30
September, 2026

A News 365Times Venture

30
Wednesday
September, 2026

A News 365Times Venture

ಬಾಕಿ ಬಿಲ್​​ ಪಾವತಿ: ಗಡುವು ತಪ್ಪಿದ್ರೆ ಕಮಿಷನ್​​ ದಂಧೆ ದಾಖಲೆ ಬಿಡುಗಡೆ- ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ

Date:

ಬೆಂಗಳೂರು, ಸೆಪ್ಟೆಂಬರ್​ ,30,2026 (www.justkannada.in): ಬಾಕಿ ಹಣ ಬಿಡುಗಡೆಗೆ ಕೋರಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ  ರಾಜ್ಯ ಗುತ್ತಿಗೆದಾರರ ಸಂಘ  ಬೆನ್ನಲ್ಲೆ ಇದೀಗ ಸರ್ಕಾರಕ್ಕೊಂದು ವಾರ್ನಿಂಗ್ ನೀಡಿದೆ.

ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ  ಖಡಕ್ ಎಚ್ಚರಿಕೆ ನೀಡಿದೆ.  ಈ ಕುರಿತು ಮಾತನಾಡಿರುವ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್,  ನಮ್ಮ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ.  ನಾವು ಕೆಲಸ ಮಾಡಿರುವ ಹಣವನ್ನು ಮೊದಲು ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್​​ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಜಾಸ್ತಿ ಇದ್ದು, ಅದು ಎಷ್ಟು ಪರ್ಸೆಂಟೇಜ್ ಅಂತ ಕೇಳಬೇಡಿ. ಇತ್ತೀಚಿಗೆ ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಲೆತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್‌ ಗಳು ಮಾಯ ಆಗುತ್ತಿದ್ದಾರೆ. 4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ನಂತರ ಡಿ.ಕೆ.ಶಿವಕುಮಾರ್ ಪ್ರತಿಭಟನಾ  ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಬಳಿಕ ಡಿಕೆ ಶಿವಕುಮಾರ್  ಅಧಿಕಾರಕ್ಕೆ ಬಂದರು. ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದರು. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಮಂಜುನಾಥ್​​ ತಿಳಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

മൊറോക്കോയില്‍ ചരിത്രം കുറിച്ച് ഫാത്തിമ അസ്ഹറ; രാജ്യത്തെ ആദ്യ വനിതാ പ്രധാനമന്ത്രിയായി നിയമിച്ച് രാജാവ്

  റബാത്ത്: മൊറോക്കോയുടെ ചരിത്രത്തിലാദ്യമായി വനിതാ പ്രധാനമന്ത്രിയെ നിയമിച്ചു. ഫാത്തിമ അസ്ഹറ...

'தவெக அமைச்சரவையில் இணையும் சௌமியா அன்புமணி?' – விஜய்யின் 'மதுராந்தகம்' பிளான்!

தவெக அரசின் அமைச்சரவையில் பாமக இணையப்போவதாகவும், சௌமியா அன்புமணிக்கு முக்கியமான துறை...

OTR: ఆలేరు ఎమ్మెల్యే వైఖరిపై భువనగిరి ఎమ్మెల్యే అసంతృప్తి

OTR: ఆ కాంగ్రెస్‌ ఎమ్మెల్యేకి పొరుగింటి పుల్లకూర విపరీతంగా నచ్చేస్తోందట. సొంత...

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್...