1
October, 2026

A News 365Times Venture

1
Thursday
October, 2026

A News 365Times Venture

ಮೈಸೂರು ದಸರಾ: ಭದ್ರತೆ ಮತ್ತಷ್ಟು ಬಿಗಿ; 6 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆಗೆ ಸಿದ್ಧತೆ

Date:

ಮೈಸೂರು,ಸೆಪ್ಟಂಬರ್‌,30,2026 () ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.

ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಸರಾ ಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಡಾ. ಸಲೀಂ ಮಾಹಿತಿ ಪಡೆದುಕೊಂಡರು.

ದಸರಾ ಸಂದರ್ಭದಲ್ಲಿ ಅರಮನೆ, ಜಂಬೂಸವಾರಿ ಮಾರ್ಗ, ಪ್ರಮುಖ ಪ್ರವಾಸಿ ತಾಣಗಳು, ಜನದಟ್ಟಣೆ ಪ್ರದೇಶಗಳು ಹಾಗೂ ವಿವಿಧ ದಸರಾ ಕಾರ್ಯಕ್ರಮಗಳ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಸಭೆಯ ಬಳಿಕ ಮಾತನಾಡಿದ ಡಾ. ಸಲೀಂ, ದಸರಾ ಬಂದೋಬಸ್ತ್ ಕುರಿತು ಸಭೆ ನಡೆಸಲಾಗಿದ್ದು, ಭದ್ರತಾ ವ್ಯವಸ್ಥೆಯ ಸಂಪೂರ್ಣ ರೂಪುರೇಷೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ ಸುಮಾರು 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಅಗತ್ಯವಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ದಸರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಜನದಟ್ಟಣೆ ನಿರ್ವಹಣೆ, ಸಂಚಾರ ನಿಯಂತ್ರಣ, ಪ್ರಮುಖ ಸ್ಥಳಗಳ ಭದ್ರತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ವ್ಯವಸ್ಥೆ ರೂಪಿಸಲಾಗುತ್ತಿದೆ.

ಈ ಬಾರಿ ಎಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು, ಯಾವೆಲ್ಲೆಡೆ ಹೆಚ್ಚುವರಿ ಭದ್ರತೆ ಕಲ್ಪಿಸಬೇಕು ಹಾಗೂ ಬಂದೋಬಸ್ತ್‌ನ ಅಂತಿಮ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಮುಂದಿನ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ತಿಳಿಸಿದರು.

ದಸರಾ ಮಹೋತ್ಸವದ ಸಿದ್ಧತೆಗಳು ವೇಗ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.

Mysuru Dasara, Security, tightened, preparations, 6,000 police , deploy

 

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഗസയിലെ കശാപ്പുകാരനെ’ സ്വീകരിച്ചു; നെതന്യാഹുവിന്റെ യു.എ.ഇ സന്ദര്‍ശനത്തെ അപലപിച്ച് ഇറാന്‍ നേതാവ്

ടെഹ്‌റാന്‍: ഇസ്രായേല്‍ പ്രധാനമന്ത്രി ബെഞ്ചമിന്‍ നെതന്യാഹു യു.എ.ഇ സന്ദര്‍ശിച്ചതിനെ അപലപിച്ച് ഇറാന്റെ...

INDIA BLOC: “நாங்கள் வேடிக்கைப் பார்த்துக் கொண்டிருக்கப் போவதில்லை" – ராகுல் காந்தி

டெல்லியில் இன்று (30-ம் தேதி) நடைபெற்ற 'இந்தியா கூட்டணி' தலைவர்களின் கூட்டம்...

Pawan Kalyan: పల్లె సీమల్లో అభివృద్ధి పరుగులు.. డిప్యూటీ సీఎం పవన్ కళ్యాణ్..

నెల్లూరు జిల్లా రామాపురం గ్రామంలో నిర్వహించిన ‘పల్లె పండుగ 3.0’ కార్యక్రమంలో...

ಬರ ಪರಿಹಾರ ನೀಡಿಲ್ಲ, ಸರ್ವಪಕ್ಷ ನಿಯೋಗ ಬದಲು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್‌.ಅಶೋಕ್

ಬೆಂಗಳೂರು, ಸೆಪ್ಟೆಂಬರ್‌ 30,2026(www.justkannada.in): ಬರಗಾಲಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ನಾವು ಇಟ್ಟ...