2
October, 2026

A News 365Times Venture

2
Friday
October, 2026

A News 365Times Venture

ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ SIR ನಾಟಕ- ಕೇಂದ್ರ ಸಚಿವ HDK

Date:

ಬೆಂಗಳೂರು,ಅಕ್ಟೋಬರ್,2,2026 (www.justkannada.in): ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ   ಇದರ ಗಮನವನ್ನು ಬೇರೆಡೆಗೆ ತಿರುಗಿಸಲು ಕಾಂಗ್ರೆಸ್ ಎಸ್​ಐಆರ್ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಆರಂಭದಲ್ಲೇ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್, ಈಗ ಅದರ ವಿರುದ್ಧವೇ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಲ್ಲಿ ಜನರನ್ನು ಸೇರಿಸಿ ಕಾಂಗ್ರೆಸ್‌ನವರೇ ಅಕ್ರಮ ಎಸಗಿತ್ತು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಎನ್‌ಡಿಎ ದೂರು ನೀಡಿದೆ ಎಂದರು.

ಈ ಮಧ್ಯೆ ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲಷ್ಟೇ ರಾಜ್ಯ ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯ ಪ್ರಹಸನ ಆರಂಭಿಸಿದ್ದಾರೆ. ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ನಾನು ದಾಖಲೆ ಸಮೇತ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿಗಳು ಈ ಎಸ್‌ಐಆರ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

മുഗള്‍ ചരിത്രവും കമ്മ്യൂണിസവും ഔട്ട്, മുഖര്‍ജി ഇന്‍: ബംഗാളില്‍ പാഠ്യപദ്ധതി മാറ്റാന്‍ ശുപാര്‍ശ

കൊല്‍ക്കത്ത: സമഗ്രമായ പാഠ്യപദ്ധതി മാറ്റങ്ങള്‍ക്ക് ശുപാര്‍ശ ചെയ്ത് ബംഗാളിലെ പുനസംഘടനാ സമിതി....

"கைது செய்தாலும் போராடுவோம்" – தேர்தல் ஆணையருக்கு எதிராகப் போராட இருந்த அபிஜித் திப்கே கைது

மத்திய தலைமைத் தேர்தல் கமிஷனர் ஞானேஷ் குமார் பதவி விலக வேண்டும்...

Mamata Banerjee: 2029 ప్రధాని అభ్యర్థిగా రాహుల్ గాంధీ ఓకేనా? మమతా బెనర్జీ ఏం చెప్పారంటే..

Mamata Banerjee:  2029 లోక్‌సభ ఎన్నికల్లో ప్రతిపక్ష ఇండియా కూటమి ప్రధాని...

AIISHನಲ್ಲಿ 2024ರಲ್ಲಿ ಪ್ರಕಟಿಸಿದ್ದ ಬೋಧಕ ಹುದ್ದೆಗಳ ನೇಮಕಾತಿ ಜಾಹೀರಾತು ರದ್ದು

  ಮೈಸೂರು, ಅ.01, 2026: ಮೈಸೂರಿನ ಅಖಿಲ ಭಾರತ ವಾಕ್ ಮತ್ತು...