27
September, 2026

A News 365Times Venture

27
Sunday
September, 2026

A News 365Times Venture

ಸಾಮಾಜಿಕ ಜಾಲತಾಣದ ಸುದ್ದಿ ಫೇಕ್ : ಗವಿಮಠ ಶ್ರೀಗಳ ಸ್ಪಷ್ಟನೆ. ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ನಾಳೆ ಸ್ಪಷ್ಟನೆ ನೀಡಲಿದ್ದಾರೆ.

Date:

 

ಮೈಸೂರು, ಸೆ.26, 2026: ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕೊಪ್ಪಳ ಗವಿಮಠದ ಶ್ರೀಗಳು ನಿರಾಕರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಗವಿಮಠದ ಶ್ರೀಗಳು ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಈ ಕುರಿತು ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಶ್ರೀಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಫೇಕ್ ಆಗಿದ್ದು, ದಸರಾ ಉದ್ಘಾಟನೆಗೆ ತಾವು ಸಂತೋಷದಿಂದಲೇ ಒಪ್ಪಿಗೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

“ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ನಾನು ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದೇನೆ. ದಸರಾ ಉದ್ಘಾಟನೆಯನ್ನು ನಿರಾಕರಿಸುವ ಪ್ರಮೇಯವೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ” ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿರುವ ಶ್ರೀಗಳು, ಈ ವಿಚಾರದಲ್ಲಿ ಉಂಟಾಗಿರುವ ಗೊಂದಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯಿಂದಲೂ ಸ್ಪಷ್ಟನೆ:

ಇದೇ ವೇಳೆ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಅವರು ಈ ವಿಚಾರದ ಕುರಿತು ನಾಳೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಗವಿಮಠದ ಶ್ರೀಗಳು ತಿಳಿಸಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಗವಿಮಠದ ಶ್ರೀಗಳೇ “ನಿರಾಕರಿಸುವ ಪ್ರಮೇಯವೇ ಇಲ್ಲ” ಎಂದು ನೇರವಾಗಿ ಸ್ಪಷ್ಟಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗೆ ತೀವ್ರ ತಿರುಗೇಟು ನೀಡಿದಂತಾಗಿದೆ.

KEY WORDS: 

Mysuru Dasara 2026, Mysuru Dasara inauguration, Koppal Gavi Mutt Seer, Gavi Mutt Seer, Dasara inauguration rumours, fake news,

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഫാറൂഖ് കോളേജ് സ്ഥാപകൻ അബുസ്സബാഹ് സലഫിയല്ല സൂഫി ആഭിമുഖ്യമുള്ളയാൾ’ സലഫികൾക്ക് മറുപടിയുമായി മുജീബ് റഹ്മാൻ കിനാലൂർ

കോഴിക്കോട്  : ഫാറൂഖ് കോളേജ് സ്ഥാപകനായ അബുസ്സബാഹ് മൗലവി സൂഫി ആഭിമുഖ്യമുള്ളയാളാണെന്നും സലഫിയല്ലായിരുന്നുവെന്നും...

தாராபுரம்: "30 நிமிடங்களில் 32 முறை திமுக என்று பேசியிருக்கிறார் முதல்வர்" – உதயநிதி காட்டம்

திருப்பூர் மாவட்டம் தாராபுரம் சட்டமன்ற ( தனி) தொகுதி இடைத்தேர்தல் அக்டோபர்...

ಅ. 15ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ: ಅ.11ರಿಂದ ಕಾವೇರಿ ಆರತಿ

ಮಂಡ್ಯ,ಸೆಪ್ಟಂಬರ್,26,2026 (www.justkannada.in): ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಅಕ್ಟೋಬರ್...