ವಿಜಯಪುರ,ಜುಲೈ,23,2026 (www.justkannada.in): ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕಚೇರಿಗಳ ಬಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಯತ್ನಾಳ್, ಯಾವುದೇ ಪಕ್ಷ ಮತ್ತೊಂದು ಪಕ್ಷದ ಕಚೇರಿ ಬಳಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಪದೇ ಪದೇ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಆಗ ಎಂದೂ ಬಿಜೆಪಿಯಿಂದ ಈ ರೀತಿ ಕೃತ್ಯ ಮಾಡಿಲ್ಲ. ಪ್ರತ್ಯುತ್ತರ ಹೇಗೆ ಕೊಡಬೇಕು ಅಂತಾ ತೋರಿಸಿಕೊಟ್ಟಿದ್ದಾರೆ . ಪ್ರತಿಭಟನೆ ಮಾಡುವವರಿಗೆ ರಕ್ಷಣೆ ಕೊಡುವುದು ಪೊಲೀಸರ ಕರ್ತವ್ಯ ಎಂದರು.
ಹರಿಹರ ಶಾಸಕ ಬಿಪಿ ಹರಿಶ್ ಗೆ ಮೊಟ್ಟೆ ಎಸೆದಿದ್ದಾರೆ. ಕೆಲವರು ಅಡ್ಜೆಸ್ಟ್ ಮೆಂಟ್ ಇರುತ್ತಾರೆ. ಅವರಿಗೆ ಏನು ಮಾಡಲ್ಲ. ಕೂಡಲೇ ಮೊಟ್ಟೆ ಹೊಡೆದವರನ್ನ ಬಂಧಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.
Key words: BJP, Congress, protest, not right, MLA, Yatnal
The post ಯಾವುದೇ ಪಕ್ಷ ಮತ್ತೊಂದು ಪಕ್ಷದ ಕಚೇರಿ ಬಳಿ ಪ್ರತಿಭಟನೆ ಸರಿಯಲ್ಲ- ಶಾಸಕ ಯತ್ನಾಳ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





