17
August, 2026

A News 365Times Venture

17
Monday
August, 2026

A News 365Times Venture

ಬಾಬು ಕೆ ವೀರೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ರಾಜ್ಯಪಾಲರು

Date:

ಬೆಂಗಳೂರು ಫೆಬ್ರವರಿ,4,2025(www.justkannada.in):  ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಬಾಬು ಕೆ ವೀರೇಗೌಡ ಅವರಿಗೆ ನೀಡಲಾಗಿರುವ ಗೌರವ ಡಾಕ್ಟರೇಟ್ ಅನ್ನು ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, “ಮೈಸೂರು ವಿಶ್ವವಿದ್ಯಾಲಯವು ದೇಶದ ಆರನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು ಈ ದೇಶಕ್ಕೆ ಅನೇಕ ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ರಾಜಕಾರಣಿಗಳನ್ನು ನೀಡಿದ್ದು, ಇವೆರಲ್ಲರೂ ಕರ್ನಾಟಕ ಮತ್ತು ಭಾರತದ ನಿರ್ಮಾಣದಲ್ಲಿ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ” ಎಂದು ಶ್ಲಾಘಿಸಿದರು.

“ಘಟಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ, ವಿಜ್ಞಾನ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮತ್ತು ದೇಶದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ” ಎಂದು ಹೇಳಿದರು.

“ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಈ ದಿನ ಡಾ.ಬಾಬು ಕೆ ವೀರೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಎಚ್ ಎನ್ ಟಿಬಿ ಯ ಈಶಾನ್ಯ ವಿಭಾಗದ ಉಪಾಧ್ಯಕ್ಷರಾಗಿ ಮತ್ತು ಮುಖ್ಯಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಆಗಿ, ನೀವು ಅನೇಕ ಸಂಕೀರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉನ್ನತ ಮಟ್ಟದ ಮೂಲಸೌಕರ್ಯ ಯೋಜನೆಗಳ ನಿಮ್ಮ ಸಮರ್ಥ ನಿರ್ವಹಣೆಗಾಗಿ ನೀವು ಪ್ರಸಿದ್ಧರಾಗಿದ್ದೀರಿ. ಯುನೈಟೆಡ್ ಸ್ಟೇಟ್ಸ್‌ನ ಅನೇಕ ದೇವಾಲಯಗಳಿಗೆ ಪ್ರೊ ಬೊನೊ ಎಂಜಿನಿಯರಿಂಗ್ ಮತ್ತು ಸೈಟ್ ವಿನ್ಯಾಸ ಸೇವೆಗಳ ಮೂಲಕ ನೀವು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ಅಭಿನಂದಿಸುತ್ತಾ, ಅವರ ಸಮಾಜ ಸೇವೆ ಹೀಗೆ ನಿರಂತರವಾಗಿರಲಿ ಇತರರಿಗೆ ಸ್ಫೂರ್ತಿಯಾಗಲಿ” ಎಂದು ಆಶಿಸುತ್ತೇನೆಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

key words: Governor,   honorary doctorate, Babu K Veeregowda

The post ಬಾಬು ಕೆ ವೀರೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ರಾಜ್ಯಪಾಲರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മോദിയുടെ ദിമാഗി നക്സൽ പരാമർശത്തിന് പിന്നാലെ ‘ദിമാഗി നക്സൽ ജനതാ പാർട്ടി’ എന്ന പേരിൽ സോഷ്യൽ മീഡിയ അക്കൗണ്ടുകൾ

ന്യൂദൽഹി: പ്രധാനമന്ത്രി നരേന്ദ്ര മോദി നടത്തിയ ‘ദിമാഗി നക്സൽ (ബുദ്ധിയുള്ള നക്സൽ)’...

Javed Akhtar: హిందువులపై పాక్ అధ్యక్షుడి వ్యాఖ్యలు.. “మిస్టర్ 10%” అంటూ జావెద్ అక్తర్ కౌంటర్..

Javed Akhtar: పాకిస్తాన్‌లో హిందూ మైనారిటీలను ఉద్దేశిస్తూ ఆ దేశ అధ్యక్షుడు...

തങ്ങളുടെ പ്രവർത്തകന്റെ പിതാവ് ബി.ജെ.പി ആക്രമണത്തിൽ കൊല്ലപ്പെട്ട സംഭവത്തിൽ നിഷ്പക്ഷ അന്വേഷണവും അറസ്റ്റും വേണമെന്ന് സി.ജെ.പി

ന്യൂദൽഹി: പശ്ചിമ ബംഗാളിൽ തങ്ങളുടെ പ്രവർത്തകന്റെ പിതാവ് കൊല്ലപ്പെടാനിടയായ ആക്രമണത്തിന് ഉത്തരവാദികളായവരെ...