3
July, 2026

A News 365Times Venture

3
Friday
July, 2026

A News 365Times Venture

ಮೈಸೂರಿನಲ್ಲಿ SIR ಪ್ರಕ್ರಿಯೆ: ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು

Date:

ಮೈಸೂರು,ಜುಲೈ,1,2026 (www.justkannada.in): ಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಈ ಸಂಬಂಧ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಜಿಲ್ಲೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಪ್ರಸ್ತುತ ಹಂತದ ಗಣಿಕೆ ನಮೂನೆ (Enumeration Form – EF)ಗಳನ್ನು ಮತದಾರರಿಗೆ ಹಂಚಿಕೆ ಮಾಡುವ ಕಾರ್ಯದ ಕುರಿತು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಹಾಗೂ ಮತದಾರರ ನೋಂದಣಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

217-ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 06 ಗೋಕುಲಂ – ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ಗಣಿಕೆ ನಮೂನೆ (Enumeration Form – EF)ಗಳನ್ನು ವಿತರಣೆ ಮಾಡುತ್ತಿರುವ ಕಾರ್ಯದ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಮೈಸೂರು ಮಹಾನಗರಪಾಲಿಕೆಯ ಉಪ ಆಯುಕ್ತರು, ವಲಯ ಆಯುಕ್ತರು, ಕಂದಾಯ ಸಿಬ್ಬಂದಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: SIR, process, Mysore, Officials, inspection

The post ಮೈಸೂರಿನಲ್ಲಿ SIR ಪ್ರಕ್ರಿಯೆ: ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സര്‍ക്കാര്‍ സ്‌കൂളുകളില്‍ ഹിന്ദു പ്രാര്‍ത്ഥനകള്‍ ചൊല്ലാന്‍ വിദ്യാര്‍ത്ഥികളെ നിര്‍ബന്ധിക്കരുത്: ഛത്തീസ്ഗഡ് ഹൈക്കോടതി

  റായ്പൂര്‍: സര്‍ക്കാര്‍ സ്‌കൂളുകളില്‍ കുട്ടികളെക്കൊണ്ട് ഹിന്ദു പ്രാര്‍ത്ഥനകള്‍ ചൊല്ലിക്കുന്നത് നിര്‍ബന്ധമാക്കാന്‍...

"மனமகிழ் மன்றங்களில் அதிகாரிகளைத் தவிர வேறு யாரும் ஆய்வு செய்யக் கூடாது" – உயர் நீதிமன்றம் உத்தரவு

தமிழ்நாடு எப்.எல்.2  உரிமத்தாரர்கள் சங்கத் தலைவர் வீரபாண்டியன் மதுரை உயர்நீதிமன்ற கிளையில்...

Topudurthi Prakash Reddy: టిప్పర్‌తో ఢీకొట్టి నన్ను హత్య చేయాలని కుట్ర.. తోపుదుర్తి సంచలన ఆరోపణలు

Topudurthi Prakash Reddy: అనంతపురంలో వైసీపీ నాయకుడు, రాప్తాడు మాజీ ఎమ్మెల్యే...

ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್:  ಶೇ12.5 ರಷ್ಟು ವೇತನ ಹೆಚ್ಚಳ

ಬೆಂಗಳೂರು,ಜುಲೈ,2,2026 (www.justkannada.in):  ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು...