3
July, 2026

A News 365Times Venture

3
Friday
July, 2026

A News 365Times Venture

ಮೈಸೂರು: 24 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಹಾಗೂ ವೈನ್ ನಾಶ

Date:

ಮೈಸೂರು, ಜುಲೈ,2,2026 (www.justkannada.in): ಅಬಕಾರಿ ಇಲಾಖೆಯು ಅವಧಿ ಮೀರಿದ ಹಾಗೂ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ ಮದ್ಯವನ್ನು ನಾಶಪಡಿಸುವ ಕಾರ್ಯಾಚರಣೆಯನ್ನು ಗುರುವಾರ ನಡೆಸಿತು.

ಅಬಕಾರಿ ಉಪ ಆಯುಕ್ತ ವಿವೇಕ್ ಜೆ. ಅವರ ಆದೇಶದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ವಿಕ್ರಮ್ ಎಲ್.ಬಿ., ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಹಾಗೂ ಮೈಸೂರು ಉಪ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಮೈಸೂರು ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್‌ ಬಿಸಿಎಲ್ ಲಿಕ್ಕರ್ ಡಿಪೋ ಮೈಸೂರು-1 ಮತ್ತು ಮೈಸೂರು-2ರಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು.

ಕಾರ್ಯಾಚರಣೆಯಲ್ಲಿ ವಿವಿಧ ಬ್ರಾಂಡ್‌ ಗಳ ಅವಧಿ ಮೀರಿದ 929 ರೆಡಿ ಪ್ಯಾಕ್‌ ಗಳ (8,870 ಲೀಟರ್) ಬಿಯರ್ ಹಾಗೂ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದ 138 ರೆಡಿ ಪ್ಯಾಕ್‌ ಗಳ (1,216 ಲೀಟರ್) ವೈನ್ ನಾಶಪಡಿಸಲಾಯಿತು. ನಾಶಪಡಿಸಲಾದ ಮದ್ಯದ ಒಟ್ಟು ಮೌಲ್ಯ ಸುಮಾರು ₹24 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಕೆಎಸ್‌ಬಿಸಿಎಲ್ ಮೈಸೂರು-1 ಡಿಪೋದ ಮಳಿಗೆ ವ್ಯವಸ್ಥಾಪಕ ಡಿ.ಕೆ. ವೆಂಕಟೇಶ್, ಮೈಸೂರು-2 ಡಿಪೋದ ಮಳಿಗೆ ವ್ಯವಸ್ಥಾಪಕ ಯೋಗೇಶ್ ಎಂ.ಆರ್., ಅಬಕಾರಿ ನಿರೀಕ್ಷಕರಾದ ನಂದಿತ ಹಳದನಕರ್ ಹಾಗೂ ರಾಧಾ ಎಸ್.ಪಿ., ಅಬಕಾರಿ ಉಪ ನಿರೀಕ್ಷಕ ಆನಂದ್ ಸೇರಿದಂತೆ ಅಬಕಾರಿ ಇಲಾಖೆ ಮತ್ತು ಡಿಪೋ ಸಿಬ್ಬಂದಿ ಉಪಸ್ಥಿತರಿದ್ದರು.

ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಮದ್ಯ ನಾಶಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ENGLISH SUMMARY…

Mysuru: Expired Beer and Wine Worth ₹24 Lakh Destroyed

Mysuru, July 2: The Excise Department destroyed expired beer and unsold wine worth around ₹24 lakh at the KSBCL Liquor Depots (Mysuru-1 and Mysuru-2) in Koorgalli on Thursday.

The operation was carried out under the directions of Excise Deputy Commissioner Vivek J. and led by Excise Deputy Superintendent Vikram L.B. A total of 929 cases (8,870 litres) of expired beer and 138 cases (1,216 litres) of wine that remained unsold for a long period were destroyed as per departmental procedures.

KSBCL depot managers, excise inspectors, officials, and staff were present during the disposal process.

Key words: Mysore, Expired, beer,  wine, worth Rs. 24 lakh, destroyed

The post ಮೈಸೂರು: 24 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಹಾಗೂ ವೈನ್ ನಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് രാഷ്ട്രീയത്തില്‍ ഇസ്രഈല്‍ വിമര്‍ശനം വിജയമന്ത്രമാകുന്നു, ഇടത് സ്ഥാനാര്‍ത്ഥികള്‍ ജയിക്കുന്നു; ആശങ്കയോടെ ഇസ്രഈലി മാധ്യമങ്ങള്‍

  വാഷിങ്ടണ്‍: അമേരിക്കന്‍ രാഷ്ട്രീയത്തില്‍ ഇസ്രഈലിനോടുള്ള നിലപാടുകളില്‍ നിര്‍ണായകമായ മാറ്റം പ്രകടമാകുന്നതായി...

தமிழகத்தில் அதிகரிக்கும் வேலையின்மை… என்ன செய்யப்போகிறது அரசு?

கல்வி தொடங்கி சுகாதாரம் வரைக்கும் வளர்ச்சிப் பட்டியலில் முன்னணியில் இருக்கிறது, தமிழ்நாடு....

Somu Veerraju: జగన్‌కు దమ్ముంటే చర్చకు రావాలి.. సోము వీర్రాజు సవాల్

Somu Veerraju: తిరుపతిలో బీజేపీ ఎమ్మెల్సీ సోము వీర్రాజు వైసీపీ అధినేత,...

സര്‍ക്കാര്‍ സ്‌കൂളുകളില്‍ ഹിന്ദു പ്രാര്‍ത്ഥനകള്‍ ചൊല്ലാന്‍ വിദ്യാര്‍ത്ഥികളെ നിര്‍ബന്ധിക്കരുത്: ഛത്തീസ്ഗഡ് ഹൈക്കോടതി

  റായ്പൂര്‍: സര്‍ക്കാര്‍ സ്‌കൂളുകളില്‍ കുട്ടികളെക്കൊണ്ട് ഹിന്ദു പ്രാര്‍ത്ഥനകള്‍ ചൊല്ലിക്കുന്നത് നിര്‍ബന്ധമാക്കാന്‍...