13
March, 2026

A News 365Times Venture

13
Friday
March, 2026

A News 365Times Venture

ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ

Date:

ಮೈಸೂರು,ಜುಲೈ,15,2025 (www.justkannada.in): ಜುಲೈ 19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ವಕ್ತಾರ ಎಂ.ಜಿ ಮಹೇಶ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡ್ತಿದೀರಾ? ರಾಜ್ಯದ ಸಾಲವನ್ನ ಹೆಚ್ಚಿಸಿದ್ದೇ ನಿಮ್ಮ ಸಾಧನೆನಾ.? ಸಿದ್ದರಾಮಯ್ಯಗೆ ಗಂಡಾಂತರ ಬಂದಾಗ ಹಿಂದುಳಿದ ವರ್ಗದ ಟ್ಯಾಗ್ ಹಾಕುತ್ತಾರೆ. ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್ ನಾಯಕರಿಗೆ ಭಯ ಹುಟ್ಟಿಸೋದು. ಸ್ವಾರ್ಥದ ಅಧಿಕಾರಕೋಸ್ಕರ ರಾಜಕಾರಣ ಮಾಡಿರೋ ರಾಜ್ಯದಲ್ಲಿ ಏಕೈಕ ಸಿಎಂ ಸಿದ್ದರಾಮಯ್ಯ. ಸಾಧನಾ ಸಮಾವೇಶ ಮಾಡುವ ಮುನ್ನ ನಿಮ್ಮ ಸಾಧನೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಸುಳ್ಳು ಹೇಳಿ ಸೈಟ್ ಪಡೆದುಕೊಂಡಿದ್ದಷ್ಟೇ ನಿಮ್ಮ ಸಾಧನೆ. ಕಾಂಗ್ರೆಸ್ ಪಕ್ಷ ಭ್ರಷ್ಟರು, ಲೂಟಿಕೋರ ಪಾರ್ಟಿಯಾಗಿ ಪರಿವರ್ತನೆ ಆಗಿದೆ. ನಿಮ್ಮ ಪಕ್ಷದ ಅಧ್ಯಕ್ಷರು ಡ್ರಗ್ಸ್ ಪೆಡ್ಲರ್ಸ್ ಆಗಿದ್ದಾರೆ. ಕೊಲೆಗಾರರು, ಭ್ರಷ್ಟಾಚಾರರನ್ನ ಕಟ್ಟಿಕೊಂಡು ರಿಪಬ್ಲಿಕ್ ಕಲ್ಬುರ್ಗಿ ಮಾಡಿಕೊಂಡಿದ್ದೀರಾ. ಕೊಲೆಗಡುಗಕರಿಗೆ ನಿಮ್ಮ ಪಕ್ಷದಲ್ಲಿ ರಕ್ಷಣೆ ಸಿಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಒಳ ಮೀಸಲಾತಿ ನೀಡದೆ ವಿಳಂಬ: ನಾಗಮೋಹನ್ ದಾಸ್, ಡಿ ಕುನ್ಹಾ ನಿಮ್ಮ ಆಸ್ಥಾನದ ವಿದ್ವಾಂಸರು..

ಇನ್ನು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತೀರ ವಿಳಂಬ ಮಾಡುತ್ತಿದ್ದು ನೇಮಕಾತಿಗಳು ಸ್ಥಗಿತಗೊಂಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ವಿರುದ್ದ ಕಿಡಿಕಾರಿದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ನ್ಯಾಯಧೀಶರಾದ ನಾಗಮೋಹನ್ ದಾಸ್, ಡಿ ಕುನ್ಹಾ ಇಬ್ಬರು ನಿಮ್ಮ ಆಸ್ಥಾನದ ವಿದ್ವಾಂಸರಾಗಿದ್ದಾರೆ. ಯಾವುದೇ ವಿಚಾರ ಬಂದರೂ ಇವರ ನೇತೃತ್ವದಲ್ಲೇ ಆಯೋಗ ರಚನೆ ಮಾಡಿ ಸುಳ್ಳು ವರದಿ ಪಡೆಯೋದು ನಿಮ್ಮ ಕೆಲಸ. ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡದೆ ವಿಳಂಬ ಮಾಡುತ್ತಿದ್ದೀರಾ. ನಾಗಮೋಹನ್ ದಾಸ್, ಡಿ ಕುನ್ಹಾ ಬಗ್ಗೆಯೂ ರಾಜ್ಯದಲ್ಲಿ ಚರ್ಚೆ ಆಗಬೇಕು ಎಂದು  ಡಿ ಕುನ್ಹಾ, ನಾಗಮೋಹನ್ ದಾಸ್ ವಿರುದ್ಧವೂ ಹರಿಹಾಯ್ದರು.

ಹಾಗೆಯೇ ಪ್ರಿಯಾಂಕ್ ಖರ್ಗೆ ರನ್ನ ಬಂದಿಸಬೇಕು ಅವರ ವಿಚಾರಣೆ ಆಗಬೇಕು ಎಂದು ಎಂ.ಜಿ ಮಹೇಶ್ ಆಗ್ರಹಿಸಿದರು.vtu

Key words: congress, State Government, Sadhana conference, BJP, spokesperson, Mysore

The post ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನನ್ನನ್ನು ಬೆಳೆಸಿದಂತೆ ಯತೀಂದ್ರರನ್ನು ರಾಜಕೀಯವಾಗಿ ಬೆಳೆಸಿ-ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್13,2026 (www.justkannada.in):  ರಾಜಕೀಯವಾಗಿ ನನ್ನನ್ನು ಬೆಳೆಸಿದಂತೆ ಪುತ್ರ ಯತೀಂದ್ರರನ್ನು ಬೆಳೆಸುವಂತೆ...

കടന്നുവന്ന കനല്‍വഴികള്‍ മറ്റുള്ളവര്‍ മറന്നാലും ഞാന്‍ മറക്കില്ല; എന്റെ ചോരവീണ മണ്ണില്‍ തലയുയര്‍ത്തിത്തന്നെ നില്‍ക്കും: കെ. സുധാകരന്‍

കണ്ണൂര്‍: നിയമസഭാ സ്ഥാനാര്‍ത്ഥി നിര്‍ണയത്തിലെ അതൃപ്തി പരസ്യമാക്കി കോണ്‍ഗ്രസ് നേതാവ് കെ.സുധാകരന്‍....

பண்ணையாளர்கள் அறிமுகப்படுத்திய பரிசுகள்… வளைக்கப்பட்ட வாக்காளர்கள்! | நினைவுச் சுவடுகள் 09

பரிசுகளால் வளைக்கப்பட்ட வாக்காளர்கள்நினைவுச் சுவடுகள்தமிழ்நாட்டு அரசியலில் தேர்தல்கள் என்றால் பொதுக்கூட்டம், மாநாடு,...

Heroes Body Transformation: సినిమాల కోసం బాడీ ట్రాన్స్‌ఫర్మేషన్.. యంగ్ హీరోల సరికొత్త లుక్స్ వైరల్..!

Heroes Body Transformation: ప్రస్తుతం టాలీవుడ్‌లో మేకోవర్ సీజన్ నడుస్తోంది. కొత్త...