18
August, 2026

A News 365Times Venture

18
Tuesday
August, 2026

A News 365Times Venture

ಕಾಲೇಜು ಕ್ಯಾಂಪಸ್ ಕಲುಷಿತಗೊಳಿಸುತ್ತಿರುವ ಕಾಂಗ್ರೆಸ್: ಮಾಜಿ ಮೇಯರ್ ಶಿವಕುಮಾರ್ ಆಕ್ರೋಶ

Date:

ಮೈಸೂರುಜುಲೈ23,2026 (www.justkannada.in): ಕಾಂಗ್ರೆಸ್ ಪಕ್ಷವು ಶಾಲಾ- ಕಾಲೇಜು ಆವರಣವನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದ್ದಾರೆ.

ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಬುಧವಾರ ರಾಹುಲ್ ಗಾಂಧಿ ಅವರ ಬ್ಯಾನರ್ ಅಳವಡಿಕೆ ಹಾಗೂ ಫೋಟೋ ಪ್ರದರ್ಶನ ಕಳವಳಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ ಮತ್ತು ನಿಯಂತ್ರಣ ಅಧಿನಿಯಮ- 1989ರ ಅನ್ವಯ, ಕಾಲೇಜು ಕ್ಯಾಂಪಸ್ಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಶಾಲೆ- ಕಾಲೇಜು ಆವರಣವು ದೈನಂದಿನ ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳು, ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಮತ್ತು ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗ ಆಗಬೇಕೆಂದು ಸ್ಪಷ್ಟ ಮಾರ್ಗಸೂಚಿಯನ್ನು ಹಲವಾರು ಸುತ್ತೋಲೆಗಳ ಮೂಲಕ ಹೊರಡಿಸಲಾಗಿದೆ.

ಅದಾಗ್ಯೂ, ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದು ಪದವ್ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಮಹಾರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಿರುವುದು ಸರ್ಕಾರದ ನೀತಿ- ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಕಾಂಗ್ರೆಸ್ ಪಕ್ಷವು ರಾಜ್ಯ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಸಿಕೊಂಡು ಚಿಲ್ಲರೆ ರಾಜಕೀಯ ಮಾಡುತ್ತಿರುವುದು ಮಹಾರಾಣಿ ಕಾಲೇಜಿನಲ್ಲಿ ನಡೆದ ವಿದ್ಯಮಾನದಿಂದ ಬಯಲಾಗಿದೆ. ಇಂತಹ ಷಡ್ಯಂತ್ರವನ್ನು ದೇಶದ ನಾಗರಿಕರು ಹಾಗೂ ವಿದ್ಯಾರ್ಥಿಗಳೇ ಹಿಮ್ಮೆಟ್ಟಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Key words: Congress, polluting, college, campuses, Former Mayor, Shivakumar

The post ಕಾಲೇಜು ಕ್ಯಾಂಪಸ್ ಕಲುಷಿತಗೊಳಿಸುತ್ತಿರುವ ಕಾಂಗ್ರೆಸ್: ಮಾಜಿ ಮೇಯರ್ ಶಿವಕುಮಾರ್ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സി.ജെ.പി പ്രതിഷേധിക്കാരുടെ മുഖം തിരിച്ചറിയാന്‍ ഫേഷ്യല്‍ റെഗഗനിഷന്‍ സാങ്കേതിക വിദ്യ ഉപയോഗിച്ചെന്ന് സമ്മതിച്ച് ദല്‍ഹി പൊലീസ്

ന്യൂദല്‍ഹി: ജന്തര്‍ മന്ദറില്‍ നടന്ന വിദ്യാര്‍ത്ഥി പ്രതിഷേധത്തിനിടെ മുഖം തിരിച്ചറിയല്‍ സാങ്കേതികവിദ്യ...

காவலர் தாக்கப்பட்ட விவகாரம்:“Public Nuisance-ஐ தட்டிக் கேட்பதில் தவறில்லையே" – நயினார் நாகேந்திரன்

தஞ்சாவூரில் நேற்று விசிக-வினர் சாலமறியல் போராட்டத்தில் ஈடுபட்டனர். அதனால் அந்த வழியில்...

നീറ്റ് പ്രതിഷേധത്തിനിടെ AK-47 ഉപയോഗിച്ച് വെടിവെച്ച സംഭവം; സുപ്രീം കോടതിയിൽ ബീഹാർ പൊലീസിന്റെ സത്യവാങ്മൂലം

സിവാൻ: നീറ്റ്-യുജി പരീക്ഷാ ക്രമക്കേടുകൾക്കെതിരെ ബീഹാറിൽ നടന്ന പ്രതിഷേധത്തിനിടെ സിവാനിൽ പൊലീസുകാരൻ...