1
May, 2026

A News 365Times Venture

1
Friday
May, 2026

A News 365Times Venture

ವಿಮಾನ ದುರಂತ:  ಎಟಿಸಿಗೆ ಪೈಲಟ್ ಕಳುಹಿಸಿದ್ದ ಕೊನೆಯ ಸಂದೇಶ ಬಯಲು

Date:

ಅಹಮದಾಬಾದ್, ಜೂನ್, 14,2025 (www.justkannada.in):  ಅಹಮದಾಬಾದ್​ ಮೇಘಾಶಿ ನಗರದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು  241 ಜನ ಸಾವನ್ನಪ್ಪಿದ ಘಟನೆ ಸಂಬಂಧ ಇದೀಗ ಮಾಹಿತಿಯೊಂದು ಬೆಳಕಿಗೆ ಬಂದಿದೆ. ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಸುಮಿತ್ ಸಭರ್ವಾಲ್  ಎಟಿಸಿಗೆ  ಕಳುಹಿಸಿದ್ದ ಸಂದೇಶ ಬಹಿರಂಗಗೊಂಡಿದೆ.

ಪೈಲಟ್ ಸುಮಿತ್ ಸಭರ್ವಾಲ್ ‘ಮೇಡೇ’ ಸಂದೇಶ ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಹೇಳಿದ್ದರು ಎಂಬುದು ಆಡಿಯೋ ಸಂದೇಶದಿಂದ ಗೊತ್ತಾಗಿದೆ. ಅಪಘಾತಕ್ಕೀಡಾದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಕಮಾಂಡರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು.

ಪೈಲಟ್ ಕೊನೆಯ ಸಂದೇಶವಿದು..

ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, ‘ಮೇಡೇ, ಮೇಡೇ, ಮೇಡೇ’ ಎಂದು ಸಂದೇಶ ಕಳುಹಿಸಿದ್ದರು. ಅಲ್ಲದೆ, ‘ಟೇಕಾಫ್ ​ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರಂತೆ.

ನಂತರ ವಿಮಾನವು ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್​​​ಪೋರ್ಟ್​ ಪರಿಧಿಯ ಹೊರಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿದ್ದು ಈ ದುರಂತದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, ವೈದ್ಯಕೀಯ ಕಾಲೇಜು ಹಾಸ್ಟೆಲ್​​​ನಲ್ಲಿದ್ದವರೂ ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.vtu

Key words: Plane crash, Pilot,  last message, ATC,  revealed

The post ವಿಮಾನ ದುರಂತ:  ಎಟಿಸಿಗೆ ಪೈಲಟ್ ಕಳುಹಿಸಿದ್ದ ಕೊನೆಯ ಸಂದೇಶ ಬಯಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘കടല്‍ക്കൊള്ള’; സുമുദ് ഫ്‌ളോട്ടില്ല തടഞ്ഞ് ഇസ്രഈല്‍, 175 സന്നദ്ധപ്രവര്‍ത്തകര്‍ കസ്റ്റഡിയില്‍

  ജെറുസലേം: ഗസയിലേക്ക് സഹായമെത്തിക്കുന്ന ഫ്‌ളോട്ടില്ല കപ്പലുകള്‍ തടഞ്ഞ് ഇസ്രഈലി സെന്യം....

"இதுதான் நீங்கள் செலுத்தும் தேர்தல் பில்; அடுத்து பெட்ரோல், டீசல்" – கேஸ் விலை உயர்வு பற்றி ராகுல்

இந்தியாவில் வணிகப் பயன்பாட்டிற்கான எரிவாயு சிலிண்டர் விலை ஒரே நாளில் 993...

TRS : తెలంగాణ రక్షణ సేనలోకి మాజీ మంత్రి.. పార్టీ అధ్యక్షురాలు కవితతో భేటీ

తెలంగాణ రాజకీయాల్లో సీనియర్ నాయకుడు, మాజీ మంత్రి బోడ జనార్దన్ కీలక...

ಸಿಲಿಂಡರ್ ದರ ಏರಿಕೆ: ಇದು ಆಡಳಿತವಲ್ಲ, ಸಂಘಟಿತ ಲೂಟಿ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ​ 01,2026 (www.justkannada.in): ವಾಣಿಜ್ಯ ಬಳಕೆಯ ಸಿಲಿಂಡರ್ ದರ...