18
August, 2026

A News 365Times Venture

18
Tuesday
August, 2026

A News 365Times Venture

ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ – ಡಾ ಎಸ್ ಸೆಲ್ವಕುಮಾರ್  ಸೂಚನೆ

Date:

ಮೈಸೂರು ಜುಲೈ,23,2026 (www.justkannada.in): ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ  ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ ಎಸ್ ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯತ್ ನ ಡಿ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಡಾ ಏಸ್ ಸೆಲ್ವಕುಮಾರ್ ಅವರು ಮಾತನಾಡಿದರು. ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಿ. ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು, ನೀರಿನ ಮೂಲಗಳನ್ನು ಗುರುತಿಸಿಕೊಳ್ಳಿ. ಅಗತ್ಯ ಇರುವ ಕಡೆ ಖಾಸಗಿ ಬೋರ್ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ಕೊರತೆ ಉಂಟಾಗಿರುವುದರಿಂದ ಬಿತ್ತನೆಯೂ ಕಡಿಮೆ ಆಗಿದೆ. ಬಿತ್ತನೆ ಆಗಿರುವ ಬೆಳೆಗಳಲ್ಲಿ ಕುಂಠಿತ ಆಗಿ ಇಳುವರಿಯೂ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಉಂಟಾದರೂ ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಮೇವು ಬೆಳೆಯಲು ಅಗತ್ಯ ಸಂಖ್ಯೆಯ ಮೇವು ಕಿಟ್ ಗಳನ್ನು ವಿತರಣೆ ಮಾಡಿ. ಸಾಕಷ್ಟು ರಸಗೊಬ್ಬರದ ದಾಸ್ತಾನು ಇಟ್ಟುಕೊಳ್ಳಿ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ  ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇಕಡಾ 45 ರಷ್ಟು ಮಳೆ ಕೊರತೆ ಉಂಟಾಗಿದೆ.  ಕೆ ಆರ್ ಎಸ್ ನಲ್ಲಿ 17 ಟಿ ಎಂ ಸಿ, ಇದೆ ಕಬಿನಿಯಲ್ಲಿ 13 ಟಿ ಎಂ ಸಿ ನೀರು ಸಂಗ್ರಹವಿದೆ. ಹೇಮಾವತಿಯ ಗೊರೂರು ಡ್ಯಾಂ ನಲ್ಲಿ 21 ಟಿ ಎಂ ಸಿ ನೀರು ಇದೆ. 16 ಗ್ರಾಮಗಳಲ್ಲಿ ಟ್ಯಾಂಕರ್ ಮತ್ತು ಖಾಸಗಿ ಬೋರ್ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಮ್ಮನಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಪ್ರಸ್ತುತ ಇರುವ ನೀರು  ಕುಡಿಯುವ ನೀರಿಗೆ ಸಾಕಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಎಸ್ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ ಕೆ ಸವಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mysore, avoid, drinking water, shortage, Dr S. Selvakumar, advises

The post ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ – ಡಾ ಎಸ್ ಸೆಲ್ವಕುಮಾರ್  ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಮಂಕಾಳ ವೈದ್ಯ, ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ

ಬೆಂಗಳೂರು,ಆಗಸ್ಟ್,18,2026 (www.justkannada.in):  ಕರ್ನಾಟಕ ವಿಧಾನಸಭೆಯ ಉಪಸಭಾದ್ಯಕ್ಷರಾಗಿ ಭಟ್ಕಳ ಶಾಸಕ ಮಂಕಾಳ...

സി.ജെ.പി പ്രതിഷേധിക്കാരുടെ മുഖം തിരിച്ചറിയാന്‍ ഫേഷ്യല്‍ റെഗഗനിഷന്‍ സാങ്കേതിക വിദ്യ ഉപയോഗിച്ചെന്ന് സമ്മതിച്ച് ദല്‍ഹി പൊലീസ്

ന്യൂദല്‍ഹി: ജന്തര്‍ മന്ദറില്‍ നടന്ന വിദ്യാര്‍ത്ഥി പ്രതിഷേധത്തിനിടെ മുഖം തിരിച്ചറിയല്‍ സാങ്കേതികവിദ്യ...

காவலர் தாக்கப்பட்ட விவகாரம்:“Public Nuisance-ஐ தட்டிக் கேட்பதில் தவறில்லையே" – நயினார் நாகேந்திரன்

தஞ்சாவூரில் நேற்று விசிக-வினர் சாலமறியல் போராட்டத்தில் ஈடுபட்டனர். அதனால் அந்த வழியில்...