ಬೆಂಗಳೂರು,ಜೂನ್,23,2026 (www.justkannada.in): ಆರ್ ಎಸ್ ಎಸ್ ನೋಂದಣಿ ಬಗ್ಗೆ ಮಾಹಿತಿ ನೀಡುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಅವರಿಗೆ ಪತ್ರ ಬರೆದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಈ ಕುರಿತು ಮತ್ತೆ ಪ್ರಸ್ತಾಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನೋಂದಣಿ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದೇನೆ . ಇದೇ ಅಂತಿಮ ಅಲ್ಲ. ಅವರು ಉತ್ತರ ಕೊಡಲಿ. ತಾಳ್ಮೆಯಿಂದ ಕಾಯೋಣ ಎಂದರು.
ಆರ್ ಎಸ್ ಎಸ್ ನವರು ದಾಖಲೆ ಕೊಡದೆ ಕಾನೂನು ಮೀರುವಂತಿಲ್ಲ. ಅವರು ದಾಖಲೆ ಕೊಡದೇ ಕಾನೂನು ಚೌಕಟು ಮೀರಲು ನಾನು ಬಿಡಲ್ಲ. ಆರ್ ಎಸ್ ಎಸ್ ಬಳಿ ದಾಖಲೆ ಇದ್ದಿದ್ದರೇ ನನ್ನ ಮುಖಕ್ಕೆ ಎಸೆಯುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.
Key words: RSS, Registration, Home Minister, Priyank Kharge
The post ಆರ್ ಎಸ್ ಎಸ್ ನವರು ದಾಖಲೆ ಕೊಡದೇ ಕಾನೂನು ಮೀರುವಂತಿಲ್ಲ-ಗೃಹ ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





