4
May, 2026

A News 365Times Venture

4
Monday
May, 2026

A News 365Times Venture

ಸಾಫ್ಟ್ ವೇರ್ ವೃತ್ತಿಯೊಂದಿಗೆ ಸೇವಾಕಾರ್ಯ: ಪುನೀತ್ ಜಿ ಕೂಡ್ಲೂರುಗೆ ಒಲಿದ ಪ್ರಶಸ್ತಿ

Date:

ಬೆಂಗಳೂರು,ಜುಲೈ,12,2025 (www.justkannada.in): ಸಾಫ್ಟ್ ವೇರ್ ವೃತ್ತಿಯೊಂದಿಗೆ ವಿವಿಧ ಸೇವಾಕಾರ್ಯದಲ್ಲಿ ತೊಡಗಿರುವ ಪುನೀತ್ ಜಿ ಕೂಡ್ಲೂರು ಅವರಿಗೆ ‘ಎಕ್ಸೆಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಅಂಡ್ ಸೋಷಿಯಲ್ ಸರ್ವಿಸ್’ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಸದಾಶಿವನಗರದ ಹೈಡೆ ಪಾರ್ಕ್ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಐಕಾನ್ ಎಕ್ಸೆಲೆಂಟ್ ಅವಾರ್ಡ್ -2025 ರಲ್ಲಿ ಪುನೀತ್ ಜಿ ಕೂಡ್ಲೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಪುನೀತ್ ಜಿ ಕೂಡ್ಲೂರು ತಮ್ಮ ಸಾಫ್ಟ್ ವೇರ್ ವೃತ್ತಿಯೊಂದಿಗೆ ವಿದ್ಯಾಸ್ಪಂದನ  ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ 500 ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡುತ್ತಿದ್ದಾರೆ. ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸ್ಥಾಪಿಸಿ ಅದರಲ್ಲಿ ಹಲವು ವಿದ್ಯಾರ್ಥಿಗಳಿಗೆ ಶ್ಲೋಕ, ಸಂಸ್ಕಾರ ತರಗತಿಗಳನ್ನು ನಡೆಸುತ್ತಿದ್ದಾರೆ.

ಇದರ ಜೊತೆಗೆ ಪರಿಸರ, ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮ ಮಾಡುತ್ತಾ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿರುವ ಇವರ ಸೇವೆಯನ್ನು ಗುರುತಿಸಿ  ರಾಜ್ಯ ಮಟ್ಟದ ಸಮಾಜ ಸೇವೆ ಪ್ರಶಸ್ತಿ ಕರ್ನಾಟಕ ಎಕ್ಸಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಆಂಡ್ ಸೋಷಿಯಲ್ ಸರ್ವಿಸ್ ಪ್ರಶಸ್ತಿ  ನೀಡಲಾಗಿದೆ.

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಡಾ. ಅಂಜನಪ್ಪ, ಪ್ರಕೃತಿ ಪ್ರಸನ್ನ , ಪೂಜಾ ಎನ್ , ಡಾ. ಪೃಥು ಪಿ ಅದ್ವೈತ್, ಶೃತಿ ರಾಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.‌vtu

Key words: Social work, Puneet G Kudlur, Award

The post ಸಾಫ್ಟ್ ವೇರ್ ವೃತ್ತಿಯೊಂದಿಗೆ ಸೇವಾಕಾರ್ಯ: ಪುನೀತ್ ಜಿ ಕೂಡ್ಲೂರುಗೆ ಒಲಿದ ಪ್ರಶಸ್ತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഓണ്‍ലൈന്‍ ട്രേഡിങ് തട്ടിപ്പ്; 25 കോടിയോളം തട്ടിയെടുത്ത മുഖ്യ പ്രതിയടക്കം രണ്ട് പേര്‍ ഹൈദരാബാദില്‍ പിടിയില്‍

കൊച്ചി: ഓണ്‍ലൈന്‍ ട്രേഡിങിലൂടെ എറണാകുളം സ്വദേശിയില്‍ നിന്നും 25 ലക്ഷത്തോളം തട്ടിയെടുത്ത...

TVK: சென்னையில் 16 தொகுதிகளில் தவெக முன்னிலை; 'திமுக கோட்டை'யில் ஸ்டாலின், உதயநிதியின் நிலவரம் என்ன?

தமிழக சட்டமன்றத் தேர்தல் ஏப்ரல் 23-ம் தேதி நடந்தது. அதைத் தொடர்ந்து...

West Bengal Results 2026: బెంగాల్‌లో బీజేపీ దూకుడు.. మ్యాజిక్ ఫిగర్ దాటిన కమలం..

West Bengal Election Results: పశ్చిమ బెంగాల్ ఎన్నికల ఫలితాలు అడుగడుగున...

2027 അല്ല 2047 ആയാലും സമാജ്‌വാദി പാര്‍ട്ടി അധികാരത്തിലെത്തില്ല; അഖിലേഷിനെതിരെ പരിഹാസവുമായി യു.പി ഉപമുഖ്യമന്ത്രി

ലഖ്നൗ: ഉത്തര്‍പ്രദേശ് രാഷ്ട്രീയത്തില്‍ ഭരണകക്ഷിയായ ബി.ജെ.പിയും സമാജ്‌വാദി പാര്‍ട്ടിയും (എസ്.പി) തമ്മിലുള്ള...