4
June, 2026

A News 365Times Venture

4
Thursday
June, 2026

A News 365Times Venture

“ ಪ್ರೊ-ಹಿಂದೂ”  ಇಮೇಜ್‌ನೊಂದಿಗೆ ಸಿಎಂ ಕುರ್ಚಿಗೆ ಡಿಕೆಶಿ: ಬಿಜೆಪಿ ರಾಜಕೀಯ ಅಸ್ತ್ರಕ್ಕೆ ಮಂಕು.?

Date:

 

ಬೆಂಗಳೂರು, ಜೂ.೦೪,೨೦೨೬: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ವ್ಯಕ್ತಿತ್ವದ ಜೊತೆಗೆ ಅವರ ಧಾರ್ಮಿಕ ನಂಬಿಕೆಗಳು ಮತ್ತು ಹಿಂದೂ ಆಚರಣೆಗಳ ಪಾಲನೆ ಇದೀಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕನಾಗಿದ್ದರೂ, ವೈಯಕ್ತಿಕ ಬದುಕಿನಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಾಯಕ ಎಂಬ ಇಮೇಜ್ ಡಿಕೆ ಶಿವಕುಮಾರ್ ಅವರಿಗೆ ಬಹಳ ಹಿಂದಿನಿಂದಲೂ ಇದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ತಮ್ಮ ಆರಾಧ್ಯ ದೈವವೆಂದು ಪರಿಗಣಿಸುವ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್, ತಮ್ಮ ಧಾರ್ಮಿಕ ನಂಬಿಕೆಯನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ವ್ಯಕ್ತಪಡಿಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಡಿಕೆ ಶಿವಕುಮಾರ್ ಅವರ ಭಾಷಣಗಳಲ್ಲಿ ಭಗವದ್ಗೀತೆಯ ಶ್ಲೋಕಗಳು, ಬಸವಣ್ಣನ ವಚನಗಳು ಆಗಾಗ್ಗೆ ಉಲ್ಲೇಖವಾಗುತ್ತವೆ. ಅನೇಕ ಸಭೆಗಳಲ್ಲಿ ಅವರು ಇವುಗಳನ್ನು ಉಲ್ಲೇಖಿಸಿ ಜನರಿಗೆ ಸಂದೇಶ ನೀಡಿರುವುದು ಗಮನಾರ್ಹ.

ಧಾರ್ಮಿಕವಾಗಿ ಕಟ್ಟುನಿಟ್ಟಿನ ಆಚರಣೆಗಳನ್ನು ಪಾಲಿಸುವ ನಾಯಕರಾಗಿ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್, ಹಣೆಯಲ್ಲಿ ಕುಂಕುಮ ಧರಿಸುವುದು, ಕೈಗೆ ವಿವಿಧ ದೇವರ ರಕ್ಷಾಸೂತ್ರಗಳನ್ನು ಕಟ್ಟಿಕೊಳ್ಳುವುದು, ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡುವುದು ಸೇರಿದಂತೆ ಹಲವು ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ವಾರಗಳ ವ್ರತ, ವಿಶೇಷ ಪೂಜೆಗಳು ಮತ್ತು ಯಾತ್ರೆಗಳಲ್ಲಿ ಭಾಗವಹಿಸುವುದು ಅವರ ರಾಜಕೀಯ ಜೀವನದ ಭಾಗವಾಗಿಯೇ ಪರಿಣಮಿಸಿದೆ.

ವಿಧಾನಸೌಧ ಪ್ರವೇಶಿಸುವ ಮೊದಲು ದೀರ್ಘ ದಂಡ ನಮಸ್ಕಾರ ಮಾಡಿರುವುದು, ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾಗುವ ಮುನ್ನ ಯತಿಗಳಿಂದ ಶಾಸ್ತ್ರೋಕ್ತ ಮಂತ್ರೋಚ್ಚಾರಣೆ ನಡೆಯುವುದು ಕೂಡ ಸುದ್ದಿಯಾಗಿತ್ತು. ಅಧಿಕಾರ ಸ್ವೀಕಾರದಂತಹ ರಾಜಕೀಯ ಕಾರ್ಯಕ್ರಮಗಳಲ್ಲಿಯೂ ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡಿರುವುದು ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಇತ್ತೀಚೆಗೆ ನಡೆದ ಕುಂಭಮೇಳದಲ್ಲಿ ಮಾಘ ಸ್ನಾನ ಮಾಡಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಅವರ ಚಿತ್ರಗಳು ದೇಶಾದ್ಯಂತ ಗಮನ ಸೆಳೆದಿದ್ದವು. ಈ ಮೂಲಕ ಅವರು ತಮ್ಮ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಹಿಂದೇಟು ಹಾಕದ ನಾಯಕ ಎಂಬ ಸಂದೇಶ ನೀಡಿದ್ದಾರೆ.

ರಾಜಕೀಯವಾಗಿ ನೋಡಿದರೆ, ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ “ಹಿಂದೂ ವಿರೋಧಿ” ಎಂಬ ಪ್ರಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿತ್ತು. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ “ಸಿದ್ರಾಮುಲ್ಲಾ ಖಾನ್” ಎಂಬ ಟೀಕೆಗಳನ್ನು ಮಾಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿತ್ತು. ಹಿಜಾಬ್, ಹಲಾಲ್ ಕಟ್ ಸೇರಿದಂತೆ ಹಲವು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ತನ್ನ ರಾಜಕೀಯ ಪ್ರಚಾರವನ್ನು ಕಟ್ಟಿಕೊಂಡಿತ್ತು.

