8
July, 2026

A News 365Times Venture

8
Wednesday
July, 2026

A News 365Times Venture

ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ

Date:

ಮೈಸೂರು,ಜುಲೈ,7,2026 (www.justkannada.in): ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬವು ನ್ಯಾಯಕ್ಕಾಗಿ ತಹಸೀಲ್ದಾರ್  ಮೊರೆ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮದ ರೇವಮ್ಮ ಎಂಬುವರ ಮನೆಗೆ ಫೈನಾನ್ಸ್ ಸಿಬ್ಬಂದಿ ಬೀಗ ಜಡಿದಿದ್ದು ಕಂಗಾಲಾದ ಕುಟುಂಬಸ್ಥರು ಇದೀಗ ನ್ಯಾಯ ಕೊಡಿಸಲು ತಹಶೀಲ್ದಾರ್   ಅವರಿಗೆ ಮನವಿ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ‘ಇಕ್ವಿಟಿ ಸ್ಮಾಲ್ ಫೈನಾನ್ಸ್’  ನಲ್ಲಿ ರೇಖಾ ಹಾಗೂ ರೇವಮ್ಮ ಸಾಲ ಪಡೆದಿದ್ದರು. 3.15 ಲಕ್ಷ ಸಾಲ ಪಡೆದಿದ್ದು ಪ್ರತಿ ತಿಂಗಳು 7 ಸಾವಿರ ಕಂತು ಪಾವತಿ ಮಾಡುತ್ತಿದ್ದರು. ಆದರೆ  ಅನಾರೋಗ್ಯದ ನಿಮಿತ್ತ ಎರಡು ತಿಂಗಳು ಕಂತು ಕಟ್ಟಿಲ್ಲ. ಈ ಬಗ್ಗೆ ಫೈನಾನ್ಸ್ ಗೆ ತೆರಳಿ ಕುಟುಂಬ ಸಮಯಾವಕಾಶ ಕೇಳಿದ್ದು, ಆದರೂ ಸಹ  ಅತ್ತೆ ರೇವಮ್ಮ ಹಾಗೂ ಸೊಸೆ ಮನೆಯಲ್ಲಿ ಇಲ್ಲದ ವೇಳೆ  ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬೀಗ  ಜಡಿದು ನೋಟಿಸ್ ಅಂಟಿಸಿದ್ದಾರೆ. ಈ ಮೂಲಕ ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ.

ಮನೆಗೆ ಬೀಗ ಜಡಿದ ಹಿನ್ನೆಲೆಯಲ್ಲಿ ರೇವಮ್ಮ ಕುಟುಂಬದವರಿಗೆ 15 ದಿನಗಳಿಂದ ಮನೆ ಮುಂದಿನ ಜಗುಲಿಯೇ ಆಶ್ರಯತಾಣವಾಗಿದ್ದು ಇದೀಗ ನ್ಯಾಯ ಸಿಗದಿದ್ದರೆ ವಿಷ ಕುಡಿಯುವ ಎಚ್ಚರಿಕೆ ನೀಡಿದ್ದಾರೆ.

Key words: Mysore , Family, finance, harassment, Justice

The post ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಲಾಗುತ್ತಿದೆ- JDS  ಆರೋಪ

ಬೆಂಗಳೂರು,ಜುಲೈ,8,2026 (www.justkannada.in):  ಈ ಬಾರಿ ಮುಂಗಾರು ಮಳೆ ಸರಿಯಾಗಿ ಆಗದೇ...

അയോധ്യ ക്ഷേത്രക്കൊള്ള; സംഭാവനകള്‍ക്ക് പകരം നല്‍കിയത് വ്യാജ രസീത്, ഭക്തരെ കബളിപ്പിച്ചതായി കണ്ടെത്തല്‍

  ലഖ്‌നൗ: അയോധ്യയിലെ രാമക്ഷേത്ര നിര്‍മാണത്തിനായി ലഭിച്ച സംഭാവനകളില്‍ തട്ടിപ്പ് നടത്തിയ...

Women Financial Assistance: మహిళలకు గుడ్ న్యూస్.. ఇక, నెలకు రూ.2,500.. అర్హతలు ఇవే..

Women Financial Assistance: ఆర్థికంగా వెనుకబడిన మహిళలకు ఆర్థిక సహాయం అందించే...