ಬೆಂಗಳೂರು,ಜೂನ್,28,2025 (www.justkannada.in): ಬಿಜೆಪಿ ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯತೆ ಎದ್ದು ಕಾಣುತ್ತಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಹೊಂದಾಣಿಕೆ ಮಾಡಿಕೊಂಡ ವಿಚಾರದಲ್ಲಿ ಸಮನ್ವಯತೆ ಇರಬೇಕು. ಆದರೆ ಬಿಜೆಪಿ ಜೆಡಿಎಸ್ ನಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ ಅವರೇ ಬೇರೆ ಇವರೇ ಬೇರೆ ಎಂಬಂತೆ ಇದ್ದಾರೆ. ಹಿಂದಿನಂತೆ ಪಕ್ಷ ಕಟ್ಟುವ ಪದ್ದತಿ ಈಗ ಇಲ್ಲ. ಅವರವರಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಾರೆ. ಹೆಚ್ಚೇನು ಹೇಳಲ್ಲ ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಂದ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ ಕ್ಷೇತ್ರ ಬಗ್ಗೆಯಷ್ಟೇ ಗಮನಹರಿಸುತ್ತಿದ್ದೇನೆ. ಪಕ್ಷದ ವಿಚಾರ ಗೊತ್ತಿಲ್ಲ ಎನ್ನುವ ಮೂಲಕ ಮತ್ತೆ ಜೆಡಿಎಸ್ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ.
Ke words: Lack of coordination, between, BJP, JDS, MLA, GT Deve Gowda
The post ಬಿಜೆಪಿ-ಜೆಡಿಎಸ್ ನಡುವೆ ಸಮನ್ವಯತೆ ಕೊರತೆ – ಶಾಸಕ ಜಿ.ಟಿ ದೇವೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





