19
August, 2026

A News 365Times Venture

19
Wednesday
August, 2026

A News 365Times Venture

ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಕೇಸ್: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ವಕ್ತಾರ ಆಗ್ರಹ

Date:

ಮೈಸೂರು,ಫೆಬ್ರವರಿ,11,2025 (www.justkannada.in): ಶಾಂತವಾಗಿದ್ದ ಮೈಸೂರಿನಲ್ಲಿ ರಾತ್ರೋರಾತ್ರಿ ಶಾಂತಿ ಕದಡುವ ಕೆಲಸ ನಡೆದಿದೆ. ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಮಾದರಿಯಲ್ಲಿ ಮೈಸೂರಿನಲ್ಲೂ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದೆ‌.  ಹೀಗಾಗಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಕ್ತಾರ ಎಂ. ಜಿ ಮಹೇಶ್ ಆಗ್ರಹಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ಈಗಿ‌ನ ರಾಜ್ಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಐದನೇ ಘಟನೆ ಇದಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ನೆಪ ಮಾತ್ರಕ್ಕೆ ಸರ್ಕಾರ ಇದೆಯಷ್ಟೇ. ಪೊಲೀಸ್ ಠಾಣೆ ಬಳಿಯೇ ಸರ್ತನ್ ಕಿ ಜುದಾ ಎಂದು ಘೋಷಣೆ ಕೂಗುತ್ತಾರೆ. ಗೃಹ ಸಚಿವರಿಗೆ ತಾಕತ್ ಇಲ್ಲ. ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಕತ್ತು ಸೀಳುವ ಕೆಲಸ ಮಾಡಿದರು. ಆದರೂ ತನ್ವೀರ್ ಸೇಠ್ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನೀವು ಈ ರೀತಿ ಮಾಡಿದರೆ ಹೆದರುವುದಿಲ್ಲ. ನಾವೇನು ಬಳೆ ತೊಟ್ಟಿಕೊಂಡಿಲ್ಲ ಎಂದು ಹರಿಹಾಯ್ದರು.

ರಾತ್ರೋರಾತ್ರಿ ಸಾವಿರಾರು ಜನರು ಜಮಾವಣೆ ಆಗಿದ್ದಾರೆ. ಇಂಟೆಲಿಜೆನ್ಸ್ ಫುಲ್ ಫೇಲ್ಯೂರ್ ಆಗಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಮೈಸೂರಿನಲ್ಲಿ ‌ನಡೆದಿರುವ ಅಹಿತಕರ ಘಟನೆ ಕಾಂಗ್ರೆಸ್ ನ ಷಡ್ಯಂತ್ರದ ಒಂದು ಭಾಗವಾಗಿದೆ. ಉದಯಗಿರಿಗೆ, ಪೊಲೀಸರು ಮಾತ್ರವಲ್ಲದೇ ಮಾಧ್ಯಮ ಪ್ರತಿನಿಧಿಗಳು ನಿರ್ಭೀತಿಯಿಂದ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು  ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್  ಆಗ್ರಹಿಸಿದರು.

ಕಾಂಗ್ರೆಸ್ ಗೆ ಮುಸ್ಲಿಮರು ವೋಟ್ ಹಾಕಿದ್ದಾರೆ ಅಂತ ಓಲೈಕೆ ಮಾಡ್ತಿದ್ದೀರಾ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿದವರನ್ನ ಡಿಕೆ ಶಿವಕುಮಾರ್ ಬ್ರದರ್ಸ್ ಅಂತ ಕರೆದರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ಪ್ರಕರಣದಲ್ಲಿ ಜಮೀರ್ ಅಹ್ಮದ್ ಖಾನ್ ಆರೋಪಿಗಳ ಪರ ನಿಂತರು. ಜೈಲಿನಿಂದ ಬಿಡುಗಡೆ ಆದವರನ್ನ ಮೆರವಣಿಗೆ ಮೂಲಕ ಕರೆ ತಂದಿರಿ. ಬಳಿಕ ಅಖಂಡ ಶ್ರೀನಿವಾಸ್ ಮೂರ್ತಿ ಪರ ಕಾಂಗ್ರೆಸ್ ನಿಲ್ಲಲಿಲ್ಲ ಎಂದು ಎಂ.ಜಿ ಮಹೇಶ್  ವಾಗ್ದಾಳಿ ನಡೆಸಿದರು.

Key words: Udayagiri police station, attack, BJP, spokesperson

The post ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಕೇಸ್: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ವಕ್ತಾರ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സെൻസസിനൊപ്പം എൻ.പി.ആർ നടപ്പാക്കാൻ കേന്ദ്രനീക്കം; പൗരത്വത്തെ മതവുമായി ബന്ധിപ്പിക്കാനുള്ള ശ്രമം അംഗീകരിക്കാനാകില്ലെന്ന് പിണറായി വിജയൻ

തിരുവനന്തപുരം: വരാനിരിക്കുന്ന സെൻസസ് ചോദ്യാവലിയിൽ മാതാപിതാക്കളുടെ ജനനസ്ഥലം, മതം തുടങ്ങിയ വിവരങ്ങൾ...

மாணவர்கள் போராட்டம் குறித்த சுற்றறிக்கை: "பாசிச அரசியலைத் தொடங்க ஆழம் பார்த்ததா தவெக அரசு?"- கனிமொழி

காக்ரோச் ஜனதா கட்சி மற்றும் இடதுசாரி போராட்டங்களில் மாணவர்கள் பங்கேற்பதைத் தடுக்க...

Pakistan: ఇమ్రాన్ ఖాన్‌కు ఊరట.. 9 నెలల తర్వాత భార్య, సోదరిని కలిసిన మాజీ ప్రధాని..

Pakistan: పాకిస్తాన్ మాజీ ప్రధానమంత్రి మరియు పాకిస్తాన్ తెహ్రీక్-ఎ-ఇన్సాఫ్ (పిటిఐ) వ్యవస్థాపకుడు...

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತೆ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನ

ಬೆಂಗಳೂರು,ಆಗಸ್ಟ್,19,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ...