14
March, 2026

A News 365Times Venture

14
Saturday
March, 2026

A News 365Times Venture

ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ: ನಮ್ಮ ಪಂಚ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ- ಡಿಸಿಎಂ ಡಿಕೆ ಶಿವಕುಮಾರ್

Date:

ಮೈಸೂರು,ಜುಲೈ,19,2025 (www.justkannada.in): ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ. ಗ್ಯಾರಂಟಿಗಳನ್ನ ಟೀಕಿಸುತ್ತಿದ್ದ ಬಿಜೆಪಿಯವರು ಇದೀಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ನುಡಿದರು.

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಚುನಾವಣೆ ಬಂದಾಗ ಒಂದು ಮಾತು ಹೇಳಿದ್ದೆ ಕಮಲ ಕೇಸರಲ್ಲಿದ್ದರೆ ಚೆನ್ನ ತೆನೆ ಗದ್ದೆಯಲಿದ್ದಾರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದಾರೆ ಚೆನ್ನ ಅಂತ ಹೇಳಿದ್ದೆ. ನಾವು ಏನು ಹೇಳಿದ್ದವು ಅದೇ ಕೆಲಸ ಮಾಡಿದ್ದೇವೆ. ನಾವು ಮಾಡುವ ಕೆಲಸಗಳನ್ನು ನಿಮ್ಮ ಕಣ್ಣಲ್ಲಿ ನೋಡಿ ಆಶೀರ್ವಾದ ಮಾಡಿದ್ದೀರಾ. ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಿಮ್ಮ ಋಣ ತೀರಿಸಲು ಬಂದಿದ್ದೇವೆ ಎಂದರು.

ಈ ಹಿಂದೆ ಚಾಮುಂಡೇಶ್ವರಿ ಬಳಿ ಹರಕೆ ಹೊತ್ತಿದ್ದವು. ಗ್ಯಾರಂಟಿ ಯೋಜನೆಗಳ ಬಗ್ಗೆ ಹರಕೆ ಹೊತ್ತು ತಾಯಿಗೆ ಕಾಣಿಕೆ ಹಾಕಿ ಬಂದಿದ್ದವು. ಅದೇ ರೀತಿ ನಡೆದುಕೊಳ್ಳುತ್ತಿದ್ದೇವೆ. ಈಗ ನಮ್ಮ ಗ್ಯಾರೆಂಟಿಗಳನ್ನು ಬಿಜೆಪಿ ಕಾಪಿ ಮಾಡಿದೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ವಿರೋಧ ಪಕ್ಷಗಳ ಟೀಕೆಗಳು ಸಾಯುತ್ತವೆ ಎಂದು ವಾಗ್ದಾಳಿ ನಡೆಸಿದರು.

ನಾವು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುದಾನ ಕೊಟ್ಟಿದ್ದೇವೆ. ಇಂಡಿ, ಚಾಮರಾಜನಗರ, ಬೀದರ್ ಎಲ್ಲಾ ಜಿಲ್ಲೆಗಳಿಗೂ ಅಭಿವೃದ್ಧಿಗೆ ಹಣ ನೀಡಿದ್ದೇವೆ. ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ. ಈ ಹಸ್ತ ರೈತರನ್ನು ಉಳಿಸಿದೆ. ಈ ಹಸ್ತ ಮಹಿಳೆಯರಿಗೆ ನೆರವು ನೀಡಿದೆ. ಪ್ರತಿ ಕುಟುಂಬಕ್ಕೆ 2 ಸಾವಿರ ಹಣ ಕೊಟ್ಟು ನಿಮ್ಮ ಬದುಕಿಗೆ ಶಕ್ತಿ ಕೊಟ್ಟಿದೆ. ನಾವು ಭಾವನೆಗಳ ಮೇಲೆ ಸರ್ಕಾರ ನಡೆಸಲ್ಲ. ಬದುಕಿನ ಮೇಲೆ ಸರ್ಕಾರ ನಡೆಸುತ್ತೇವೆ. ಎಲ್ಲರ ಅಭಿವೃದ್ದಿ ಈ ಹಸ್ತಕ್ಕೆ ಮುಖ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.vtu

Key words: Mysore, congress, Sadana samavesha, DCM, DK Shivakumar

The post ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ: ನಮ್ಮ ಪಂಚ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് -ഇസ്രഈല്‍ ആക്രമണത്തില്‍ മൊജ്തബ ഖാംനഇക്ക് സാരമായി പരിക്കേറ്റു; അവകാശവാദവുമായി യു.എസ് പ്രതിരോധ സെക്രട്ടറി

വാഷിങ്ടണ്‍: ഇറാന്റെ പുതിയ പരമോന്നത നേതാവ് മൊജ്തബ ഖാംനഇക്ക് യു.എസ് -ഇസ്രഈല്‍ ആക്രമണത്തില്‍...

"நடிகர் ரஜினிகாந்தை யாரும் மிரட்ட முடியாது; எந்த மிரட்டலுக்கும் அவர் அடிபணிய மாட்டார்!" – ரகுபதி

புதுக்கோட்டையில் செய்தியாளர்களை சந்தித்த அமைச்சர் ரகுபதி,"நடிகர் ரஜினிகாந்தை யாரும் மிரட்ட முடியாது....

Sachin Tendulkar: సచిన్ రిటైర్మెంట్ వెనుక ఇంత కథ ఉందా.. డ్రెస్సింగ్ రూంలోనే ప్లాన్..?

క్రికెట్ ప్రపంచంలో ‘దేవుడు’గా పిలవబడే సచిన్ టెండూల్కర్ పేరు వినగానే పరుగుల...