2
May, 2026

A News 365Times Venture

2
Saturday
May, 2026

A News 365Times Venture

ಲಂಚ ಸ್ವೀಕರಿಸುವಾಗ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

Date:

ಮೈಸೂರು,ಜೂನ್,21,2025 (www.justkannada.in): ಲಂಚ ಸ್ವೀಕರಿಸುವಾಗ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-4 ರ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಲೋಕಾಯುಕ್ತ ಬಲೆಗೆ ಬಿದ್ದವರು.

ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ ರೂ. 25,000/-(ಇಪ್ಪತ್ತೈದು ಸಾವಿರ ರೂಪಾಯಿಗಳು) ಲಂಚದ ಹಣಕ್ಕೆ ಇಬ್ಬರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಇಂದು ಆರೋಪಿಗಳಾದ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಅವರು ವ್ಯಕ್ತಿಯಿಂದ ಲಂಚದ ಹಣವನ್ನು ಪಡೆದುಕೊಳ್ಳುವಾಗ ಮೈಸೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.

ಪೊಲೀಸ್ ಮಹಾನಿರ್ದೇಶಕ  ಮನೀಷ್ ಕರ್ಬೀಕರ್ ಮತ್ತು ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣೇಶ್ವರರಾವ್‌ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕ  ಉದೇಶ.ಟಿ.ಜೆ, ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್.ಪಿ, ಲೋಕೇಶ್, ರವಿಕುಮಾರ್, ಸಿಬ್ಬಂದಿಯವರುಗಳಾದ ಲೋಕೇಶ್.ಆ‌ರ್.ಎನ್, ಗೋಪಿ.ಹೆಚ್.ಎನ್, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್‌ಗೌಡ, ಮೋಹನ್‌ ಕುಮಾ‌ರ್, ಲೋಕೇಶ್, ದಿನೇಶ್, ಈ ಕಾರ್ಯಾಚರಣೆ ನಡೆದಿದೆ.vtu

Key words: Revenue officer, bill collector, Lokayukta, trap Mysore

The post ಲಂಚ ಸ್ವೀಕರಿಸುವಾಗ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഞങ്ങള്‍ കടല്‍ക്കൊള്ളക്കാരെപ്പോലെ’; ഇറാനിയന്‍ കപ്പലുകള്‍ പിടിച്ചെടുക്കുന്നതിനെക്കുറിച്ച് ട്രംപ്

വാഷിങ്ടണ്‍: ഹോര്‍മുസ് കടലിടുക്കില്‍ ഇറാനിയന്‍ കപ്പലുകള്‍ പിടിച്ചെടുക്കുന്ന യു.എസ് നാവികസേനയുടെ നീക്കത്തെ...

`மனக்குமுறல்கள் போராட்டமாக வெடிப்பது இயல்புதான்' – கோவையில் செல்வப்பெருந்தகை பேட்டி

தமிழ்நாடு அரசியல் களத்தில் பரபரப்பாக 2026 சட்டமன்றத் தேர்தல் நடந்து முடிந்திருக்கிறது....

KKR Vs SRH: సన్ రైజర్స్ హైదరాబాద్ ఆరో విజయానికి బ్రేక్..? కేకేఆర్‌లోకి స్టార్ ప్లేయర్ ఎంట్రీ..

రేపు (మే3,2026) ఆదివారం మధ్యాహ్నం 3:30 గంటలకు ఉప్పల్ స్టేడియంలో సన్‌రైజర్స్...

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಿನ್ನೆಲೆ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು

ಬೆಂಗಳೂರು,ಮೇ,2,2026 (www.justkannada.in):  ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ...