ಮೈಸೂರು,ಜುಲೈ,11,2026 (www.justkannada.in): ರಾಜ್ಯದಲ್ಲಿ ಇರೋದು ಟೆಂಡರ್ ಸರ್ಕಾರ. ಡಿಕೆ ಶಿವಕುಮಾರ್ ಟೆಂಡರ್ ಸಿಎಂ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಇಂದು ಮೈಸೂರುನಲ್ಲಿ ನಡೆದ ಕಾಯಕ ಸಮುದಾಯಗಳ ಸಭೆಯಲ್ಲಿ ಮಾತನಾಡಿದ ಆರ್.ಅಶೋಕ್, ಎರಡುವರೆ ವರ್ಷಕ್ಕೆ ಡಿಕೆ ಶಿವಕುಮಾರ್ ಟೆಂಡರ್ ಮಾಡಿಕೊಂಡಿದ್ದಾರೆ. ಈ ಸರ್ಕಾರ ಇನ್ನೂ ಒಂದುವರೆ ವರ್ಷ ಕೂಡ ಉಳಿಯೋದು ಅನುಮಾನ ಒಂದುವರೆ ವರ್ಷದಲ್ಲಿ ಇನ್ನೊಬ್ಬರು ಸಿಎಂ ಆಗಬಹುದು. ಡಿಕೆಶಿ ಅಂದ್ರೆ ಟೆಂಡರ್ ಸಿಎಂ ಎಂದರು.
ರಾಜ್ಯದಲ್ಲೂ 20ರಿಂದ 30 ಲಕ್ಷ ಜನ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಆರ್.ಅಶೋಕ್. ಡಿಕೆ ಶಿವಕುಮಾರ್ ಮುಖವಾಡದ ಸಿಎಂ ಊರಿನವರಿಗೆಲ್ಲಾ ನಾಮ ಹಾಕುವ ವ್ಯಕ್ತಿ. ಸಿಎಂ ಡಿಕೆಶಿ ಎಲ್ಲರೂ ಕಾಣುವ ರೀತಿ ವಿಭೂತಿ ನಾಮ ಹಾಕುತ್ತಾರೆ. ಸಿಎಂ ಡಿಕೆ ಶಿವಕುಮಾರ್ ಹಣೆಯ ತುಂಬಾ ವಿಭೂತಿ ಇರುತ್ತೆ. ಅದರೆ ಹೃದಯದ ತುಂಬಾ ಬಾಂಗ್ಲಾವ ಲಸಿಗರ ಮೇಲೆ ಪ್ರೀತಿ ಇರುತ್ತೆ. ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು ಕೊಡಲು ಸರ್ಕಾರ ಮುಂದಾಗಿದೆ. ಸರ್ಕಾರ ಶಾಶ್ವತ ವಾಸ ದೃಢೀಕರಣ ಪತ್ರ ಆದೇಶ ರದ್ದು ಮಾಡಬೇಕು. ಶಾಶ್ವತ ವಾಸ ದೃಢೀಕರಣ ಪತ್ರ ಕೊಡುವ ಹಕ್ಕು ರಾಜ್ಯ ಸರ್ಕಾರಕ್ಕಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಮುಡಾ ಸೈಟ್ ಮಾಡಿಕೊಂಡಿದ್ದೇ ದೊಡ್ಡ ಸಾಧೆನೆ ಎಂದು ಲೇವಡಿ ಮಾಡಿದರು.
Key words: tender government, DK Shivakumar, tender CM, R. Ashok
The post ರಾಜ್ಯದಲ್ಲಿ ಇರೋದು ಟೆಂಡರ್ ಸರ್ಕಾರ, ಡಿಕೆಶಿ ಟೆಂಡರ್ ಸಿಎಂ- ಆರ್.ಅಶೋಕ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





