26
March, 2026

A News 365Times Venture

26
Thursday
March, 2026

A News 365Times Venture

ಗಾಯಕ ಸೋನು ನಿಗಮ್ ಶೀಘ್ರ ಬಂಧನಕ್ಕೆ ಒತ್ತಾಯ; ಕರವೇ ಪ್ರತಿಭಟನೆ

Date:

ಬೆಂಗಳೂರು, ಮೇ,5,2025 (www.justkannada.in): ಪಹಲ್ಗಾಮ್ ದಾಳಿಗೆ  ಕನ್ನಡ ತಳುಕು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಗಾಯಕ ಸೋನು ನಿಗಮ್ ವಿರುದ್ದ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಈಗಾಗಲೇ ಬೆಂಗಳೂರಿನ ಅವಲಹಳ್ಳಿ ಪೊಲೀಸ್  ಠಾಣೆಯಲ್ಲಿ ಎಫ್ ಐಆರ್ ಆಗಿದೆ. ಇದೀಗ ಸೋನು ನಿಗಮ್ ಅವರನ್ನ ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಈ ಸಂಬಂಧ ಸೋನು ನಿಗಮ್ ವಿರುದ್ದ ಇಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ನಾರಾಯಣಗೌಡರು, ಕನ್ನಡವನ್ನ ಭಯೊತ್ಮಾದನಾ ದಾಳಿಗೆ ಹೋಲಿಸಿದ್ದು ಸರಿಯಲ್ಲ. ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ ಹಾಡಲ್ಲ ಎಂದು ಹೇಳಬಹುದಿತ್ತು. ಗಾಯಕ ಸೋನು ನಿಗಮ ಶೀಘ್ರವೇ ಬಂಧಿಸಬೇಕು. 4 ದಿನವಾದ್ರೂ ಜೈಲಿಗೆ ಕಳುಸಿದ್ರೆ ಪರಿವರ್ತನೆ ಆಗುತ್ತೆ ಎಂದರು.

ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ,  ಸೋನುನಿಗಮ್ ದುರ್ವರ್ತನೆ ಇದೇ ಮೊದಲಲ್ಲ.  ಹಿಂದಿಯಲ್ಲಿ ಹಾಡಿಗೆ 40 ಸಾವಿರ ರೂ. ಪಡೆಯುತ್ತಾರೆ.  ಕನ್ನಡದಲ್ಲಿ 2 ಲಕ್ಷ  ತೆಗೆದುಕೊಂಡು ಆಹಂ ತೋರಿಸುತ್ತಾರೆ. ಕೆಲ ನಿರ್ಮಾಪಕರು ದೂರಿದ್ದಾರೆ ಎಂದರು.

Key words: singer, Sonu Nigam,arrest, Karave, protests

The post ಗಾಯಕ ಸೋನು ನಿಗಮ್ ಶೀಘ್ರ ಬಂಧನಕ್ಕೆ ಒತ್ತಾಯ; ಕರವೇ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Iran War: అప్పటి వరకు యుద్ధం ఆగదు.. అమెరికాకు ఇరాన్ షాక్..

Iran War: యుద్ధం ముగించేందుకు అమెరికా పెట్టిన 15 షరతుల్ని ఇరాన్...

ನಮ್ಮಲ್ಲಿ ಯಾರೇ ಸಿಎಂ ಆದ್ರೂ ಖುಷಿ ಪಡ್ತೇನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,25,2026 (www.justkannada.in):  ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ...

പ്രതിഭയ്‌ക്കെതിരായ സ്ത്രീവിരുദ്ധ പരാമര്‍ശം; ഇര്‍ഷാദിനെതിരെ നടപടിയുമായി ലീഗും യു.ഡി.എഫും

  കായംകുളം: യു. പ്രതിഭ എം.എല്‍.എയ്‌ക്കെതിരായ സ്ത്രീവിരുദ്ധ പരാമര്‍ശത്തില്‍ മുസ്‌ലിം ലീഗ്...

அழுத்தம் கொடுக்கும் வானதி சீனிவாசன்; அப்செட் அண்ணாமலை; கோவை வடக்கு தொகுதிக்கு உச்சகட்ட போட்டி

2021 சட்டமன்றத் தேர்தலில் அதிமுக கூட்டணியில், பாஜகவுக்கு கோவையில் ஒரு தொகுதி...