26
March, 2026

A News 365Times Venture

26
Thursday
March, 2026

A News 365Times Venture

ಲಾರಿ ಮುಷ್ಕರ: ಮೈಸೂರಿನಲ್ಲಿ 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್

Date:

ಮೈಸೂರು,ಏಪ್ರಿಲ್,15,2025 (www.justkannada.in):  ಡೀಸಲ್ ಬೆಲೆ ಏರಿಕೆ, ಟೋಲ್ ದರ  ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಲಾರಿ ಮಾಲೀಕರ, ಚಾಲಕರು  ಮುಷ್ಕರ ಕೈಗೊಂಡಿದ್ದು ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾರಿ ಮುಷ್ಕರ ಹಿನ್ನೆಲೆಯಲ್ಲಿ ಲಾರಿಗಳು ರಸ್ತೆಗಿಳಿಯದೆ ಹಾಗೆ ನಿಂತಿದ್ದು, ಸುಮಾರು 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್ ಆಗಿದೆ. ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧಿಸಲಾಗಿದೆ.

ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ ರದ್ದುಗೊಳಿಸಬೇಕು, ಆರ್ಟಿಓ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್ ಸಿ ಶುಲ್ಕವನ್ನ ಕಡಿಮೆ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಮುಂದಿಟ್ಟು ಲಾರಿ ಮಾಲೀಕರ ಚಾಲಕರ ಮುಷ್ಕರ ನಡೆಯುತ್ತಿದ್ದು, ನಗರದ ಬನ್ನಿಮಂಟಪದ ಗೂಡ್ಸ್ ಶೆಡ್ ಬಳಿ ಲಾರಿಗಳು ರಸ್ತೆಗಿಳಿಯದೆ ಹಾಗೆಯೇ ನಿಂತಿವೆ.

ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸಗೊಬ್ಬರವನ್ನ ಅನ್ ಲೋಡ್ ಮಾಡದೆ ಹಾಗೆಯೇ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರದ ಭಾಗಿಯಾಗಿದ್ದು, ಬೇಡಿಕೆ ಈಡೇರುವವರೆಗೂ ಸೇವೆ ಆರಂಭಿಸಲ್ಲ ಎಂದು ಮೈಸೂರು ಲಾರಿ ಮಾಲೀಕರ ಮತ್ತು ಚಾಲಕರ ಒಕ್ಕೂಟ ಪಟ್ಟು ಹಿಡಿದಿದೆ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

Key words: Lorry strike,  9,000 goods lorries, Bandh, Mysore

The post ಲಾರಿ ಮುಷ್ಕರ: ಮೈಸೂರಿನಲ್ಲಿ 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

எம்.ஜி.ஆருக்கு முன் தமிழக சட்டமன்றம் சென்ற முதல் நடிகர்; யார் தெரியுமா?

திரைத்துறையிலிருந்து தமிழக சட்டமன்றத்திற்குச் சென்ற முதல் நபர் என்றவுடன் நம் நினைவுக்கு...

Yadadri: భార్యపై కోపం.. కన్న కూతురిని పొట్టన పెట్టుకున్న కసాయి తండ్రి..

ఆ చిన్నారికి రెండేళ్లకే నూరేళ్లూ నిండిపోయాయి. కన్న తండ్రి ఘాతుకానికి బలైంది....

ಗುಣಮಟ್ಟ ನಮೂದಿಸುವ, ಐಎಸ್‌ ಐ, ಹಾಲ್ ಮಾರ್ಕ್ ಗುರುತಿರುವ ವಸ್ತುಗಳನ್ನು ಖರೀದಿಸಿ-ಎ.ಕೆ ನವೀನ ಕುಮಾರಿ

ಮೈಸೂರು, ಮಾರ್ಚ್, 25,2026 (www.justkannada.in): ಗ್ರಾಹಕರು ಆಹಾರ, ಚಿನ್ನ ವಸ್ತುವನ್ನು...

യുദ്ധം അവസാനിപ്പിക്കാന്‍ അഞ്ച് നിബന്ധനകള്‍; യുദ്ധം എപ്പോള്‍ അവസാനിപ്പിക്കണമെന്ന് തീരുമാനിക്കുന്നത് ട്രംപ് ആയിരിക്കില്ല: ഇറാന്‍

ടെഹ്‌റാന്‍: അമേരിക്കന്‍ പ്രസിഡന്റ് ഡൊണാള്‍ഡ് ട്രംപിന്റെ നേതൃത്വത്തില്‍ മുന്നോട്ടുവെച്ച സമാധാന നിര്‍ദേശം...