29
September, 2026

A News 365Times Venture

29
Tuesday
September, 2026

A News 365Times Venture

ಪ್ರೀತಿಗೆ ನಿರಾಕರಣೆ: ಪೆಟ್ರೋಲ್ ಸುರಿದು, ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Date:

ಮೈಸೂರು, ಸೆಪ್ಟಂಬರ್,29, 2026 (www.justkannada.in):  ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದಿದ್ದ ಯುವಕನೊಬ್ಬ ಯುವತಿಯನ್ನು ಪೆಟ್ರೋಲ್ ಸುರಿದು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿರುವ ಭೀಕರ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್ (27) ಕೃತ್ಯ ಎಸಗಿದ ಯುವಕ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಡಿಪ್ಲೊಮಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಚಂದನ್ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ.

ವಿಜಯನಗರದಲ್ಲಿರುವ ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ ನಿಂದ ಅನತಿ ದೂರದಲ್ಲಿ ಚಂದನ್ ತಡೆದಿದ್ದಾನೆ. ಬಳಿಕ ಪ್ರೀತಿಸುವಂತೆ ಒತ್ತಾಯಿಸಿ, ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಪೆಟ್ರೋಲ್ ಸುರಿದುಕೊಂಡು ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದೆ.

ಘಟನೆಯಿಂದ ಬೆಚ್ಚಿಬಿದ್ದ ಯುವತಿ ಚಂದನ್‌ನಿಂದ ತಪ್ಪಿಸಿಕೊಂಡಿದ್ದು, ಶೇ.20ರಷ್ಟು ಸುಟ್ಟ ಗಾಯಗಳಾಗಿವೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಚಂದನ್‌ ಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

‘വിഷം പഠിപ്പിക്കുന്നു’; സര്‍വകലാശാലാ പാഠ്യപദ്ധതിയിലെ അംബേദ്കര്‍ രചനകളില്‍ പ്രധാനമന്ത്രിയുടെ ഓഫീസിന്റെ പരിശോധന

ന്യൂദല്‍ഹി: രാജ്യത്തെ സര്‍വകലാശാലകളിലെ പാഠ്യപദ്ധതിയില്‍ ഉള്‍പ്പെടുത്തിയിട്ടുള്ള അബേദ്ക്കറിന്റെ രചനകളെക്കുറിച്ച് പ്രധാനമന്ത്രിയുടെ ഓഫീസ്...

மின்சாரத்துறையில் தனியார்: “இதற்கு பெயர்தான் தூய ஆட்சியா? வெட்கக்கேடு! " – சீமான் காட்டம்

வீடுகளில் மின் பயன்பாட்டைக் கணக்கெடுக்கும் பணியில் தனியார் ஒப்பந்த நிறுவனங்களின் மூலம்...

Work From Home: ఉద్యోగులకు అలర్ట్.. నవంబర్ 1 నుంచి వర్క్ ఫ్రం హోం..

ఢిల్లీలో శీతాకాలంలో వాయు కాలుష్యాన్ని అరికట్టేందుకు, పరిశుభ్రమైన గాలిని అందించేందుకు ఢిల్లీ...

ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರುಪರಿಶೀಲಿಸಿ- ಸಿಎಂ ಡಿಕೆಶಿ ಮನವಿ

ನವದೆಹಲಿ, ಸೆಪ್ಟಂಬರ್,29,2026 (www.justkannada.in): “ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ...