14
July, 2026

A News 365Times Venture

14
Tuesday
July, 2026

A News 365Times Venture

ಮೈಸೂರು ದಸರಾದಲ್ಲಿ ಕಂಬಳ: ಕೇಂದ್ರ ಸಚಿವ HDK  ಆಕ್ಷೇಪ

Date:

ಬೆಂಗಳೂರು,ಜುಲೈ,11,2026 (www.justkannada.in): ಕರಾವಳಿ ಭಾಗದ ಕ್ರೀಡೆ ಕಂಬಳವನ್ನು ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಆಯೋಜಿಸುವುದಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್ ಡಿಕೆ, ‘ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ’ ಎಂದಿದ್ದಾರೆ.

ಕಂಬಳವು ಕರಾವಳಿ  ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಗಳ ಸಂಕೇತವಾಗಿದೆ. ಕಂಬಳ ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು ಎಂದು ಕಿಡಿಕಾರಿದ್ದಾರೆ.

‘ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ ಎನ್ನುವುದು ನನ್ನ ಭಾವನೆ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದು  ಹೆಚ್ ಡಿಕೆ ತಿಳಿಸಿದ್ದಾರೆ.

Key words: Kambala, Mysore Dasara,  Union Minister, HDK, objects

The post ಮೈಸೂರು ದಸರಾದಲ್ಲಿ ಕಂಬಳ: ಕೇಂದ್ರ ಸಚಿವ HDK  ಆಕ್ಷೇಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഫലസ്തീന്‍ തടവുകാരെ സന്ദര്‍ശിക്കുന്നത് തടയും; കോടതി വിധി നിലനില്‍ക്കെ റെഡ് ക്രോസിന് നിയന്ത്രണങ്ങളുമായി ഇസ്രഈല്‍

ടെല്‍ അവീവ്: ഫലസ്തീന്‍ തടവുകാരെ റെഡ് ക്രോസ് സന്ദര്‍ശിക്കുന്നത് തടയാന്‍ കര്‍ശന...

லஞ்ச ஒழிப்புத்துறை இயக்குநர் அருண் ஐ.பி.எஸ் பணியிட மாற்றம்; போலீஸ் அகாடமி இயக்குநராக நியமினம்!

சென்னை மாநகரக் காவல் ஆணையராக இருந்த அருண் ஐ.பி.எஸ்-ஸை தேர்தல் நேரத்தில்,...

APTRANSCO Recruitment: నిరుద్యోగులకు గుడ్ న్యూస్.. APTRANSCOలో 200 AEE ఉద్యోగాలు.. రూ.2.08 లక్షల వరకు జీతం.!

APTRANSCO Recruitment: ప్రభుత్వ ఉద్యోగాల కోసం ఎదురుచూస్తున్న ఇంజినీరింగ్ అభ్యర్థులకు ఆంధ్రప్రదేశ్...

ಬಿಡದಿ ಟೌನ್ ಶಿಪ್ ವಿರುದ್ದ ಆಕ್ರೋಶ: ಮಹಿಳೆಯರಿಂದ ಅಧಿಕಾರಿಗಳಿಗೆ ಪೊರಕೆ ಸೇವೆ, ಕಾರಿನ ಗ್ಲಾಸ್ ಪೀಸ್ ಪೀಸ್

ರಾಮನಗರ,ಜುಲೈ,13,2026 (www.justkannada.in):  ರಾಮನಗರದ ಬಿಡದಿ ಟೌನ್ ಶಿಪ್ ವಿರುದ್ದ ಆಕ್ರೋಶ...