿಮಯ ಮಾಡಿಕೊಳ್ಳಲಾಯಿತು.

ಈ ಒಡಂಬಡಿಕೆಯ ಭಾಗವಾಗಿ, ಎರಡೂ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿಗಳು, ಎರಡೂ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನಜ್ಞಾನ ಪಡೆಯುವುದು ಅಲ್ಲದೇ, ಸದರಿ ವಿಷಯಗಳಲ್ಲಾಗುವ ಸಂಶೋಧನೆ ಮತ್ತುಅಭಿವೃದ್ಧಿ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನ ಪಡೆದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಅಂಚೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಸಂಬಂದಿಸಿದ ಸೈಬರ್ ಭದ್ರತೆ, ಬೆರಳಚ್ಚು ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ವಿಷಯಗಳ ಬಗ್ಗೆ ತಿಳಿದುಕೊಂಡರೆ, ಪೊಲೀಸ್‍ ಇಲಾಖೆಯ ಅಧಿಕಾರಿಗಳು , ಅಂಚೆ ಇಲಾಖೆಗೆ ಸಂಬಂಧಿಸಿದ ಸಣ್ಣ ಹೂಡಿಕೆ ಅವಕಾಶಗಳು, ಹಣಕಾಸು ನಿರ್ವಹಣೆ ಹಾಗೂ ಮಾಹಿತಿ ಮತ್ತುತಂತ್ರಜ್ಞಾನ ವಿಷಯಗಳ ಮೇಲೆ ಪರಿಣಿತಿ ಹೊಂದಬಹುದಾಗಿದೆ.

ಈ ಒಪ್ಪಂದ ಜ್ಞಾಪಕ ಪತ್ರ ಹಾಗೂ ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ತರಬೇತಿ ಸಂಸ್ಥೆ, ಮೈಸೂರಿನ ನಿರ್ದೇಶಕ ಡಾ.ಆಶಿಶ್ ಸಿಂಗ್ ಠಾಕೂರ್ ಅವರು ‘ಅಂಚೆ ತರಬೇತಿ ಸಂಸ್ಥೆ, ಮೈಸೂರಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದ್ದು, ಎರಡೂ ಸಂಸ್ಥೆಗಳ ಅಧಿಕಾರಿಗಳಿಗೆ ಜ್ಞಾನ ಮತ್ತುಅನುಭವದ ವಿನಿಮಯವಾಗಿ, ಅವರ ಕಾರ್ಯಕ್ಷೇತ್ರದಲ್ಲಿ ಮೌಲ್ಯವರ್ಧನೆಯಾಗಲಿದೆ’ ಎಂದರು.

ಕರ್ನಾಟಕ  ಪೊಲೀಸ್‍ ಅಕಾಡೆಮಿ, ಮೈಸೂರಿನ ನಿರ್ದೇಶಕ ಚೆನ್ನಬಸವಣ್ಣ ಎಸ್‍ಎಲ್,  ಅವರು ಮಾತನಾಡಿ, ‘ಈ ದಿನ ಕರ್ನಾಟಕ ಪೊಲೀಸ್‍ ಅಕಾಡೆಮಿ ಹಾಗೂ  ಪೊಲೀಸ್ ಇಲಾಖೆಗೆ ಅವಿಸ್ಮರಣೀಯ ದಿನ. ಈ ಎರಡು ಐತಿಹಾಸಿಕ ಸಂಸ್ಥೆಗಳ ನಡುವಿನ ಒಡಂಬಡಿಕೆ ಬಹಳ ವಿಶೇಷವಾದದ್ದು. ಈ ಎರಡು ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಕೊಡುವುದಕ್ಕೆ ಈ ಒಡಂಬಡಿಕೆ ನಾಂದಿಯಾಗಲಿದೆ. ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಉತ್ತಮ ಅಭ್ಯಾಸಗಳ್ಳನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಅಭಿವೃದ್ಧಿಗೆ ಶ್ರಮಿಸಲಿವೆ’ ಎಂದರು.

ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ, ಕರ್ನಾಟಕ  ಪೊಲೀಸ್‍ ಅಕಾಡೆಮಿಯ ವತಿಯಿಂದ ಅಕಾಡೆಮಿಯ ಸಹಾಯಕ ನಿರ್ದೇಶಕರುಗಳಾದ  ರೇಣುಕಾರಾಧ್ಯ ಎಚ್‍ಎಸ್, ಸುದರ್ಶನ ಎನ್ ಮತ್ತು. ವೆಂಕಟೇಶ್‍. ಎಸ್, ಹಾಗೂ ಕ್ರಾಂತಿರಾಜ್‍ ಒಡೆಯರ್ ಎಂ, ಅಂಚೆ ತರಬೇತಿ ಸಂಸ್ಥೆ ವತಿಯಿಂದ, ಸಹಾಯಕ ನಿರ್ದೇಶಕರುಗಳಾದ, ಬಾಲರಾಜ್, ಶ್ರೀಧರ್, ಶ್ರದ್ಧಾ ವಿ ಗೋಕರ್ಣ,  ಮಂಜುನಾಥರಾವ್. ಕೆ ಹಾಗೂ ಇತರೆ ಸಿಬ್ಬಂದಿವರ್ಗದವರು ಹಾಜರಿದ್ದರು.vtu

Key words: Mysore,  Signature, Karnataka Police Academy, Postal Training Institute

The post ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಪೋಸ್ಟಲ್‍ ತರಬೇತಿ ಸಂಸ್ಥೆ ನಡುವೆ ಒಡಂಬಡಿಕೆಗೆ ಸಹಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് -ഇസ്രഈല്‍ ആക്രമണത്തില്‍ മൊജ്തബ ഖാംനഇക്ക് സാരമായി പരിക്കേറ്റു; അവകാശവാദവുമായി യു.എസ് പ്രതിരോധ സെക്രട്ടറി

വാഷിങ്ടണ്‍: ഇറാന്റെ പുതിയ പരമോന്നത നേതാവ് മൊജ്തബ ഖാംനഇക്ക് യു.എസ് -ഇസ്രഈല്‍ ആക്രമണത്തില്‍...

"நடிகர் ரஜினிகாந்தை யாரும் மிரட்ட முடியாது; எந்த மிரட்டலுக்கும் அவர் அடிபணிய மாட்டார்!" – ரகுபதி

புதுக்கோட்டையில் செய்தியாளர்களை சந்தித்த அமைச்சர் ரகுபதி,"நடிகர் ரஜினிகாந்தை யாரும் மிரட்ட முடியாது....

Sachin Tendulkar: సచిన్ రిటైర్మెంట్ వెనుక ఇంత కథ ఉందా.. డ్రెస్సింగ్ రూంలోనే ప్లాన్..?

క్రికెట్ ప్రపంచంలో ‘దేవుడు’గా పిలవబడే సచిన్ టెండూల్కర్ పేరు వినగానే పరుగుల...