14
July, 2026

A News 365Times Venture

14
Tuesday
July, 2026

A News 365Times Venture

ಆಷಾಢ ಮಾಸ: ಚಾಮುಂಡಿ ಬೆಟ್ಟದ ಮೆಟ್ಟಲು, ಗೋಪುರಗಳಿಗೆ ಬಣ್ಣ-ಸುಣ್ಣ

Date:

ಮೈಸೂರು,ಜುಲೈ,13,2026 (www.justkannada.in):  ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸ್ವಚ್ಛ ಹಾಗೂ ಸುಂದರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಚಾಮುಂಡಿ ಬೆಟ್ಟದ ಮೆಟ್ಟಲುಗಳು ಮತ್ತು ಗೋಪುರಗಳಿಗೆ ಬಣ್ಣ ಹಾಗೂ ಸುಣ್ಣ ಬಳಿಯುವ ಕಾರ್ಯ ಕೈಗೊಳ್ಳಲಾಗಿದೆ.

ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್‌ ನ ಯುವಕರು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಈ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ಈ ಬಾರಿಯೂ ಮೆಟ್ಟಲುಗಳು ಹಾಗೂ ಗೋಪುರಗಳನ್ನು ಸ್ವಚ್ಛಗೊಳಿಸಿ ಬಣ್ಣ-ಸುಣ್ಣ ಬಳಿದು ಆಕರ್ಷಕವಾಗಿ ಸಜ್ಜುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯದುನಂದನ್ ಜಿ, ಆಷಾಢ ಮಾಸದಲ್ಲಿ ಸಾವಿರಾರು ಭಕ್ತರು ಹರಕೆ ತೀರಿಸಲು ಮೆಟ್ಟಲುಗಳ ಮೂಲಕ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ. ಭಕ್ತಾದಿಗಳು ಬೆಟ್ಟದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಸ್ನೇಹಿತರೆಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿ ಸೇವೆ ಮಾಡುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವ ನಾಯಕ್, ಕೃಷ್ಣ, ವೆಂಕಟೇಶ್, ಪಾಪಣ್ಣ, ಧನು, ಮಾದೇಶ್, ವೀರು, ಗಣೇಶ್, ಆಟೋ ಸ್ವಾಮಿ, ನಾಗೇಶ್ ಎಂ.ಆರ್. ಸೇರಿದಂತೆ ಹಲವರು ಭಾಗವಹಿಸಿದ್ದರು.

Key words: AshadaMasa, Mysore, Chamundi hill, steps, painted

The post ಆಷಾಢ ಮಾಸ: ಚಾಮುಂಡಿ ಬೆಟ್ಟದ ಮೆಟ್ಟಲು, ಗೋಪುರಗಳಿಗೆ ಬಣ್ಣ-ಸುಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

காவல் மரணம்: சாமானியருக்கு ஒரு சட்டம், த.வெ.க நிர்வாகிக்கு ஒரு சட்டமா? – உதயநிதி ஸ்டாலின் காட்டம்!

நாகர்கோவில் பகுதியைச் சேர்ந்த மாற்றுத்திறனாளி இளைஞரான சபரிவர்மன், தடைசெய்யப்பட்ட புகையிலைப் பொருளான...

Ram Mohan Naidu: తెలంగాణకు మరో రెండు ఎయిర్‌పోర్టులు.. కేంద్ర మంత్రి కీలక ప్రకటన

Ram Mohan Naidu: తెలంగాణలో మరో రెండు ఎయిర్‌పోర్టులు అందుబాటులోకి రానున్నాయి....

ಅಧಿಕಾರಿಗಳಿಗೆ ಪೊರಕೆ ಸೇವೆ, ಹಲ್ಲೆ : ಮಹಿಳೆಯರು ಸೇರಿ 10ಕ್ಕೂ ಹೆಚ್ಚು ರೈತರ ವಿರುದ್ದ ಕೇಸ್

ರಾಮನಗರ,ಜುಲೈ14,2026 (www.justkannada.in):  ಬಿಡದಿ ಟೌನ್ ಶಿಪ್  ಸರ್ವೇಗಾಗಿ ತೆರಳಿದ್ದ ಅಧಿಕಾರಿಗಳಿಗೆ...

ഹോര്‍മുസ് കടലിടുക്കിലെ യു.എസ് നികുതി പിരിവ് കടല്‍ക്കൊള്ള; ട്രംപിന്റെ ടോള്‍ പ്രഖ്യാപനത്തിനെതിരെ ബ്രസീല്‍ പ്രസിഡന്റ്

  സാവാപോളോ: യു.എസ് പ്രസിഡന്റ് ഡൊണാള്‍ഡ് ട്രംപിനെതിരെ കടുത്ത വിമര്‍ശനവുമായി ബ്രസീല്‍...