ವಿಜಯಪುರ, ಆಗಸ್ಟ್,26,2026 (www.justkannada.in): ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವ ಪತ್ತೆಯಾಗಿದೆ.
ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ತನ್ನ ಐವರು ಮಕ್ಕಳೊಂದಿಗೆ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಶೋಭಾ ಜಾಲಗೇರಿ (45) ಹಾಗೂ ಅವರ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ಸಾನಿಕಾ (7) ಮತ್ತು ವಿಕಾಸ್ (5) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತರು ವಿಜಯಪುರ ಜಿಲ್ಲೆಯ ತೊರವಿ ಗ್ರಾಮದವರು ಎನ್ನಲಾಗಿದೆ. ಶೋಭಾ ಹಾಗೂ ಅವರ ಪತಿ ಭೀಮರಾಯ ಜಾಲಗೇರಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಶೋಭಾ, ಆ.24ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಐವರು ಮಕ್ಕಳೊಂದಿಗೆ ಮನೆಯಿಂದ ಬಂದಿದ್ದರು.
ಈ ಮಧ್ಯೆ ಇದೀಗ ತಾಯಿ ಮತ್ತು ಐವರು ಮಕ್ಕಳ ಶವ ಭೂತನಾಳ ಕೆರೆಯಲ್ಲಿ ಪತ್ತೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
Key words: Vijayapur, Bodies of 6 members, same family, found , lake
The post ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವ ಪತ್ತೆ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