ಆದರೆ ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಆ ತಂತ್ರವನ್ನು ಮುಂದುವರಿಸುವುದು ಬಿಜೆಪಿಗೆ ಸುಲಭದ ಕೆಲಸವಾಗಿಲ್ಲ . ಧಾರ್ಮಿಕ ಆಚರಣೆಗಳನ್ನು ಬಹಿರಂಗವಾಗಿ ಪಾಲಿಸುವ, ದೇವಾಲಯಗಳಿಗೆ ಭೇಟಿ ನೀಡುವ, ಹಿಂದೂ ಸಂಪ್ರದಾಯಗಳನ್ನು ಗೌರವಿಸುವ ನಾಯಕನ ವಿರುದ್ಧ “ಹಿಂದೂ ವಿರೋಧಿ” ಎಂಬ ಆರೋಪವನ್ನು ಪರಿಣಾಮಕಾರಿಯಾಗಿ ಬಳಸುವುದು ಅಷ್ಟು ಸುಲಭವಲ್ಲ.

ಒಟ್ಟಾರೆಯಾಗಿ, ಡಿಕೆ ಶಿವಕುಮಾರ್ ಅವರ ಸಿಎಂ ಅವಧಿಯ ಆರಂಭವೇ ಅಭಿವೃದ್ಧಿ ಮತ್ತು ಆಡಳಿತದ ಜೊತೆಗೆ ಅವರ “ಪ್ರೊ-ಹಿಂದೂ” ಇಮೇಜ್ ಕುರಿತ ರಾಜಕೀಯ ಚರ್ಚೆಗೂ ವೇದಿಕೆ ಒದಗಿಸಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Editor Pic

Key words: CM D. K. Shivakumar, has reinforced his, pro-Hindu image

SUMMARY: 

Pro-Hindu DKS: A Challenge for BJP’s Narrative?

New Karnataka CM D. K. Shivakumar has reinforced his pro-Hindu image by taking oath in the name of his revered Gangadhara Ajja and openly following Hindu traditions.

Known for quoting the Bhagavad Gita, Basavanna’s vachanas, and DVG’s Kagga, DKS is often seen wearing religious threads, applying kumkum, observing rituals, and visiting temples. He also took a holy dip at the Kumbh Mela and performed traditional prayers before assuming office.

With DKS projecting a strong Hindu identity, BJP may find it difficult to use its earlier “Hindu vs Congress” narrative that was often targeted at former CM Siddaramaiah.

#DKShivakumar #KarnatakaCM #ProHindu #KarnatakaPolitics #BJP #Congress #DKS

The post “ ಪ್ರೊ-ಹಿಂದೂ”  ಇಮೇಜ್‌ನೊಂದಿಗೆ ಸಿಎಂ ಕುರ್ಚಿಗೆ ಡಿಕೆಶಿ: ಬಿಜೆಪಿ ರಾಜಕೀಯ ಅಸ್ತ್ರಕ್ಕೆ ಮಂಕು.? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കോൺഗ്രസിന് നിരോധനമില്ലാത്ത കാലത്ത് ബ്രിട്ടീഷുകാർ കമ്മ്യൂണിസ്റ്റ് പാർട്ടിയെ നിരോധിച്ചിരുന്നു, ചരിത്രം പറയുമ്പോൾ ഭൂതകാലമോർക്കണം; മറുപടിയുമായി പിണറായി

തിരുവനന്തപുരം: ക്വിറ്റ് ഇന്ത്യ സമരകാലത്തെ കമ്മ്യൂണിസ്റ്റ് പാർട്ടിയുടെ നിലപാടിനെക്കുറിച്ച് സഭയിൽ ഉന്നയിച്ച...

EB ஹார்ட் டிஸ்க் விவகாரம்: “யாரும் யாரையும் காப்பாற்ற முடியாது" – அமைச்சர் நிர்மல் குமார்

சென்னை அண்ணா சாலையில் அமைந்துள்ள தமிழ்நாடு மின்வாரிய தலைமை அலுவலகத்தில் டெண்டர்,...

RCB Player: అభిమానులకు బిగ్‌షాక్.. రిటైర్మెంట్ ప్రకటించిన కీలక ప్లేయర్..

ఆంధ్రప్రదేశ్‌కు చెందిన ప్రముఖ వికెట్ కీపర్ బ్యాటర్ కోన శ్రీకర్ భరత్...

ബിര്‍ണാണി ശങ്കുവിനെ സസ്‌പെന്‍ഡ് ചെയ്‌തെന്ന വാര്‍ത്ത വ്യാജം; ഡി.ജി.പിക്ക് പരാതി നല്‍കി മന്ത്രി ബിന്ദുവിന്റെ ഓഫീസ്

  തിരുവനന്തപുരം: അങ്കണവാടിയില്‍ ബിരിയാണി ചോദിച്ച് സമൂഹമാധ്യമങ്ങളില്‍ തരംഗമായി മാറിയ ‘ശങ്കു’...