26
May, 2026

A News 365Times Venture

26
Tuesday
May, 2026

A News 365Times Venture

ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ- ಆರ್.ಅಶೋಕ್

Date:

ಬೆಂಗಳೂರು, ಮೇ, 9,2025 (www.justkannada.in): ಹಿಂದೂ ಕಾರ್ಯಕರ್ತ  ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಂಗ್ರೆಸ್  ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಇದನ್ನು ಎನ್‌ಐಎಗೆ  ವಹಿಸಲು ರಾಜ್ಯಪಾಲರಿಗೆ ಕೋರಲಾಗಿದೆ . ಕಾಂಗ್ರೆಸ್‌ ಸರ್ಕಾರ ಇಂತಹವರ ವಿಚಾರದಲ್ಲಿ ಮೃದು ಧೋರಣೆ ತಾಳಿದೆ. . ಪಾಕಿಸ್ತಾನ ಜಿಂದಾಬಾದ್‌ ಘೋಷಣೆಗೆ, ಭಯೋತ್ಪಾದನೆ ಚಟುವಟಿಕೆಗೆ ಪ್ರೇರಣೆ ಕೊಡುವವರ ಸಂಪರ್ಕ ಇವರಿಗಿದೆ. ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ ಎಂದು  ವಿಪಕ್ಷ ನಾಯಕ ಆರ್‌.ಅಶೋಕ್ ಹೇಳಿಕೆ ನೀಡಿದರು.

ಇಂದು ರಾಜ್ಯಪಾಲ ಥಾವರ್ ಚಂದ್ ಅವರನ್ನ ಬಿಜೆಪಿ ನಾಯಕರು ಭೇಟಿಯಾಗಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಎನ್ ಐಎಗೆ ವಹಿಸುವಂತೆ ಮನವಿ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ, ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಕೊಲೆಯ ಬಗ್ಗೆ ವಿವರಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪಾರಿ ನೀಡಿರುವ ಪ್ರಕರಣ. ಮುಸ್ಲಿಂ ಹುಡುಗನ ಕೊಲೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಕಾಂಗ್ರೆಸ್‌ 25 ಲಕ್ಷ ರೂ. ಪರಿಹಾರ ನೀಡಿದ್ದು, ಆ ಹಣವನ್ನು ಬಳಸಿಯೇ ಸುಪಾರಿ ನೀಡಲಾಗಿದೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವವರಿಗೆ ಆಪರೇಶನ್‌ ಸಿಂಧೂರದಂತೆಯೇ ಶಾಸ್ತಿ ಆಗಬೇಕಿದೆ. ಇದಕ್ಕೆ ಅಂತ್ಯ ಕಾಣಿಸಬೇಕಿದೆ. ಇದಕ್ಕಾಗಿ ಪ್ರಕರಣವನ್ನು ಎನ್‌ಐಎ ಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ ಎಂದು ತಿಳಿಸಿದರು.

Key words: Pakistan, connection, coastal area,  R. Ashok

The post ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അന്‍സിബയുടെ മനസില്‍ ആരോ വിഷം കുത്തിവെച്ചിട്ടുണ്ട്; അമ്മ എക്‌സിക്യൂട്ടീവ് കമ്മിറ്റി മുഴുവന്‍ പിരിച്ച് വിടണം: മല്ലികാ സുകുമാരന്‍

കൊച്ചി: താരസംഘടനായ അമ്മയുമായി ബന്ധപ്പെട്ട വിഷയത്തില്‍ രൂക്ഷ വിമര്‍ശനവുമായി നടി മല്ലികാ...

ஈரான் மீது அமெரிக்கா மீண்டும் தாக்குதல்; போர் நிறுத்தத்தின்போது இந்தத் தாக்குதல் ஏன்?

'ஈரானுடன் இறுதிக்கட்ட பேச்சுவார்த்தையை நெருங்கிவிட்டோம்' என்று அமெரிக்க அதிபர் ட்ரம்ப் கூற,...

Minister Narayana: అమరావతిపై వైసీపీ తప్పుడు ప్రచారం.. మంత్రి నారాయణ ఫైర్

Minister Narayana: రాజధాని అమరావతి నిర్మాణంపై వైసీపీ నేతలు చేస్తున్న వ్యాఖ్యలపై...

ಬಿಐಎಎಲ್ ನಲ್ಲಿ ಕೆಎಸ್ ಐಐಡಿಸಿಗೆ 16.49 ಕೋಟಿ ರೂ. ಲಾಭಾಂಶ: ಹಸ್ತಾಂತರ

ಬೆಂಗಳೂರು,ಮೇ,25,2026 (www.justkannada.in):  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್)...