1
May, 2026

A News 365Times Venture

1
Friday
May, 2026

A News 365Times Venture

ಬಿಟ್ಟುಹೋದ ಹೆಂಡತಿ ಮೇಲಿನ ಸಿಟ್ಟು: ಮೂವರನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

Date:

ಚಿಕ್ಕಮಗಳೂರು, ಏಪ್ರಿಲ್,2,2025 (www.justkannada.in): ಪತಿಯೊಬ್ಬ ಬಿಟ್ಟುಹೋದ ಹೆಂಡತಿಯ ಮೇಲಿನ ಸಿಟ್ಟಿಗೆ ಮೂವರನ್ನು ಹತ್ಯೆ ಮಾಡಿ ಬಳಿಕ  ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ಘಟನೆ. ರತ್ನಾಕರ್ ಎಂಬಾತನೇ ತನ್ನ ಮಗಳು ಮೌಲ್ಯ (7) ‌, ಅತ್ತೆ ಜ್ಯೋತಿ(50),  ನಾದಿನಿ‌ ಸಿಂಧು(36) ಮೂವರನ್ನ ನಾಡ  ಬಂದೂಕಿನಿಂದ ಗುಂಡು ಹಾರಿಸಿ ‌ ಹತ್ಯೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ನಾಲ್ಕು ಮೃತ ದೇಹಗಳನ್ನು  ಆಸ್ಪತ್ರೆ ರವಾನೆ ಮಾಡಲಾಗಿದೆ.

ಹತ್ಯೆಗೂ ಮುನ್ನ ರತ್ನಾಕರ್  ಸೆಲ್ಫಿ ವಿಡಿಯೋ ಮಾಡಿ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದ್ದನು. ಎರಡು ವರ್ಷಗಳ ಹಿಂದೆ ರತ್ನಾಕರ್ ನಿಂದ ಪತ್ನಿ ದೂರವಾಗಿದ್ದಳು. ಮಗಳನ್ನು ಬಿಟ್ಟು ಪತ್ನಿ ಬೆಂಗಳೂರು ಸೇರಿದ್ದಳು. ಈ ನಡುವೆ  ಹೊಸತೊಡಕು ಹಬ್ಬದ ಹಿನ್ನೆಲೆ ಅತ್ತೆ ಜ್ಯೋತಿ ಶಾಲೆಯಿಂದ ಮೊಮ್ಮಗಳನ್ನ ಮನೆಗೆ ಕರೆದೊಯ್ದಿದ್ದರು.

ಈ ವೇಳೆ  ರತ್ನಾಕರ್ ಏಕಾಏಕಿ ಮನೆಗೆ ನುಗ್ಗಿ ಮೂವರ ಮೇಲೆ ಗುಂಡು ಹಾರಿಸಿದ್ದಾನೆ. ಹತ್ಯೆ ನಡೆದ ಮನೆಯ ಹಿಂಭಾಗದ ಕಾಫಿತೋಟದಲ್ಲಿ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ‌ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

Key words: Chikkamagalur, firing, kills,  three member, commits suicide

The post ಬಿಟ್ಟುಹೋದ ಹೆಂಡತಿ ಮೇಲಿನ ಸಿಟ್ಟು: ಮೂವರನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നെതന്യാഹുവിന് മാപ്പ് നല്‍കാന്‍ ഇസ്രഈല്‍ പ്രസിഡന്റിന് മേല്‍ ട്രംപിന്റെ കടുത്ത സമ്മര്‍ദം; ‘മാപ്പ് നല്‍കിയാല്‍ ഹെര്‍സോഗ് നാഷണല്‍ ഹീറോയാകും’

  വാഷിങ്ടണ്‍: അഴിമതിക്കേസുകളില്‍ വിചാരണ നേരിടുന്ന ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹുവിന്...

'மோடியின் வசூல் வேட்டை தொடர்கிறது' – வணிக சிலிண்டர் விலை உயர்வுக்கு காங்கிரஸ் கண்டனம்

வணிகப் பயன்பாட்டிற்கான சிலிண்டர் விலை ஒரே நாளில் அதிரடியாக உயர்ந்துள்ளதால் பொதுமக்கள்...

Shocking: 55 ఏళ్ల గ్రామపెద్దతో లేచిపోయిన 22 ఏళ్ల భార్య..

Shocking: 22 ఏళ్ల వివాహిత మహిళ, తన కన్నా 33 ఏళ్ల...

ಎಲೆಕ್ಷನ್ ಮುಗಿದ ತಕ್ಷಣವೇ ಬೆಲೆ ಏರಿಕೆ: ಕೇಂದ್ರದ ವಿರುದ್ದ ಡಿಸಿಎಂ ಡಿಕೆಶಿ ಗುಡುಗು

ಬೆಂಗಳೂರು,ಮೇ,1,2026 (www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 993 ರೂ....