18
July, 2026

A News 365Times Venture

18
Saturday
July, 2026

A News 365Times Venture

ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆ- ಸಚಿವರ ಸೂಚನೆ

Date:

ಬೆಂಗಳೂರು,ಜುಲೈ,16,2026 (www.justkannada.in): ವಿಜಯಪುರ ಜಿಲ್ಲೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಕೆರೆಯಲ್ಲಿ ನೀರು ತುಂಬಿದಾಗ ಮುಳುಗಡೆ ಆಗುವ 178 ಎಕರೆ ಜಮೀನನ್ನು ರೈತರ ಕೋರಿಕೆಯ ಮೇರೆಗೆ ಭೂಸ್ವಾಧೀನಕ್ಕೆ ಸಕಾರಾತ್ಮಕ ತೀರ್ಮಾನವಾಗಿದ್ದು ಈ ವಿಷಯವನ್ನು ಸಂಪುಟದ ಮುಂದೆ ತರಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂಬಂಧವಾಗಿ ಗುರುವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಚಿವ ಎಂ.ಬಿ ಪಾಟೀಲ್ ಇಬ್ಬರೂ  ವಿಧಾನಸೌಧದಲ್ಲಿ ಸಣ್ಣ ನೀರಾವರಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಮುಳುಗಡೆ ಪ್ರದೇಶದ ರೈತರಿಗೆ ಆಗುತ್ತಿರುವ ಅನಾನುಕೂಲ ಮತ್ತು ನಷ್ಟ ತಪ್ಪಿಸಲು ಸ್ವಾಧೀನದ ಅಗತ್ಯ ಇದ್ದು, ಆದಷ್ಟು ಬೇಗ ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಕ್ಷೇತ್ರದ ಶಾಸಕರೂ ಆದ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿ,’16ನೇ ಶತಮಾನದಲ್ಲಿ ಆದಿಲ್ ಶಾಹಿಗಳು ಕಟ್ಟಿಸಿದ ಮಮದಾಪೂರ ಕೆರೆ 1,200 ಎಕರೆ ವಿಶಾಲವಾಗಿದ್ದು, 15 ಹಳ್ಳಿಗಳಿಗೆ ಆಸರೆಯಾಗಿದೆ. ಕೃಷ್ಷಾ ಮೇಲ್ದಂಡೆ ಯೋಜನೆಯಿಂದ ಇದಕ್ಕೆ ನೀರು ತುಂಬಿಸಲಾಗುತ್ತದೆ. ಹೀಗಾದಾಗ 42 ರೈತರಿಗೆ ಸೇರಿರುವ 178 ಎಕರೆ ಮುಳುಗಡೆಯಾಗಿ ಅಲ್ಲಿ ಏನನ್ನೂ ಬೆಳೆಯಲು ಆಗುತ್ತಿಲ್ಲ ಎಂದಿದ್ದಾರೆ.

ಹೀಗಾಗಿ ರೈತರು ಇಷ್ಟು ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೋರುತ್ತಿದ್ದರು. ಇದಕ್ಕೆ 42 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಅದಕ್ಕೆ ಹಣ ಬಿಡುಗಡೆ ಮಾಡುವಂತೆ ಕೋರುವ ಉದ್ದೇಶದಿಂದ ಈ ಸಭೆ ನಡೆಸಲಾಯಿತು.

ಜಲಸಂಪನ್ಮೂಲ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ ಎಂ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ.ಪವಿತ್ರಾ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Key words: Mamdapur lake, acquisition, Minister’s, MB Patil, Ramalingareddy

The post ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆ- ಸಚಿವರ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Census Self Enumeration: மக்கள்தொகை கணக்கெடுப்பை நீங்களே ஈசியா செய்யலாம்? எப்படிச் செய்யலாம்?|How to

இந்தியாவில் மக்கள்தொகை கணக்கெடுப்பு விரைவில் தொடங்க உள்ளன. இந்த நடைமுறையை எளிதாக்கும்...

Chittoor Horror: అసలు తల్లివేనా..? వివాహేతర సంబంధానికి అడ్డుగా ఉన్నాడని ఏడేళ్ల కుమారుడికి చిత్రహింసలు..!

Chittoor Horror: చిత్తూరు జిల్లా పలమనేరు నియోజకవర్గంలోని వీకోట మండలంలో హృదయ...