16
July, 2026

A News 365Times Venture

16
Thursday
July, 2026

A News 365Times Venture

ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ

Date:

ಬೆಂಗಳೂರು,ಜುಲೈ,15,2026 (www.justkannada.in):  ದೇಶದಲ್ಲೇ ರಾಜ್ಯದ ಆರೋಗ್ಯ ಇಲಾಖೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಗರಿಷ್ಠ 15 ನಿಮಿಷಗಳಲ್ಲಿ 108 ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳದಿದ್ದರೇ 5 ಸಾವಿರ ರೂ ದಂಡ ವಿಧಿಸುವ ನಿಯಮ ತರಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ಮುಂದೆ 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲಿದೆ. ತಡವಾಗಿ ಬರುವ ಆ್ಯಂಬುಲೆನ್ಸ್ ಗೆ 5 ಸಾವಿರ ರೂ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.  ಆಂಬ್ಯುಲೆನ್‍ 13 ರಿಂಧ 15 ನಿಮಿಷಗಳಲ್ಲಿ ರೋಗಿ ಇರುವ ಸ್ಥಳ ತಲುಪದೇ ಇದ್ದರೇ ದಂಡದ ಬರೆ ಬೀಳಲಿದೆ.

ಬೆಂಗಳೂರು ಸೇರಿ ಆ್ಯಂಬುಲೆನ್ಸ್ ಚಾಲಕರಿಗೆ 15 ನಿಮಿಷ ಡೆಡ್ ಲೈನ್ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದ್ದು ಹೊಸದಾಗಿ ಆಂಬ್ಯುಲೆನ್ಸ್ ಖರೀದಿಗೂ ರಾಜ್ಯ ಸರ್ಕಾರ ಮುಂದಾಗಿದೆ.  ಹಳೆಯ ಎಲ್ಲಾ ವಾಹನಗಳನ್ನ ಗುಜರಿಗೆ ಹಾಕುವಂತೆಯೂ ಅಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಬೇಕು. ಟ್ರಾಫಿಕ್ ಜಾಮ್ ನಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲ. ತುರ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ.  ಆಂಬ್ಯುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚಾಲಕರು ಸೇವಾ ಸಂಸ್ಥೆಗಳೂ ಸಮಯ ಪಾಲನೆ ಕಡ್ಡಾಯ.  ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Key words: 108 ambulance, reach, spot, 15 minutes,  Health Department

The post ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് സൈനികരുടെ മൊബൈല്‍ ഫോണ്‍ വിവരങ്ങള്‍ ഇറാന്‍ ചോര്‍ത്തിയതായി വെളിപ്പെടുത്തല്‍

ന്യൂയോര്‍ക്ക്: യു.എസ് സൈനികോദ്യോഗസ്ഥരെ ലക്ഷ്യമിട്ട് ഇറാന്റെ സൈബര്‍ ആക്രമണം നടന്നതായി ഗവേഷണ...

Mudragada Funeral: ముద్రగడకు ప్రభుత్వ అధికారిక లాంఛనాలతో అంత్యక్రియలు!

ఆంధ్రప్రదేశ్ మాజీ మంత్రి, సీనియర్ రాజకీయ నాయకుడు ముద్రగడ పద్మనాభంకు ప్రభుత్వ...

ദലിത് ഡോക്ടറെ അംഗീകരിക്കില്ല, ഗവേഷകനെ ‘ശര്‍മ’യാക്കും: എ.ഐയിലെ ജാതിയെക്കുറിച്ച് പഠനവുമായി സി.എസ്.ഒ.എച്ച്.

ന്യൂയോര്‍ക്ക്: ഇന്ത്യയിലെ ജാതി വ്യവസ്ഥയെ പുനരുല്‍പാദിപ്പിക്കുന്ന തരത്തിലാണ് ഐ.ഐ മോഡലുകളുടെ പ്രവര്‍ത്തനമെന്ന...