17
March, 2026

A News 365Times Venture

17
Tuesday
March, 2026

A News 365Times Venture

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಶಿಷ್ಟಾಚಾರ ಉಲ್ಲಂಘನೆ ಕುರಿತು ತನಿಖೆಗೆ ಸರ್ಕಾರ ಆದೇಶ

Date:

ಬೆಂಗಳೂರು, ಮಾರ್ಚ್ 11,2025 (www.justkannada.in): ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್  ಪ್ರಕರಣ ಸಂಬಂಧ ಶಿಷ್ಟಾಚಾರ ಉಲ್ಲಂಘನೆ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿದೆ. ಪ್ರಕರಣ ಸಂಬಂಧ ಇದೀಗ  ರನ್ಯಾರಾವ್ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಸಂಕಷ್ಟ ಎದುರಾಗಿದೆ.

ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ಬಗ್ಗೆ ಒಂದು ವಾರದ ಒಳಗೆ ತನಿಖೆ ನಡೆಸುವಂತೆ ಗೃಹ ಇಲಾಖೆ ಸೂಚಿಸಿದೆ.

ನಟಿ ರನ್ಯಾ ಚಿನ್ನ ಸಾಗಾಣೆ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವೇನು? ಕೇಸ್​​ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿ ನೇಮಿಸಲಾಗಿದೆ. ಇವರು ತಕ್ಷಣ ತನಿಖೆ ಪ್ರಾರಂಭಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕಿದೆ.

Key words:  Ranya Rao, gold smuggling case, Government

The post ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಶಿಷ್ಟಾಚಾರ ಉಲ್ಲಂಘನೆ ಕುರಿತು ತನಿಖೆಗೆ ಸರ್ಕಾರ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಿರ್ಸಿ ವೃತ್ತದಿಂದ ಮತ್ತೊಂದು ಮೇಲ್ಸೇತುವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,17,2026 (www.justkannada.in):  ಚಾಮರಾಜಪೇಟೆ ಸಿರ್ಸಿ ಜಂಕ್ಷನ್‌ನಿಂದ ಬಿಎಚ್ ಇಎಲ್ ಕಿಮಕೋ...

അമേരിക്കയ്ക്ക് നിങ്ങളോട് കൂറില്ല, ഇസ്രഈല്‍ നിങ്ങളുടെ ശത്രുവാണ്; ഇസ്‌ലാമിക രാഷ്ട്രങ്ങള്‍ക്ക് മുന്നറിയിപ്പുമായി ലാരിജാനി

ടെഹ്റാന്‍: ഇസ്‌ലാമിക രാജ്യങ്ങള്‍ക്ക് തുറന്ന കത്തുമായി ഇറാന്റെ സുരക്ഷാ കൗണ്‍സില്‍ സെക്രട്ടറി അലി...

Rajinikanth: 'காலம் பேசாது ஆனால் காத்திருந்து பதில் சொல்லும்' – ஆதவ் அர்ஜுனாவுக்கு ரஜினிகாந்த் பதில்

நடிகர் ரஜினிகாந்த் அரசியலுக்கு வராதது குறித்து தவெக நிர்வாகி ஆதவ் அர்ஜுனா...

Haryana Shocker: లవర్‌కు రంగులు రాశాడని, ఫ్రెండ్ దారుణహత్య..

Haryana Shocker: తన ప్రేయసికి రంగులు పూశాడనే కారణంగా ఒక వ్యక్తి...