29
September, 2026

A News 365Times Venture

29
Tuesday
September, 2026

A News 365Times Venture

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕೊಡುಗೆಯೇನು? ಸಚಿವ ಯುಟಿ ಖಾದರ್ ವಾಗ್ದಾಳಿ

Date:

ಮಂಗಳೂರು, ಸೆಪ್ಟೆಂಬರ್,​​ 28,2026 (www.justkannada.in):  ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 32,611 ಕೋಟಿ ರೂ ಅನುದಾನ ಘೋಷಿಸಿದ್ದಲ್ಲದೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ಸಹ  ನೀಡಲಾಗಿದ್ದು ಇದೇ ವಿಚಾರವನ್ನಿಟ್ಟುಕೊಂಡು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್, ‘ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ. ಬಿಜೆಪಿ ಜಿಲ್ಲೆಯಲ್ಲಿ ಕನಿಷ್ಠ ಸಂಪುಟ ಸಭೆ ಏನಾದರೂ ನಡೆಸಿದ್ದಾರೆಯೇ? ಯಾವುದಾದರೂ ಪ್ರಮುಖ ಯೋಜನೆ ರೂಪಿಸಿದ್ದಾರೆಯೇ? ನಾವು ಯಾರದ್ದೋ ಮಾತು ಕೇಳಿ ಕೆಲಸ ಮಾಡುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಗುಡುಗಿದರು.

ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳ ಬಗ್ಗೆ  ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್, ‘ಸಿಎಂ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ ಎಂದರು.

‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಸಲಹೆ, ಎಚ್ಚರಿಕೆ ನೀಡುವುದು ಸಹಜ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಾ ಬಂದಿರುವ ಪ್ರಕ್ರಿಯೆ, ಆದರೆ ಕ್ಯಾಬಿನೆಟ್‌ಗೆ ತನ್ನದೇ ಆದ ಜವಾಬ್ದಾರಿ ಇದೆ. ಸರ್ಕಾರ ನೀಡಿದ ಮಾತನ್ನು ಈಡೇರಿಸುವುದು ಸರ್ಕಾರಕ್ಕೆ ಗೊತ್ತಿದೆ ಎಂದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഇത് വെറും ഉപതെരഞ്ഞെടുപ്പ് മാത്രമാണ്’; ബംഗാളിലെ എസ്.ഐ.ആറിനെതിരായ ഹരജികള്‍ അടിയന്തരമായി പരിഗണിക്കാതെ കോടതി

ന്യൂദല്‍ഹി: പശ്ചിമ ബംഗാളിലെ എസ്.ഐ.ആര്‍ നടപടികള്‍ക്കെതിരായ ഹരജികള്‍ അടുത്ത മാസം ആറിന്...

“தேர்தல் ஆணையர் மாற்றம் தீர்வாகாது" – அமைச்சர் ராஜ் மோகன்; காங்கிரஸிடமிருந்து முரண்படுகிறதா தவெக?

தேர்தல் ஆணையர் ஞானேஷ் குமார் தன்னிச்சையாக செயல்பட்டிருப்பதால் அவர் பதவி விலக...

Pensions: పెన్షన్ల నిధులు విడుదల.. అక్టోబర్ 1వ తేదీ ఉదయం నుంచే పంపిణీ షురూ..

అమరావతిలో అక్టోబర్ 1వ తేదీ ఉదయం 6:30 గంటల నుంచే లబ్ధిదారుల...

ಖುದ್ದು ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಕೋರ್ಟ್ ಸಮನ್ಸ್

ಬೆಳಗಾವಿ,ಸೆಪ್ಟಂಬರ್,28,2026 (www.justkannada.in): 2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್...