ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯವನ್ನ ಆಯೋಜಿಸಲಾಗಿತ್ತು.
ಅಧಿಕಾರಿ ಅನುರಾಧ ಅವರ ನೇತೃತ್ವದಲ್ಲಿ ಯುವಕ, ಯುವತಿಯರು, ಹಿರಿಯರು ಚಾರಣದಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಈ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳು ಸಾಥ್ ನೀಡಿದ್ದು, ಬೆಟ್ಟದಲ್ಲಿನ ತಿಮ್ಮರಾಯ ಸ್ವಾಮಿಯ ದೇಗಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸ್ವಾಮಿಯ ದರ್ಶನ ಪಡೆದ ಅಧಿಕಾರಿಗಳು ಸ್ವಚ್ಚತಾ ಹಿ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೊಂದಿಗೆ ಪಾಲ್ಗೊಂಡು ಬೆಟ್ಟದ ಮೇಲೆ ಸ್ವಚ್ಛತಾ ಕಾರ್ಯ ನಡೆಸಿ ಬೆಟ್ಟದ ಅಂಚಿನಲ್ಲಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು. ಇದೇ ವೇಳೆ ಪೌರಕಾರ್ಮಿಕರಿಗೆ ಸ್ವಚ್ಚತೆಯ ಕಿಟ್ ಗಳನ್ನು ವಿತರಿಸಲಾಯಿತು.





