30
June, 2026

A News 365Times Venture

30
Tuesday
June, 2026

A News 365Times Venture

ಪೊಲೀಸ್ ಅಧಿಕಾರಿಗಳ ಮಾಧ್ಯಮ ಸಂಪರ್ಕಕ್ಕೆ ನಿರ್ಬಂಧ: ಡಿಜಿಪಿ ಎಂ.ಎ. ಸಲೀಂ ಸುತ್ತೋಲೆ

Date:

ಬೆಂಗಳೂರು, ಜೂನ್,29,2026 (www.justkannada.in): ಅಧಿಕೃತ ಮಾಹಿತಿಯ ಅನಧಿಕೃತ ಬಹಿರಂಗಪಡಿಸುವಿಕೆಯನ್ನು ತಡೆಯಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ (ಡಿಜಿಪಿ) ಎಂ.ಎ. ಸಲೀಂ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯ ಪ್ರಕಾರ, ಇನ್ನುಮುಂದೆ ರಾಜ್ಯ ಮಟ್ಟದಲ್ಲಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಥವಾ ಅವರ ಅನುಪಸ್ಥಿತಿಯಲ್ಲಿ ಡಿಐಜಿಪಿ ಮಾತ್ರ ಅಧಿಕೃತ ವಕ್ತಾರರಾಗಿರುತ್ತಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ನಗರಗಳಲ್ಲಿ ಪೊಲೀಸ್ ಆಯುಕ್ತರು ಅಥವಾ ಅಧಿಕಾರ ಪಡೆದ ಹಿರಿಯ ಅಧಿಕಾರಿಗಳು ಮಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡಲು ಅವಕಾಶವಿದೆ.

ಇತರ ಯಾವುದೇ ಪೊಲೀಸ್ ಸಿಬ್ಬಂದಿ ಅಥವಾ ಅಧಿಕಾರಿಗಳು ಲಿಖಿತ ಅನುಮತಿ ಇಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡುವುದು, ಸಂದರ್ಶನ ನೀಡುವುದು, ಚರ್ಚೆಗಳಲ್ಲಿ ಭಾಗವಹಿಸುವುದು ಅಥವಾ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುವುದು ನಿಷೇಧಿಸಲಾಗಿದೆ.

ಅದೇ ರೀತಿ, ಅಪರಾಧ ತನಿಖೆ, ಕಾನೂನು ಸುವ್ಯವಸ್ಥೆ, ಇಲಾಖಾ ವಿಚಾರಗಳು, ಅಪರಾಧ ಸ್ಥಳದ ದೃಶ್ಯಗಳು ಸೇರಿದಂತೆ ಯಾವುದೇ ಅಧಿಕೃತ ಮಾಹಿತಿಯನ್ನು ವೈಯಕ್ತಿಕ ಅಥವಾ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್, ಫಾರ್ವರ್ಡ್ ಅಥವಾ ಕಾಮೆಂಟ್ ಮಾಡುವುದಕ್ಕೂ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ.

ಆದರೆ ಪ್ರಕೃತಿ ವಿಕೋಪ, ಸಂಚಾರ ಮಾರ್ಗ ಬದಲಾವಣೆ, ರಕ್ಷಣಾ ಕಾರ್ಯಾಚರಣೆ ಅಥವಾ ತುರ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಗಳ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ನೀಡಬಹುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ENGLISH SUMMARY…

Karnataka Police Restrict Media Interaction

Bengaluru: Karnataka DGP & IGP M.A. Saleem has issued a circular restricting police personnel from sharing official information with the media or on social media without authorization.

Under the new guidelines, only designated senior officers, including ADGPs, Range IGPs, Police Commissioners, SPs, and heads of special units, are authorized to brief the media. Other officers and staff are barred from giving interviews, statements, or participating in media discussions without written approval.

The order also prohibits posting, forwarding, or commenting on official police matters on social media without prior permission. However, field officers may issue public safety advisories during emergencies such as disasters, traffic diversions, and rescue operations.

Key words: Karnataka, Police, Restrict, Media Interaction

The post ಪೊಲೀಸ್ ಅಧಿಕಾರಿಗಳ ಮಾಧ್ಯಮ ಸಂಪರ್ಕಕ್ಕೆ ನಿರ್ಬಂಧ: ಡಿಜಿಪಿ ಎಂ.ಎ. ಸಲೀಂ ಸುತ್ತೋಲೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ജനാധിപത്യത്തില്‍ വിശ്വസിക്കാത്ത ഭരണാധികാരി, ജനങ്ങളെ വോട്ടവകാശത്തില്‍ നിന്ന് അകറ്റുന്നു’: ട്രംപിനെതിരെ സാന്‍ഡേഴ്‌സ്

വാഷിങ്ടണ്‍: യു.എസ് പ്രസിഡന്റ് ഡൊണാള്‍ഡ് ട്രംപിനെതിരെ രൂക്ഷ വിമര്‍ശനവുമായി ഡെമോക്രാറ്റിക് പാര്‍ട്ടി...

தவெக : தமிழகத்தில் ட்ரெண்ட் ஆகும் `ஆயா ராம் காயா ராம்' அரசியல்! – மக்கள் முடிவுக்கு என்ன மரியாதை?

மனம் போன போக்கில் கட்சி மாறும் அரசியல் காட்சிகளை வட இந்தியாவில்...

LA 2028 Olympics: ఒలింపిక్స్‌లో భారత్-పాక్ హైవోల్టేజ్ మ్యాచ్ ఉంటుందా? క్లారిటీ ఇదిగో..

LA 2028 Olympics: ఒలింపిక్స్ వేదికపై భారత్-పాకిస్తాన్ హై-వోల్టేజ్ పోరును చూడాలనుకునే...

കെ. സുധാകരന്റെ തൂഫാന്‍ യോഗത്തില്‍ പങ്കെടുത്തയാള്‍ ബാറില്‍ മദ്യപിച്ച് തല്ലുണ്ടാക്കിയതിന് പൊലീസ് പിടിയില്‍

കൊച്ചി: കൊച്ചിയില്‍ ഓപ്പറേഷന്‍ തൂഫാനെ പിന്തുണച്ച് കോണ്‍ഗ്രസ് നേതാവ് കെ. സുധാകരന്‍...