25
June, 2026

A News 365Times Venture

25
Thursday
June, 2026

A News 365Times Venture

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಎಂ.ಎನ್. ಅನುಚೇತ್ ನೇಮಕ

Date:

 

ಬೆಂಗಳೂರು, ಜೂನ್ 24: ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಪ್ರಸ್ತುತ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎನ್. ಅನುಚೇತ್ (ಐಪಿಎಸ್-2009 ಬ್ಯಾಚ್) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ಯ ಡಿಐಜಿ ಹಾಗೂ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೇಮಂತ್ ಎಂ. ನಿಂಬಾಳ್ಕರ್ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ.

ಇದರ ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅನುಚೇತ್ ಅವರಿಗೆ ವಹಿಸಲಾಗಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ಟಿ.ಎಚ್.ಎಂ. ಅವರ ವರ್ಗಾವಣೆಯ ನಂತರ ಈ ಆದೇಶ ಜಾರಿಗೊಂಡಿದೆ.

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಬುಧವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.

Key words: IPS Officer, M.N. Anucheth, Appointed, DIPR Commissioner

SUMMARY:

IPS Officer M.N. Anucheth Appointed as DIPR Commissioner

Bengaluru, June 24: The Karnataka Government has appointed IPS officer M.N. Anucheth as the Commissioner of the Department of Information and Public Relations (DIPR) with immediate effect.

Anucheth, currently serving as Deputy Inspector General of Police (Recruitment), replaces Hemant M. Nimbalkar, who has been transferred. He has also been given the additional charge of Commissioner, Youth Empowerment and Sports Department.

The appointment was announced through an official notification issued by the Department of Personnel and Administrative Reforms (DPAR).

The post ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಎಂ.ಎನ್. ಅನುಚೇತ್ ನೇಮಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ജീവിതത്തിന്റെ സായംസന്ധ്യയില്‍ പുനരാലോചന നന്നായിരിക്കും; ഖുര്‍ആന്‍ ഒന്നുകൂടി വായിച്ചാല്‍ വലിയ തിരിച്ചറിവുകള്‍ തേടിയെത്തും: കെ.ഇ.എന്നിനോട് അഭ്യര്‍ത്ഥനയുമായി ടി.കെ. അഷ്‌റഫ്

കോഴിക്കോട്: കെ.ഇ.എന്‍ കുഞ്ഞഹമ്മദിനെതിരെ അടുത്തിടെ ഉയര്‍ന്ന വിവാദങ്ങളെക്കുറിച്ച് ഫേസ്ബുക്ക് പോസ്റ്റുമായി വിസ്ഡം ഇസ്‌ലാമിക്...

`வரும் திங்கட்கிழமை' – தவெக-வில் இணைகிறாரா அதிமுக முன்னாள் அமைச்சர் சி.விஜயபாஸ்கர்?

அதிமுகவின் முன்னாள் அமைச்சரும், விராலிமலை தொகுதியின் முன்னாள் எம்.எல்.ஏவுமான சி. விஜயபாஸ்கர்...

സുവേന്ദുവുമായി ആഴത്തിലുള്ള അടുപ്പമെന്ന് മഹുവ മൊയിത്ര;ചര്‍ച്ചയായി തൃണമൂല്‍ നേതാവിന്റെ അഭിമുഖം

കൊല്‍ക്കത്ത: പശ്ചിമ ബംഗാള്‍ രാഷ്ട്രീയത്തില്‍ പുതിയ അഭ്യൂഹങ്ങള്‍ക്ക് തുടക്കം കുറിച്ച് തൃണമൂല്‍...