29
July, 2026

A News 365Times Venture

29
Wednesday
July, 2026

A News 365Times Venture

ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಕಂಚಿನ ಪದಕ: ಕನ್ನಡತಿ ಕೆ.ಎಸ್ ಶಿಲ್ಪರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ HDK

Date:

ಬೆಂಗಳೂರು,ಜುಲೈ,28,2026 (www.justkannada.in): ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಗುಂಡು ಎಸೆತದಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದ ಕನ್ನಡತಿ ಮೈಸೂರಿನ ಕೆ.ಎಸ್ ಶಿಲ್ಪ ಅವರಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್ ಡಿಕೆ,  2026ರ ಕಾಮನ್‌ವೆಲ್ತ್ ಗೇಮ್ಸ್‌ ನ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಭಾರತದ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ. ರಾಷ್ಟ್ರಕ್ಕೆ ಇಂತಹ ಪ್ರೇರಣಾದಾಯಕ ಗೆಲುವು ತಂದುಕೊಟ್ಟ ಶಿಲ್ಪಾ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ರೈತ ಕುಟುಂಬದ ಕೆ.ಎಸ್. ಶಿಲ್ಪಾ ಅವರು ತಮ್ಮ 4ನೇ ವಯಸ್ಸಿನಲ್ಲಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು. ಅದರಿಂದ ವಿಚಲಿತಗೊಳ್ಳದೆ ಭಾರತವೇ ಹೆಮ್ಮೆಪಡುವಂತಹ ಸಾಧನೆಯನ್ನು ಅವರು ಮಾಡಿದ್ದಾರೆ. ಅವರ ತರಬೇತುದಾರರು, ಪೋಷಕರನ್ನು ಕೂಡ ನಾನು ಅಭಿನಂದಿಸುತ್ತೇನೆ ಎಂದು ಹೆಚ್ ಡಿಕೆ ತಿಳಿಸಿದ್ದಾರೆ.

Key words: Bronze medal, Commonwealth Games: K.S. Shilpa, Union Minister, HDK

The post ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಕಂಚಿನ ಪದಕ: ಕನ್ನಡತಿ ಕೆ.ಎಸ್ ಶಿಲ್ಪರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്വന്തം പാര്‍ട്ടിക്കാര്‍ പോലും കങ്കണയെ കാര്യമായെടുക്കുന്നില്ല; പിന്നെ ഞങ്ങള്‍ എന്തിന് ശ്രദ്ധിക്കണം: സി.ജെ.പി

ന്യൂദല്‍ഹി: നീറ്റ് വിഷയത്തില്‍ ധര്‍മേന്ദ്ര പ്രധാന്റെ രാജി ആവശ്യപ്പെട്ടുള്ള പ്രതിഷേധത്തിനെതിരെ വിവാദ...

தமிழ்த்தாய் வாழ்த்து: “யார் தடுத்தாலும் தாய்த் தமிழுக்கு முதலிடமே இருக்கும்..!" – தவெக பதிவு

நெல்லை மனோன்மணியம் சுந்தரனார் பல்கலைக்கழகத்தின் 33-வது பட்டமளிப்பு விழா இன்று நடைபெற்றது....

Super El Nino: ఊహకందని విపత్తు… మానవాళికి ముప్పు తప్పదా?

పసిఫిక్ మహాసముద్రంలో వేగంగా బలపడుతున్న ఒక మహా శక్తి భూగోళాన్ని వణికించేందుకు...

സമരത്തില്‍ പങ്കെടുത്ത ഒരാളെയും വെറുതെ വിടില്ലെന്നാണ് കേന്ദ്രത്തിന്റെ സന്ദേശം: ജോണ്‍ ബ്രിട്ടാസ്

ന്യൂദല്‍ഹി: എസ്.എ.എഫ് നേതാവ് ഐഷെ ഘോഷിനെ അറസ്റ്റ് ചെയ്യാനുള്ള കേന്ദ്രസര്‍ക്കാര്‍ നീക്കത്തെ...