27
August, 2026

A News 365Times Venture

27
Thursday
August, 2026

A News 365Times Venture

ವಿಮಾನ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ, 3 ತಿಂಗಳಲ್ಲಿ ವರದಿ-ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು

Date:

ನವದೆಹಲಿ,ಜೂನ್,14,2025 (www.justkannada.in):  ಗುಜರಾತ್ ನ ಅಹಮದಾಬಾದ್ ನ ಮೇಘಾಶಿ ನಗರದಲ್ಲಿ  ನಡೆದ ವಿಮಾನ ಪತನ ದುರಂತ ಕುರಿತು ಉನ್ನತ ಮಟ್ಟದ ತನಿಖೆ ನಡೆಯಲಿದ್ದು 3 ತಿಂಗಳಲ್ಲಿ ವರದಿ ಬರಲಿದೆ ಎಂದು ಕೇಂದ್ರ ವಿಮಾನಯಾನ ಇಲಾಖೆ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸ ಮಾಹಿತಿ ನೀಡಿದ ಕೇಂದ್ರ ವಿಮಾನಯಾನ ಇಲಾಖೆ ಸಚಿವ ರಾಮ್ ಮೋಹನ್ ನಾಯ್ಡು, ಡ್ರೀಮ್ ಲೈನರ್ ವಿಮಾನದಲ್ಲಿ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲನೆ  ನಡೆಸಲಾಗುತ್ತಿದೆ. ಬೋಯಿಂಗ್ 787 ವಿಮಾನಗಳಲ್ಲಿ ಭದ್ರತೆ ಪರಿಶೀಲನೆ ನಡೆಸಲಾಗುತ್ತಿದೆ.  ಕೇಂದ್ರ ಗೃಹ ಸಚಿವಾಲಯದ ಉಸ್ತುವಾರಿಯಲ್ಲಿ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಎಐ ವಿಮಾನ ದುರಂತದ ಬಗ್ಗೆ ಮೂರು ತಿಂಗಳಲ್ಲಿ ವರದಿ ಬರಲಿದೆ. ಘಟನೆಯಲ್ಲಿ ಮೃತಪಟ್ಟವರ ಡಿಎನ್ ಎ ಪರೀಕ್ಷೆ ನಡೆಸಿ ಶವಗಳನ್ನ ಕುಟುಂಬಸ್ಥರಿಗೆ ನೀಡಲಾಗುತ್ತಿದೆ ಎಂದರು.

ಕಳೆದ 2 ದಿನದಿಂದ ಬಹಳ ಕಠಿಣ ಪರಿಸ್ಥಿತಿಯನ್ನ ಎದುರಿಸುತ್ತಿದ್ದೇವೆ. ರಸ್ತೆ ಅಪಘಾತದಲ್ಲೇ ನಾನು ತಂದೆಯನ್ನ ಕಳೆದುಕೊಂಡಿದ್ದೇನೆ.  ತಮ್ಮವರನ್ನ ಕಳೆದುಕೊಂಡ ನೋವನ್ನ ನಾನೂ ಅನುಭವಿಸಿದ್ದೇನೆ.  ರಕ್ಷಣಾ ತಂಡಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲಸ ನಡೆಸಿವೆ  ದುರಂತ ಸಂಭವಿಸಿದ ಸ್ಥಳದಲ್ಲಿ ಈಗಾಗಲೇ ತನಿಖೆ ಆರಂಭವಾಗಿದೆ. ತಾಂತ್ರಿಕ ಸಮಿತಿಯ  ತನಿಖೆ ನಂತರ ನಿಖರ ಕಾರಣ ತಿಳಿದು ಬರಲಿದೆ ಎಂದು ರಾಮ್ ಮೋಹನ್ ನಾಯ್ಡು ತಿಳಿಸಿದರು.vtu

Key words: plane, crash, Ahmedabad, investigation, report, Union Minister, Ram Mohan Naidu

The post ವಿಮಾನ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ, 3 ತಿಂಗಳಲ್ಲಿ ವರದಿ-ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೈಸೂರು ದಸರಾ 2026: ಗಜಪಯಣಕ್ಕೆ ಅದ್ದೂರಿ ಚಾಲನೆ

ಮೈಸೂರು,ಆಗಸ್ಟ್, 26,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿ...

യു.എന്‍.ആര്‍.ഡ.ബ്ല്യു.എ പരിശീലന കേന്ദ്രം പിടിച്ചെടുത്ത ഇസ്രഈല്‍ നടപടിയെ അപലപിച്ച് ബ്രിട്ടിഷ് മന്ത്രി

ജെറുസലേം: യു.എന്‍ ഏജന്‍സിയായ യുനൈറ്റഡ് നേഷന്‍സ് റിലീഫ് ആന്‍ഡ് വര്‍ക്‌സ് ഏജന്‍സി...

Nepal Flood: நேபாளத்தில் கடும் வெள்ள பெருக்கு; பலி எண்ணிக்கை 46-ஆக அதிகரிப்பு!| Live Updates

நேபாளத்தில் கடும் வெள்ளம் - முதல்வர் அறிக்கை!நேபாளத்தில் கடும் வெள்ள பாதிப்பு...

IISc Study: ఆవు ఎంజైమ్‌తో ప్రమాదకర బ్యాక్టీరియాకు చెక్.. IISc సంచలన పరిశోధన

IISc Study:  ఇండియన్ ఇన్‌స్టిట్యూట్ ఆఫ్ సైన్స్ (IISc) శాస్త్రవేత్తలు పరిశోధన...